ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಬಂಧನಕ್ಕೆ ಸಿಸಿಬಿ ವಿಶೇಷ ತಂಡ ರಚಿಸಿದೆ.
ನಾಪತ್ತೆಯಾಗಿರುವ ಮಾಜಿ ಮೇಯರ್ ಶೋಧಕ್ಕೆ ವಿಶೇಷ ತಂಡ ರಚಿಸಿದ ಸಿಸಿಬಿ - ಬೆಂಗಳೂರು ಗಲಭೆ ಪ್ರಕರಣ
ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಶಂಕೆ ಹಿನ್ನೆಲೆ ಸಿಸಿಬಿ ವಿಶೇಷ ತಂಡ ಯಾವುದೇ ಕ್ಷಣದಲ್ಲಾದರೂ ಸಂಪತ್ ರಾಜ್ ಬಂಧಿಸುವ ಸಾಧ್ಯತೆಯಿದೆ. ಕೊರೊನಾ ಎಂದು ಹೇಳಿ ಚಿಕಿತ್ಸೆ ಪಡೆದಿದ್ದ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲು ಸಿಸಿಬಿ ಮುಂದಾಗಿದ್ದು, ಈ ಸಂಬಂಧ ಈಗಾಗಲೇ ನೋಟಿಸ್ ಜಾರಿ ಮಾಡಿದೆ.
ಮಾಜಿ ಮೇಯರ್ ಸಂಪತ್ ರಾಜ್
ಬಂಧನ ಭೀತಿಯಿಂದ ರಾಜ್ಯವನ್ನೇ ಸಂಪತ್ ರಾಜ್ ತೊರೆದಿರುವ ಅನುಮಾನದ ಬೆನ್ನಲ್ಲೇ ಸಿಸಿಬಿ ವಿಶೇಷ ತಂಡ ರಚಿಸಿ ಶೋಧ ಕಾರ್ಯಕ್ಕೆ ಇಳಿದಿದೆ. ಸಂಪತ್ ರಾಜ್ ಮೊಬೈಲ್ ಸೇರಿ ಕುಟುಂಬಸ್ಥರ ಮೊಬೈಲ್ ಕೂಡ ಸ್ವಿಚ್ ಆಫ್ ಬರುತ್ತಿದೆ ಎನ್ನಲಾಗಿದೆ.