ಬೆಂಗಳೂರು: ಇಂದು ನಾಡಿನಾದ್ಯಂತ ಸೋದರ ಬಾಂಧವ್ಯ ಬೆಸೆಯುವ ರಕ್ಷಾಬಂಧನದ ಸಂಭ್ರಮ ಮಾಡಿದೆ. ಶ್ರಾವಣ ಮಾಸದ ಶುದ್ಧ ಪೌರ್ಣಿಮೆಯ ದಿನ ಈ ಹಬ್ಬವನ್ನ ಆಚರಿಸಲಾಗುತ್ತೆ. ಭಾರತೀಯರ ಪಾಲಿಗೆ ಇದು ಪವಿತ್ರವಾದ ಹಬ್ಬ. ಈ ರಾಖಿ ಹಬ್ಬ ಸಹೋದರತ್ವದ ಪ್ರೀತಿಯ ಸಂಕೇತವಾಗಿದೆ. ತಂಗಿಗೆ ಸಹೋದರನ ಪ್ರೀತಿಯನ್ನ ದುಪ್ಪಟ್ಟು ಹೆಚ್ಚು ಮಾಡುವ ಹಬ್ಬವಿದು.
ಪ್ರತಿವರ್ಷ ರಾಖಿ ಹಬ್ಬ ಬಂತು ಅಂದ್ರೆ ಅಣ್ಣ ತಂಗಿಯರು ಅದ್ದೂರಿಯಾಗಿ ಆಚರಿಸುತ್ತಿದ್ದರು. ಬೇರೆ ಊರಲ್ಲಿ ವಾಸವಾಗಿರುತ್ತಿದ್ದ ಅಣ್ಣ ತಂಗಿಯರು ಈ ಹಬ್ಬವನ್ನ ಆಚರಿಸಲು ಸೇರುತ್ತಿದ್ದರು. ಆದ್ರೆ, ಈ ವರ್ಷ ಹಬ್ಬದ ವಾತಾವರಣ ಕೊಂಚ ಮಟ್ಟಿಗೆ ಕಡಿಮೆಯಾಗಿತ್ತು. ಕೊರೊನಾ ಇದ್ದ ಕಾರಣ ಊರಿಂದ ಊರಿಗೆ ಪ್ರಯಾಣಿಸಲಾಗದೇ ತಂಗಿಯರು ಪೋಸ್ಟ್ ಮೂಲಕ ತಮ್ಮ ಅಣ್ಣಂದಿರಿಗೆ ರಾಖಿ ಕಳಿಸಿದ್ದಾರೆ. ಮನೆಯಲ್ಲಿಯೇ ಇರುವ ಅಣ್ಣ-ತಂಗಿಯರು ಸರಳವಾಗಿ ರಕ್ಷಾ ಬಂಧನ ಹಬ್ಬ ಆಚರಿಸಿದ್ದಾರೆ.
ಈ ಬಾರಿ ಮಾರುಕಟ್ಟೆಗಳಲ್ಲಿ, ಫ್ಯಾನ್ಸಿ ಸ್ಟೋರ್‌ನಲ್ಲಿ ಬಗೆ ಬಗೆಯ ರಾಖಿಗಳು ಮಾರಾಟವಾಗುತ್ತಿವೆ.. ಕುಂದನ್, ಸ್ಟೋನ್, ಜುಮಕಿ, ದಾರದ ರಾಖಿ, ಮಣಿ, ಮುತ್ತಿನ ರಾಖಿಗಳು ಸೇರಿದಂತೆ ಮಕ್ಕಳಿಗಾಗಿ ಸ್ಪೈಡರ್ ಮ್ಯಾನ್ ರಾಖಿ , ಆ್ಯಂಗ್ರಿ ಬರ್ಡ್ಸ್ ರಾಖಿ, ಛೋಟಾ ಭೀಮ್, ಸೂಪರ್ ಮ್ಯಾನ್ ರಾಖಿಗಳು ಲಭ್ಯವಾಗುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿವೆ.