ಕರ್ನಾಟಕ

karnataka

ETV Bharat / state

ಸಿದ್ಧಾರ್ಥ್ ನಾಪತ್ತೆ: ಎಸ್​ಎಂಕೆ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಸಿಎಂ ಬಿಎಸ್​​ವೈ - ಎಸ್​ಎಂಕೆ ಮನೆಗೆ ಬಿಎಸ್​ವೈ ಭೇಟಿ

ಕಾಫಿ ಡೇ ಮಾಲೀಕ ಸಿದ್ದಾರ್ಥ್​ ನಾಪತ್ತೆ ಹಿನ್ನೆಲೆ ಡಿ.ಕೆ.ಶಿವಕುಮಾರ್, ಬಿ.ಎಲ್.ಶಂಕರ್, ಸಿಎಂ ಯಡಿಯೂರಪ್ಪ ಸೇರಿದಂತೆ ರಾಜಕೀಯ ಮುಖಂಡರು, ಸಂಬಂಧಿಕರು ಮತ್ತು ಸ್ನೇಹಿತರು ಎಸ್​.ಎಂ.ಕೃಷ್ಣ ನಿವಾಸಕ್ಕೆ ದೌಡಾಯಿಸುತ್ತಿದ್ದಾರೆ.

ಸಿದ್ದಾರ್ಥ್

By

Published : Jul 30, 2019, 9:08 AM IST

Updated : Jul 30, 2019, 12:00 PM IST

ಬೆಂಗಳೂರು: ಮಾಜಿ ಸಿಎಂ ಎಸ್​.ಎಂ.ಕೃಷ್ಣ ಅಳಿಯ ಸಿದ್ದಾರ್ಥ​ ನಾಪತ್ತೆ ಹಿನ್ನೆಲೆ ಡಿ.ಕೆ.ಶಿವಕುಮಾರ್, ಬಿ.ಎಲ್.ಶಂಕರ್, ಸಿಎಂ ಯಡಿಯೂರಪ್ಪ ಸೇರಿದಂತೆ ರಾಜಕೀಯ ಮುಖಂಡರು, ಸಂಬಂಧಿಕರು ಮತ್ತು ಸ್ನೇಹಿತರು ಎಸ್​.ಎಂ.ಕೃಷ್ಣ ನಿವಾಸಕ್ಕೆ ದೌಡಾಯಿಸುತ್ತಿದ್ದಾರೆ.

ಸದಾಶಿವನಗರದ ಎಸ್ಎಂಕೆ ನಿವಾಸಕ್ಕೆ ಸಿಎಂ ಬಿಎಸ್​​ವೈ ಭೇಟಿ ನೀಡಿದರು. ಸಿದ್ಧಾರ್ಥ ನಾಪತ್ತೆಯಾದ ಕೂಡಲೇ ನಿನ್ನೆಯೇ ಮಾಹಿತಿ ಪಡೆದಿದ್ದೇನೆ. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕ್ಷಣ ಕ್ಷಣದ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ. ಸಿದ್ದಾರ್ಥನ ಪತ್ತೆ ಮಾಡುವಂತೆ ಮಂಗಳೂರು ಕಮಿಷನರ್ ಹಾಗೂ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಿದ್ದಾರ್ಥ ಕುಟುಂಬದವರಿಗೆ ಯಡಿಯೂರಪ್ಪ ಧೈರ್ಯ ತುಂಬಿದರು.

ಎಸ್​ಎಂಕೆ ನಿವಾಸಕ್ಕೆ ಗಣ್ಯರ ಭೇಟಿ

ಬಿಗಿ ಪೊಲೀಸ್​ ಬಂದೋಬಸ್ತ್​ :

ಎಸ್​.ಎಂ.ಕೃಷ್ಣ ನಿವಾಸಕ್ಕೆ ರಾಜಕೀಯ ನಾಯಕರು, ಸ್ನೇಹಿತರು, ಸಂಬಂಧಿಕರು ಆಗಮಿಸುತ್ತಿರುವ ಕಾರಣ ಮನೆಯ ಸುತ್ತ ಬಿಗಿ ಪೊಲೀಸ್​ ಬಂದೋಬಸ್ತ್​ ನಿಯೋಜಿಸಲಾಗಿದೆ. ಡಿಜಿಪಿ ನೀಲಮಣಿ ಎನ್. ರಾಜು ಕೂಡ ಕ್ಷಣ ಕ್ಷಣದ ಮಾಹಿತಿ ಕಲೆಹಾಕುತ್ತಿದ್ದಾರೆ. ರಾಜ್ಯ ಗುಪ್ತಚರ ಇಲಾಖೆ ಐಜಿಪಿ ದಯಾನಂದ ಸಹ ಎಸ್ಎಂಕೆ ನಿವಾಸಕ್ಕೆ ಭೇಟಿ ನೀಡಿದರು.

ಶಾಸಕ ಅರಗ ಜ್ಞಾನೇಂದ್ರ ಭೇಟಿ:

ಸಿದ್ಧಾರ್ಥ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಒಂದು ಕಿ.ಮೀ. ಉದ್ದದ ಮಂಗಳೂರಿನ ಉಳ್ಳಾಲ ಸಮೀಪದ ಬ್ರಿಡ್ಜ್ ಬಳಿ ಕಾಣೆಯಾಗಿದ್ದಾರೆ. ಮೈಸೂರಿನಲ್ಲಿ ಸಿದ್ದಾರ್ಥ ಅವರ ತಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಶಾಸಕ ಅರಗ ಜ್ಞಾನೇಂದ್ರ ತಿಳಿಸಿದರು.

Last Updated : Jul 30, 2019, 12:00 PM IST

ABOUT THE AUTHOR

...view details