ಬೆಂಗಳೂರು: ಮಹಿಳೆಯೊಬ್ಬರು ನಗರದ ಹೆಬ್ಬಾಳದ ಎಸ್ಟೀಮ್ ಮಾಲ್ ಬಸ್ಸ್ಟಾಪ್(Esteem Mall Bus Stop )ನಲ್ಲಿ 6.31 ಲಕ್ಷ ರೂ ಮೌಲ್ಯದ ಚಿನ್ನಾಭರಣಮತ್ತಿತರ ವಸ್ತುಗಳಿದ್ದ ಬ್ಯಾಗನ್ನು ಕಳೆದುಕೊಂಡಿದ್ದರು. ಆದರೆ ಬಿಎಂಟಿಸಿ ಸಿಬ್ಬಂದಿ (BMTC staff) ಪ್ರಾಮಾಣಿಕತೆಯಿಂದ ಆ ಬ್ಯಾಗ್ ಮತ್ತೆ ಮಹಿಳೆ ಕೈ ಸೇರಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (Bangalore Metropolitan Transport Corporation ) ಸಿಬ್ಬಂದಿ ಸಂಸ್ಥೆಯ ಅಧಿಕಾರಿಗಳ ಮೂಲಕ ಬ್ಯಾಗನ್ನು ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ರಾಜೇಶ್ವರಿ ಎಂಬುವರು ಬೆಳಗ್ಗೆ ಹೆಬ್ಬಾಳದ ಎಸ್ಟೀಮ್ ಮಾಲ್ ಬಳಿಯ ಬಸ್ಸ್ಟಾಪ್ ನಲ್ಲಿ ಚಿನ್ನಾಭರಣಸೇರಿದಂತೆ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ಕಳೆದು ಕೊಂಡಿದ್ದರು. ಈ ಬ್ಯಾಗ್ ಬಿಎಂಟಿಸಿ ಸಂಚಾರಿ ನಿಯಂತ್ರಕರಾದ ಪ್ರಕಾಶ್ ಹಾಗೂ ಶಮೀಸಾಬ್ ಕೈಗೆ ಸಿಕ್ಕಿತ್ತು.