ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಪಕ್ಷ ತ್ಯಜಿಸುವವರಿಗಾಗಿ ಹೊಸ ಅಭಿಯಾನ ಘೋಷಿಸುವಿರಾ: ಬಿಜೆಪಿ ವ್ಯಂಗ್ಯ

ನಿಮ್ಮ ಭಾರತ್ ಜೋಡೋ ಅಭಿಯಾನ ಮತ್ತು ಸದಸ್ಯತ್ವ ಅಭಿಯಾನ ಹೇಗಿದೆ? ಅಭಿಯಾನದ ಮೂಲಕ ಕಾಂಗ್ರೆಸ್ ಸೇರಿದವರ ಸಂಖ್ಯೆ ಹೆಚ್ಚೋ ಅಥವಾ ಕಾಂಗ್ರೆಸ್ ತ್ಯಜಿಸಲಿರುವವರ ಸಂಖ್ಯೆ ಹೆಚ್ಚೋ? ಎಂದು ಬಿಜೆಪಿ ಟೀಕಿಸಿದೆ.

bjp-tweet-against-dk-shivakumar-and-congress
ಕಾಂಗ್ರೆಸ್ ಪಕ್ಷ ತ್ಯಜಿಸುವವರಿಗಾಗಿ ಹೊಸ ಅಭಿಯಾನ ಘೋಷಿಸುವಿರಾ: ಬಿಜೆಪಿ ವ್ಯಂಗ್ಯ

By

Published : Jun 1, 2022, 1:32 PM IST

ಬೆಂಗಳೂರು:ಡಿಜಿಟಲ್ ಅಭಿಯಾನದಲ್ಲಿ ಲಕ್ಷ ಲಕ್ಷ ಸದಸ್ಯರು ಸೇರ್ಪಡೆಯಾಗಿದ್ದಾರೆ ಎಂದು ಅಂಕಿ - ಸಂಖ್ಯೆ ಬಿಡುಗಡೆ ಮಾಡಿದ ಡಿಕೆ ಶಿವಕುಮಾರ್ ಅವರೇ, ಈಗ ಅನೇಕರು ಪಕ್ಷ ತ್ಯಜಿಸುತ್ತಿದ್ದು, ನಾಳೆ ನಡೆಯಲಿರುವ ರಾಜ್ಯ ಚಿಂತನ ಶಿಬಿರದಲ್ಲಿ ಮುಂದೆ ಪಕ್ಷ ತ್ಯಜಿಸುವವರಿಗಾಗಿ ಹೊಸ ಅಭಿಯಾನ ಘೋಷಿಸುವಿರಾ? ಎಂದು ಬಿಜೆಪಿ ವ್ಯಂಗ್ಯವಾಡಿದೆ.

ನಿಮ್ಮ ಭಾರತ್ ಜೋಡೋ ಅಭಿಯಾನ ಮತ್ತು ಸದಸ್ಯತ್ವ ಅಭಿಯಾನ ಹೇಗಿದೆ? ಅಭಿಯಾನದ ಮೂಲಕ ಕಾಂಗ್ರೆಸ್ ಸೇರಿದವರ ಸಂಖ್ಯೆ ಹೆಚ್ಚೋ ಅಥವಾ ಕಾಂಗ್ರೆಸ್ ತ್ಯಜಿಸಲಿರುವವರ ಸಂಖ್ಯೆ ಹೆಚ್ಚೋ? ಕಪಿಲ್ ಸಿಬಲ್, ಆರ್​​ಪಿಎನ್ ಸಿಂಗ್, ಅಶ್ವಿನಿ ಕುಮಾರ್, ಹಾರ್ದಿಕ್ ಪಟೇಲ್, ಸಿಎಂ ಇಬ್ರಾಹಿಂ, ಪ್ರಮೋದ್ ಮಧ್ವರಾಜ್ ಮುಖ್ಯಮಂತ್ರಿ ಚಂದ್ರು, ಈಗ ಬ್ರಿಜೇಶ್ ಕಾಳಪ್ಪ! ಕಾಂಗ್ರೆಸ್ಸಿಗರೇ, ನಿಮ್ಮದು ಭಾರತ್ ಜೋಡೋ ಅಭಿಯಾನವೋ, ಕಾಂಗ್ರೆಸ್ ಛೋಡೋ ಅಭಿಯಾನವೋ? ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿ ಟೀಕಿಸಿದೆ.

ಕಾಂಗ್ರೆಸ್ ಪಕ್ಷ ಯಾವ ದಯನೀಯ ಸ್ಥಿತಿ ತಲುಪಿದೆ ಎಂದರೆ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಸಂಖ್ಯೆ ತೋರಿಸಲು ಟಿವಿ, ಫ್ರಿಡ್ಜ್, ಫೋನ್ ಆಮಿಷ ಒಡ್ಡಲಾಗಿತ್ತು. ಈಗ ಹತ್ತಾರು ವರ್ಷ ಕಾಂಗ್ರೆಸ್ ಪಕ್ಷಕ್ಕೆ ದುಡಿದವರು ಪಕ್ಷ ತ್ಯಜಿಸುತ್ತಿದ್ದಾರೆ. ನಕಲಿ ಗಾಂಧಿಗಳ ನಾಯಕತ್ವಕ್ಕೆ ಕಾರ್ಯಕರ್ತರೇ ಬೇಸತ್ತಿದ್ದಾರೆ! ರಾಜಸ್ಥಾನದ ಚಿಂತನ ಶಿಬಿರದ ಬಳಿಕ ಕಾಂಗ್ರೆಸ್ ಖಾಲಿಯಾಗುತ್ತಿದೆ, G-23 ಗುಂಪಿನ ಸಂಖ್ಯೆ ಕರಗುತ್ತಿದೆ. ಕಾರಣ ಸ್ಪಷ್ಟ, ನಕಲಿ ಗಾಂಧಿ ಕುಟುಂಬದ ನಾಯಕತ್ವವನ್ನು ಕಾಂಗ್ರೆಸ್ ಕಾರ್ಯಕರ್ತರೇ ಒಪ್ಪುತ್ತಿಲ್ಲ. ರಾಜ್ಯದಲ್ಲೂ ಕಾಂಗ್ರೆಸ್ ಚಿಂತನಾ ಶಿಬಿರ ಹಮ್ಮಿಕೊಂಡಿದೆ, ಅದರ ಮುನ್ನವೇ ರಾಜೀನಾಮೆ ಪರ್ವ ಆರಂಭಗೊಂಡಿದೆ ಎಂದು ಬಿಜೆಪಿ ಕೈ ನಾಯಕರ ಕಾಲೆಳೆದಿದೆ.

ಪರಿಷತ್ ಟಿಕೆಟ್, ರಾಜ್ಯಸಭಾ ಟಿಕೆಟ್, ಪದಾಧಿಕಾರಿಗಳ ಪಟ್ಟಿ ಹೀಗೆ ಪಕ್ಷದ ವಿಚಾರದಲ್ಲಿ ಸಿದ್ದರಾಮಯ್ಯ ಛಾಪು ಎದ್ದು ಕಾಣುತ್ತಿದೆ. ಕೆಪಿಸಿಸಿ ಅಧ್ಯಕ್ಷರು ಸಿದ್ದರಾಮಯ್ಯ ಬಣದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಮುಂದೊಂದು ದಿನ ಕಾಂಗ್ರೆಸ್ ತ್ಯಜಿಸಬಹುದಾದ ದಿನ ದೂರವೇನೂ ಇಲ್ಲ, ಎಚ್ಚರ ಡಿಕೆಶಿ ಎಚ್ಚರ! ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ:ತೈಲ ಬೆಲೆ ಇಳಿಕೆಗೆ ಒತ್ತಾಯಿಸಿ ಪ್ರತಿಭಟನೆ.. ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು

ABOUT THE AUTHOR

...view details