ಕರ್ನಾಟಕ

karnataka

ETV Bharat / state

ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಬಿಎಸ್​ವೈ - B.S.Yadiyurappa

ತಿರುಪತಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮುಂಜಾನೆ ತಿಮ್ಮಪ್ಪನ ದರ್ಶನ ಮಾಡಿ ಮೊದಲ ಪೂಜೆ ಸಲ್ಲಿಸಿದರು.

ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಬಿಎಸ್​ವೈ

By

Published : Aug 31, 2019, 8:45 AM IST

ಬೆಂಗಳೂರು: ತಿರುಪತಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮುಂಜಾನೆ ತಿಮ್ಮಪ್ಪನ ದರ್ಶನ ಮಾಡಿ ಮೊದಲ ಪೂಜೆ ಸಲ್ಲಿಸಿದರು.

ತಿರುಪತಿಗೆ ದರ್ಶನ ಪಡೆದ ಮುಖ್ಯಮಂತ್ರಿ ಬಿಎಸ್​ವೈ

ಅಮವಾಸ್ಯೆ ಪ್ರಯುಕ್ತ ಕಳೆದ ರಾತ್ರಿ ನಗರದ‌ ಹೆಚ್.ಎ.ಎಲ್​​ ವಿಮಾನ ನಿಲ್ದಾಣದ ಮೂಲಕ ತಿರುಪತಿಗೆ ತೆರಳಿದ್ದ ಸಿಎಂ ಬಿಎಸ್​ವೈ ಇಂದು ಮುಂಜಾನೆ ನಡೆದ ತಿರುಪತಿ ತಿಮ್ಮಪ್ಪನ ಮೊದಲ ಪೂಜೆಯಲ್ಲಿ ಭಾಗಿಯಾಗಿ ತಿಮ್ಮಪ್ಪನ ದರ್ಶನ ಮಾಡಿದರು. ಈ ವೇಳೆ ಸಿಎಂಗೆ ನೂತನ ರಾಜಕೀಯ ಕಾರ್ಯದರ್ಶಿ ಆಗಿ ನೇಮಕಗೊಂಡಿರುವ ಎಸ್.ಆರ್.ವಿಶ್ವನಾಥ್ ಸಾಥ್​ ನೀಡಿದರು.

ತಿಮ್ಮಪ್ಪನ ದರ್ಶನದ ಬಳಿಕ ಬೆಂಗಳೂರಿಗೆ ಸಿಎಂ ವಾಪಸ್​ ಬರುತ್ತಿದ್ದಾರೆ. ಹೆಚ್.ಎ.ಎಲ್ ವಿಮಾನ ನಿಲ್ದಾಣ ತಲುಪಿದ ಬಳಿಕ ಅಲ್ಲಿಂದ ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳಿಗೆ ತೆರಳಲಿದ್ದಾರೆ. ಎರಡು ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ.

ABOUT THE AUTHOR

...view details