ಕರ್ನಾಟಕ

karnataka

By

Published : Feb 2, 2021, 3:23 PM IST

ETV Bharat / state

ಜ್ಯೋತಿಷಿ ಆನಂದ್ ಗುರೂಜಿಗೆ ಬ್ಲ್ಯಾಕ್‌ಮೇಲ್.. ₹50 ಲಕ್ಷಕ್ಕೆ ಡಿಮ್ಯಾಂಡ್​ ಮಾಡಿದ ಆರೋಪ..

ದೂರಿನಲ್ಲಿ ₹50 ಲಕ್ಷ ಹಣ ಕೊಟ್ಟರೆ ಸುಮ್ಮನಾಗುತ್ತೇವೆ, ಇಲ್ಲದೆ ಹೋದ್ರೆ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ವೈರಲ್ ಮಾಡುವುದಾಗಿ ಆನಂದ್ ಗುರೂಜಿಗೆ ಎಚ್ಚರಿಕೆ ನೀಡಿದ್ದರು. ಜೊತೆಗೆ ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಉಲ್ಲೇಖಿಸಲಾಗಿದೆ..

Anand Guruji
ಆನಂದ್ ಗುರೂಜಿ

ಬೆಂಗಳೂರು :ಖ್ಯಾತ ಜ್ಯೋತಿಷಿ ಆನಂದ್ ಗುರೂಜಿಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಕೇಳಿ ಬಂದಿದೆ. ಬ್ಲ್ಯಾಕ್‌ಮೇಲ್ ಮಾಡಿದವರ ವಿರುದ್ಧ ಆನಂದ್ ಗುರೂಜಿ ಆಪ್ತ ಗಿರಿನಗರ ಠಾಣೆಗೆ ದೂರು ನೀಡಿದ್ದಾರೆ.

ಆನಂದ್ ಗುರೂಜಿ ಆಪ್ತ ಬಿ ಆರ್‌ ನಾಗರಾಜ್ ನೀಡಿದ ದೂರಿನ ಮೇರೆಗೆ ಕೃಷ್ಣಮೂರ್ತಿ, ವೆಂಕಟೇಶ್ ಹಾಗೂ ವೇಲು ಎಂಬುವರ ವಿರುದ್ಧ ಗಿರಿನಗರ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಂಗ್ರೆಸ್ ಮುಖಂಡ ಸುಧೀಂದ್ರ ಎಂಬುವರಿಗೆ ಕೃಷ್ಣಮೂರ್ತಿ ಅವರು ಸಿಯಾಜ್ ಕಾರು ಹಾಗೂ‌ ಓರ್ವ ಡ್ರೈವರ್ ನಿಯೋಜನೆ ಮಾಡಿದ್ದು, ಇದಕ್ಕೆ ಪ್ರತಿಯಾಗಿ ತಿಂಗಳಿಗೆ ಹಣ ಪಡೆದುಕೊಳ್ಳುತ್ತಿದ್ದರು‌.

ಕೆಲ ತಿಂಗಳಿಂದ‌ ಸುಧೀಂದ್ರ ಹಣ ನೀಡಿರಲಿಲ್ಲ. ಪ್ರಶ್ನಿಸಲು ಹೋಗಿದ್ದಕ್ಕೆ ಸುಧೀಂದ್ರ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದಡಿ ಗಿರಿನಗರ ಪೊಲೀಸ್ ಠಾಣೆಯಲ್ಲಿ‌ ಕೃಷ್ಣಮೂರ್ತಿ ಆರೋಪಿ ವಿರುದ್ಧ ನೀಡಿದ ಅನ್ವಯ ಗಿರಿನಗರ ಠಾಣೆಯಲ್ಲಿ ಗಂಭೀರ ಸ್ವರೂಪವಲ್ಲದ ಅಪರಾಧ (ಎನ್​ಸಿಆರ್) ದೂರು ದಾಖಲಾಗಿತ್ತು.

ವೈಯಕ್ತಿಕ ವಿಚಾರಗಳನ್ನ ಇಟ್ಟುಕೊಂಡು ₹50 ಲಕ್ಷಕ್ಕೆ ಡಿಮ್ಯಾಂಡ್

ಆರೋಪಿಗಳು ಆನಂದ್ ಗುರೂಜಿ ಅವರ ವೈಯಕ್ತಿಕ ವಿಚಾರಗಳನ್ನ ಇಟ್ಟುಕೊಂಡು ₹50 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರಂತೆ. ಜೊತೆಗೆ ಆನಂದ್ ಗುರೂಜಿ ಹಾಗೂ ಅವರ ಸ್ನೇಹಿತ ಸುಧೀಂದ್ರ ಎಂಬುವರಿಗೆ ಕೊಲೆ ಬೆದರಿಕೆ ಹಾಕಿದ್ದರಂತೆ.

ಈ ಹಿನ್ನೆಲೆ ಗುರೂಜಿ ಆಪ್ತ ನಾಗರಾಜ್ ಬಿ.ಆರ್ ಎಂಬುವರು ಕೃಷ್ಣಮೂರ್ತಿ, ವೆಂಕಟೇಶ್, ವೇಲು ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನಲ್ಲಿ 50 ಲಕ್ಷ ಹಣ ಕೊಟ್ಟರೆ ಸುಮ್ಮನಾಗುತ್ತೇವೆ, ಇಲ್ಲದೆ ಹೋದ್ರೆ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ವೈರಲ್ ಮಾಡುವುದಾಗಿ ಆನಂದ್ ಗುರೂಜಿಗೆ ಎಚ್ಚರಿಕೆ ನೀಡಿದ್ದರು. ಜೊತೆಗೆ ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಉಲ್ಲೇಖಿಸಲಾಗಿದೆ.

ತಮ್ಮ ವಿರುದ್ಧ ದೂರು ನೀಡಿದ್ದರಿಂದ ಸಿಟ್ಟಿಗೆದ್ದ ಆರೋಪಿಗಳು ವಾಟ್ಸ್ಆ್ಯಪ್‌ ಗ್ರೂಪ್​ನಲ್ಲಿ ಗುರೂಜಿ ಹಾಗೂ ಸುಧೀಂದ್ರ ಕುರಿತು ಮಾನಹಾನಿ ಸಂದೇಶ ರವಾನಿಸಿ ಈಗಲಾದ್ರೂ ಕನಿಷ್ಠ ₹26 ಲಕ್ಷ ಹಣ ಕೊಡಿ, ಇಲ್ಲವಾದ್ರೆ ಬೇರೆ ವೈಯಕ್ತಿಕ ವಿಷಯಗಳನ್ನ ಹಂತ ಹಂತವಾಗಿ ವೈರಲ್ ಮಾಡುವುದಾಗಿ ಹೇಳಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ABOUT THE AUTHOR

...view details