ಕರ್ನಾಟಕ

karnataka

ETV Bharat / state

ಬೆಂಕಿಗಾಹುತಿಯಾಗುವ ಬಿಎಂಟಿಸಿ ಬಸ್‌ಗಳು: ಪ್ರಯಾಣಿಕರಿಗೆ ಆತಂಕ - BMTC Buses burned in Bengaluru

ಮೂರು ತಿಂಗಳ ಅಂತರದಲ್ಲೇ 3 ಬಿಎಂಟಿಸಿ ಬಸ್​ಗಳು ಸುಟ್ಟು ಹೋಗಿವೆ. ಶಾರ್ಟ್ ಸರ್ಕ್ಯೂಟ್​ನಿಂದ ಸಾಕಷ್ಟು ಬಾರಿ ಎಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿರುವ ಸಾರಿಗೆ ನೌಕರರು, ಸಾರ್ವಜನಿಕರು ಬೇಸರ ಹೊರಹಾಕಿದ್ದಾರೆ.

ಬೆಂಕಿಗಾಹುತಿಯಾದ ಬಿಎಂಟಿಸಿ ಬಸ್​ಗಳು
ಬೆಂಕಿಗಾಹುತಿಯಾದ ಬಿಎಂಟಿಸಿ ಬಸ್​ಗಳು

By

Published : Apr 10, 2022, 10:48 PM IST

ಬೆಂಗಳೂರು:ನಗರದಲ್ಲಿ ಬಿಎಂಟಿಸಿ ಬಸ್​ಗಳು ಹೊತ್ತಿ ಉರಿಯುತ್ತಿರುವ ಘಟನೆಗಳು ಸಾಕಷ್ಟು ನಡೆಯುತ್ತಿವೆ. ಮೂರು ತಿಂಗಳಲ್ಲಿ ಮೂರು ಬಸ್‌ಗಳು ಸುಟ್ಟು ಹೋಗಿವೆ. ನಿತ್ಯ ಲಕ್ಷಾಂತರ ಪ್ರಯಾಣಿಕರು ಸಂಚರಿಸುವ ಈ ಬಸ್‌ಗಳು ಎಷ್ಟು ಸುರಕ್ಷಿತ? ಎಂಬ ಅನುಮಾನ ಮೂಡಿದೆ.


ಅಶೋಕ್ ಲೇಲ್ಯಾಂಡ್ ಕಂಪನಿಯಲ್ಲಿ ಬಸ್​ಗಳ ವಿನ್ಯಾಸದಲ್ಲಿ ಲೋಪದೋಷಗಳಿವೆ. ನಗರದ 48 ಡಿಪೋಗಳಲ್ಲಿ ಬಸ್ ನಿರ್ವಹಣೆಯಲ್ಲಿಯೂ ವೈಫಲ್ಯವಾಗಿದೆ. ಬಸ್ ಡಿಪೋಗಳಿಂದ ಹೊರಬರುವ ಮುನ್ನ ಸರಿಯಾದ ಪರಿಶೀಲನೆ ನಡೆಸುತ್ತಿಲ್ಲ. ಕಳಪೆ ಗುಣಮಟ್ಟದ ಸ್ಪೇರ್ ಪಾರ್ಟ್ಸ್ ಖರೀದಿಸಲಾಗುತ್ತಿದೆ. ಬಿಸಿಲಿನ ಧಗೆಯಿಂದ ಇಂಜಿನ್​ನಲ್ಲಿ ತಾಂತ್ರಿಕ ದೋಷ ಕಂಡುಬರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮೂರು ತಿಂಗಳ ಅಂತರದಲ್ಲೇ 3 ಬಿಎಂಟಿಸಿ ಬಸ್​ಗಳು ಸುಟ್ಟು ಹೋಗಿವೆ. ಶಾರ್ಟ್ ಸರ್ಕ್ಯೂಟ್​ನಿಂದ ಸಾಕಷ್ಟು ಬಾರಿ ಎಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿರುವ ಸಾರಿಗೆ ನೌಕರರು ನಿಗಮದ ನಿರ್ಲಕ್ಷ್ಯದ ವಿರುದ್ಧ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ:ಯಾವುದೇ ವೃತ್ತಿ ಬಗ್ಗೆ ಯಾರೂ ಕೇವಲವಾಗಿ ಮಾತ್ನಾಡಬಾರದು : ಸಚಿವ ಡಾ. ಸುಧಾಕರ್

ABOUT THE AUTHOR

...view details