ಬೆಂಗಳೂರು:ದೇಶ ಲಾಕ್ಡೌನ್ ಸ್ಥಿತಿಯಲ್ಲಿದೆ. ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಲುಪಿಸಲಾಗದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಯಡಿಯೂರಪ್ಪ ಅನ್ನದಾತರಿಗೆ ಅಭಯ ನೀಡಿದ್ದಾರೆ.
ರೈಲುಗಳ ಮೂಲಕ ಹಣ್ಣು-ತರಕಾರಿ ರವಾನಿಸಲು ಚಿಂತನೆ:
ಹಾಪ್ಕಾಮ್ಸ್ಗಳನ್ನು ಬೆಳಗ್ಗೆಯಿಂದ-ರಾತ್ರಿಯವರೆಗೆ ತೆರೆಯಲು ಈಗಾಗಲೇ ಸೂಚನೆ ನೀಡಲಾಗಿದೆ. ರೈಲುಗಳ ಮೂಲಕ ರೈತರು ಹಣ್ಣು-ತರಕಾರಿ ರವಾನಿಸುವ ಕುರಿತು ಚಿಂತನೆ ನಡೆಸಿದ್ದಾಗಿ ಸಿಎಂ ತಿಳಿಸಿದರು.
ರೇಷ್ಮೆ ಮಾರುಕಟ್ಟೆ ನಾಳೆಯಿಂದ ಓಪನ್:
ರೇಷ್ಮೆ ಮಾರುಕಟ್ಟೆ ನಾಳೆಯಿಂದಲೇ ಓಪನ್ ಆಗಲಿದೆ. ಮಾರುಕಟ್ಟೆಗಳಿಗೆ ರೈತರೇ ತೆರಳಿ ತಮ್ಮ ಬೆಳೆಗಳನ್ನು ಮಾರಾಟ ಮಾಡಬಹುದು.
ಹಾಪ್ಕಾಮ್ಸ್ನಲ್ಲಿ ಮೊಟ್ಟೆ ಮಾರಾಟಕ್ಕೆ ಅವಕಾಶ:
ಮೊಟ್ಟೆ,ಕೋಳಿ ತಿನ್ನುವುದರಿಂದ ಯಾರಿಗೂ ಯಾವುದೇ ಸಮಸ್ಯೆ ಇಲ್ಲ. ಹಾಪ್ಕಾಮ್ಸ್ನಲ್ಲಿ ಮೊಟ್ಟೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು.