ಕರ್ನಾಟಕ

karnataka

ETV Bharat / state

ಕಂಡವರ ಕಾರಿನಲ್ಲಿ ಶೋಕಿ, ಬಿಟ್ಟಿ ಕಾರು ಪಡೆದು ಓಎಲ್‌ಎಕ್ಸ್‌ನಲ್ಲಿ ಮಾರಿಬಿಡ್ತಿದ್ದ.. ಎಫ್‌ಬಿನಲ್ಲೇ ಕಲರ್‌ ಕಲರ್‌ ಗಾಳ ಹಾಕ್ತಿದ್ದ!

ಸ್ನೇಹಿತನಂತೆ ನಂಬಿಸಿ ಟ್ರಿಪ್ ಹೋಗಲೆಂದು ಕಾರು ಪಡೆದು ಓಎಲ್‌ಎಕ್ಸ್‌ನಲ್ಲಿ ಅದನ್ನ ಮಾರಾಟ ಮಾಡ್ತಿದ್ದ. ಕಾರೂ ಇಲ್ಲ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆದಾಗ ಮೋಸ‌ ಹೋದ ಪ್ರಕರಣ ಬೆಳಕಿಗೆ ಬರ್ತಿದ್ದವು.

ಕಾರು ಕಳ್ಳನನ್ನು ಬಂಧಿಸಿದ ಕಾಮಾಕ್ಷಿಪಾಳ್ಯ ಪೊಲೀಸರು

By

Published : Jun 23, 2019, 1:06 PM IST

ಬೆಂಗಳೂರು :ಟ್ರಿಪ್ ಹೋಗಿ ಬರ್ತೀನಿ ಅಂತಾ ಗೆಳೆಯರ ಬಳಿ ಕಾರ್ ಪಡೆದು ಓಎಲ್ಎಕ್ಸ್‌ನಲ್ಲಿ ಮಾರಾಟ ಮಾಡ್ತಿದ್ದ ವ್ಯಕ್ತಿಯನ್ನ ಬಂಧಿಸುವಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

‌ಕನಕಪುರದ ಚರಣ್ ರಾಜ್ (30) ಬಂಧಿತ ವ್ಯಕ್ತಿ. ಈತ ಐಷಾರಾಮಿ ಕಾರ್ ಹೊಂದಿರುವರನ್ನ ಟಾರ್ಗೆಟ್ ಮಾಡಿ ಫೇಸ್ಬುಕ್ ಸ್ನೇಹಿತರನ್ನಾಗಿ ಮಾಡಿಕೊಳ್ತಿದ್ದ. ಬಳಿಕ ಅವರನ್ನು ಮನೆಗೆ ಕರೆಯಿಸಿ ಕಾಫಿ-ತಿಂಡಿ ಕೊಟ್ಟು ವಿಶ್ವಾಸ ಗಿಟ್ಟಿಸುತ್ತಿದ್ದ.

ಆಮೇಲೆ ಮೂರ್ನಾಲ್ಕು ತಿಂಗಳಲ್ಲಿ ಅವರೊಂದಿಗೆ ಸ್ನೇಹಿತನಂತೆ ನಂಬಿಸಿ ಕಾರ್ ಟ್ರಿಪ್ ಹೋಗೊಕ್ಕೆಂದು ಪಡೆದು ಓಎಲ್‌ಎಕ್ಸ್‌ನಲ್ಲಿ ಅದನ್ನ ಮಾರಾಟ ಮಾಡ್ತಿದ್ದ. ಇತ್ತ ಕಾರು ಇಲ್ಲ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆದಾಗ ಮೋಸ‌ ಹೋದ ವಿಚಾರ ಬೆಳಕಿಗೆ ಬರ್ತಿತ್ತು.

ಸದ್ಯ ರುದ್ರೇಶ್ ಎಂಬುವರು ಈತನನ್ನು ನಂಬಿ ತಮ್ಮ ಕಾರ್ ನೀಡಿದ್ರು. ಆದರೆ, ಕಾರು ಸಮೇತ ಚರಣ್ ಎಸ್ಕೇಪ್ ಆಗಿದ್ದ, ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಬಲೆ ಬೀಸಿದ ಪೊಲೀಸರು ಕೊನೆಗೂ ಆರೋಪಿಯನ್ನ ಬಂಧಿಸಿದ್ದಾರೆ. ಅಷ್ಟೇ ಅಲ್ಲ,12 ಕಾರು ಮತ್ತು 3 ಬೈಕ್‌ನ ಕೂಡ ವಶಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details