ಕರ್ನಾಟಕ

karnataka

By

Published : Oct 19, 2019, 8:28 PM IST

Updated : Oct 19, 2019, 8:35 PM IST

ETV Bharat / state

BMTC ಬಸ್​ ಚಾಲಕ, ಸಂಚಾರಿ ಪೊಲೀಸ್ ನಡುವೆ ನಾನಾ- ನೀನಾ ಫೈಟ್​:  VIDEO ವೈರಲ್​

ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಬಿಎಂಟಿಸಿ ಚಾಲಕ ಹಾಗೂ ಟ್ರಾಫಿಕ್ ಪೊಲೀಸ್ ನಡುವೆ ಮಾತಿನ ಜಗಳ ನಡೆದಿದೆ. ಸಂಚಾರಿ ಪೇದೆ ಬಸ್​ ಸ್ಟೇರಿಂಗ್​ ಎಳೆಯಲು ಮುಂದಾದಾಗ ಇಬ್ಬರು ಬೀದಿ ರಂಪಾಟಕ್ಕೆ ಇಳಿದಿದ್ದಾರೆ. ಇದರಿಂದ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.

ಬಿಎಮ್​ಟಿಸಿ ಬಸ್​ ಚಾಲಕ, ಸಂಚಾರಿ ಪೊಲೀಸ್ ಜಗಳ

ಬೆಂಗಳೂರು : ಬಸ್ ಪಾರ್ಕಿಂಗ್ ವಿಚಾರವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಬಿಎಂಟಿಸಿ ಚಾಲಕ ಹಾಗೂ ಟ್ರಾಫಿಕ್ ಪೊಲೀಸ್ ನಡುವೆ ಮಾತಿನ ಜಗಳ ನಡೆದಿದೆ. ಸಂಚಾರಿ ಪೇದೆ ಬಸ್​ ಸ್ಟೇರಿಂಗ್​ ಎಳೆಯಲು ಮುಂದಾದಾಗ ಇಬ್ಬರು ಬೀದಿ ರಂಪಾಟಕ್ಕೆ ಇಳಿದಿದ್ದಾರೆ. ಇದರಿಂದ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.

ಬಿಎಮ್​ಟಿಸಿ ಬಸ್​ ಚಾಲಕ, ಸಂಚಾರಿ ಪೊಲೀಸ್ ಜಗಳ

ಬಸ್​​​ ಸ್ಟೇರಿಂಗ್ ಹಿಡಿದು ಎಳೆದಾಡಿದ್ದರಿಂದ ಟ್ರಾಫಿಕ್ ಪೊಲೀಸ್ ಗೆ ಸ್ಟೇರಿಂಗ್ ಮುಟ್ಟಬೇಡಿ ಅಂತಾ ಡ್ರೈವರ್ ಹೇಳಿದ್ದಾನೆ. ಈ ನಡುವೆ ಪೊಲೀಸ್ ಪೇದೆ, ಡ್ರೈವರ್ ಫೋನ್ ಕಿತ್ಕೊಂಡು, ಕೊನೆಗೆ ಬಸ್ ಕೀಯನ್ನೇ ಎತ್ತಿಕೊಂಡು ಹೋಗಿದ್ದಾರೆ.‌ ಇವರ ಮಾತಿನ ಗಲಾಟೆ‌‌ ನಡುವೆಯೇ ಪೇದೆಯ ಜೇಬಿನಿಂದ ತನ್ನ ಫೋನ್ ಕಿತ್ತುಕೊಳ್ಳಲು ಡ್ರೈವರ್ ಮುಂದಾಗಿದ್ದಾನೆ.

ಒಟ್ಟಾರೆ ನಾನಾ, ನೀನಾ ಎಂಬ ಇವರಿಬ್ಬರ ಮಾತಿನ ಗಲಾಟೆಯಲ್ಲಿ ಪರದಾಡಿದ್ದು ಮಾತ್ರ ಸಾರ್ವಜನಿಕರು. ‌ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೂ ಕಾರಣವಾಗಿದೆ.

Last Updated : Oct 19, 2019, 8:35 PM IST

ABOUT THE AUTHOR

...view details