ಬೆಂಗಳೂರು:ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸದ್ದು ಮಾಡುತ್ತಿದ್ದು, ಹಾಸನ ಮೂಲದ ಏಳು ವರ್ಷದ ಬಾಲಕನಿಗೆ ಕಪ್ಪು ಮಾರಿ ವಕ್ಕರಿಸಿದ್ದರಿಂದ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಹಿಂದೆ ಬಳ್ಳಾರಿಯ 13 ವರ್ಷದ ಬಾಲಕಿಗೆ ಹಾಗೂ ಚಿತ್ರದುರ್ಗದ 11 ವರ್ಷದ ಬಾಲಕನಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿತ್ತು. ಮೊದಲು ಬಾಲಕನ ತಾಯಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಬಳಿಕ ಮಗನಿಗೂ ಹರಡಿದೆ.