ಕರ್ನಾಟಕ

karnataka

ETV Bharat / state

ಅದಮ್ಯ ಚೇತನದ ಕೊಡುಗೆ ಶ್ಲಾಘಿಸಿ ತೇಜಸ್ವಿನಿ ಅನಂತ್‌ಕುಮಾರ್‌ಗೆ ಸಿಎಂ ಬಿಎಸ್‌ವೈ ಪತ್ರ..

ಅದಮ್ಯ ಚೇತನ ಹಲವು ವರ್ಷಗಳಿಂದ ಸಮಾಜಕ್ಕೆ ಮಹತ್ತರ ಸೇವೆ ಮಾಡುತ್ತಿದೆ. ಹಸಿದವರಿಗೆ ಆಹಾರ ನೀಡುವ ತನ್ನ ಸೇವೆಯನ್ನು ಲಾಕ್‌ಡೌನ್ ವೇಳೆಯೂ ಮುಂದುವರೆಸಿದೆ. ಈ ರೀತಿಯ ಎನ್‌ಜಿಒಗಳು, ಸರ್ಕಾರದೊಂದಿಗೆ ಕೈಜೋಡಿಸುವುದರಿಂದ, ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಿರುವವರನ್ನು ತಲುಪುವುದು ಸುಲಭ ಎಂದು ಪತ್ರ ಬರೆದಿದ್ದಾರೆ.

ಬಿಎಸ್​ ಯಡಿಯೂರಪ್ಪ
ಬಿಎಸ್​ ಯಡಿಯೂರಪ್ಪ

By

Published : Apr 12, 2020, 2:09 PM IST

ಬೆಂಗಳೂರು :ಸುಮಾರು 10 ದಿನಗಳಿಂದ ಅದಮ್ಯ ಚೇತನ ಸಂಸ್ಥೆ ರಾಜ್ಯ ಸರ್ಕಾರದ ಜೊತೆಗೂಡಿ ಕೈಗೊಂಡಿರುವ ದಾಸೋಹ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶ್ಲಾಘಿಸಿದ್ದಾರೆ. ಈ ಬಗ್ಗೆ ಅದಮ್ಯ ಚೇತನ ಸಂಸ್ಥೆ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತ್‌ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ಅದಮ್ಯ ಚೇತನ ಹಲವು ವರ್ಷಗಳಿಂದ ಸಮಾಜಕ್ಕೆ ಮಹತ್ತರ ಸೇವೆ ಮಾಡುತ್ತಿದೆ. ಹಸಿದವರಿಗೆ ಆಹಾರ ನೀಡುವ ತನ್ನ ಸೇವೆಯನ್ನು ಲಾಕ್‌ಡೌನ್ ವೇಳೆಯೂ ಮುಂದುವರೆಸಿದೆ. ಈ ರೀತಿಯ ಎನ್‌ಜಿಒಗಳು, ಸರ್ಕಾರದೊಂದಿಗೆ ಕೈಜೋಡಿಸುವುದರಿಂದ, ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಿರುವವರನ್ನು ತಲುಪುವುದು ಸುಲಭ ಎಂದು ಪತ್ರ ಬರೆದಿದ್ದಾರೆ.

ತೇಜಸ್ವಿನಿ ಅನಂತ್‌ಕುಮಾರ್‌ಗೆ ಸಿಎಂ ಬರೆದ ಪತ್ರ
ಆಹಾರವನ್ನು ಬೇಯಿಸಲು ಸಿದ್ಧವಾಗಿಸುವ ನಿಮ್ಮ ಉಪಕ್ರಮ ಪ್ರಶಂಸನೀಯ, ನನ್ನ ಪ್ರೀತಿಯ ಸ್ನೇಹಿತ ದಿ. ಅನಂತ್‌ಕುಮಾರ್ ಅವರ ಪರಂಪರೆಯನ್ನು ನೀವು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಈ ಸೇವಾ ಕಾರ್ಯ ಮುಂದುವರೆಸಲು ಅಗತ್ಯ ಬೆಂಬಲ, ಸಹಕಾರ ನೀಡುತ್ತೇವೆ ಮತ್ತು ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇವೆ ಎಂದು ಸಿಎಂ ಪತ್ರದ ಮೂಲಕ ತಿಳಿಸಿದ್ದಾರೆ.

ABOUT THE AUTHOR

...view details