ಬೆಂಗಳೂರು:ರಾಜ್ಯ ಬಿಜೆಪಿಗೆ ನೂತನ ಸಾರಥಿ ಆಗಮಿಸಿದ್ದು, ಸದ್ಯದಲ್ಲೇ ಟೀಂ ಬಿಜೆಪಿಗೆ ಭರ್ಜರಿ ಸರ್ಜರಿ ನಡೆಸಲಿದ್ದಾರೆ. ಹಿರಿಯ ನಾಯಕರಿಗೆ ಕೋಕ್ ನೀಡಿ, ಹೊಸಬರನ್ನು ತಂಡಕ್ಕೆ ಸೇರಿಸಿಕೊಳ್ಳಲಿದ್ದಾರೆ. ಬಿಎಸ್‌ವೈ ಪುತ್ರನಿಗೂ ತಂಡದಲ್ಲಿ ಸ್ಥಾನ ಸಿಗಲಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಟೀಂ ಬಿಜೆಪಿಗೆ ಸರ್ಜರಿ.. ಕಟೀಲ್ ತಂಡಕ್ಕೆ ಸೇರ್ತಾರಾ ಬಿಎಸ್ವೈ ಪುತ್ರ?
ರಾಜ್ಯ ಬಿಜೆಪಿಗೆ ನೂತನ ಸಾರಥಿ ಆಗಮಿಸಿದ್ದು, ಸದ್ಯದಲ್ಲೇ ಟೀಂ ಬಿಜೆಪಿಗೆ ಭರ್ಜರಿ ಸರ್ಜರಿ ನಡೆಸಲಿದ್ದಾರೆ. ಹಿರಿಯ ನಾಯಕರಿಗೆ ಕೋಕ್ ನೀಡಿ, ಹೊಸಬರನ್ನು ತಂಡಕ್ಕೆ ಸೇರಿಸಿಕೊಳ್ಳಲಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಪುತ್ರನಿಗೂ ತಂಡದಲ್ಲಿ ಸ್ಥಾನ ಸಿಗಲಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಸಂಸದ ನಳೀನ್ ಕುಮಾರ್ ಕಟೀಲ್ ಹೆಗಲಿಗೆ ರಾಜ್ಯ ಬಿಜೆಪಿ ಮುನ್ನೆಡೆಸುವ ಜವಾಬ್ದಾರಿ ಬಿದ್ದಿದೆ. ಪಕ್ಷ ಸಂಘಟನೆಗೂ ಮುನ್ನ ರಾಜ್ಯ ಪದಾಧಿಕಾರಿಗಳಲ್ಲಿ ದೊಡ್ಡ ಬದಲಾವಣೆ ಮಾಡಲಿದ್ದಾರೆ. ಸದಸ್ಯತಾ ಅಭಿಯಾನ ಮುಗಿಯುತ್ತಿದ್ದಂತೆ ಆಪರೇಷನ್ ಆಫೀಸ್ ಬೇರರ್ಸ್ ಗೆ ಕಟೀಲ್ ನಿರ್ಧರಿಸಿದ್ದಾರೆ.
ಸದ್ಯ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಗೋವಿಂದ ಕಾರಜೋಳ ಉಪ ಮುಖ್ಯಮಂತ್ರಿ ಆಗಿದ್ದು, ಬಿ.ಶ್ರೀರಾಮುಲು, ವಿ. ಸೋಮಣ್ಣ ಸಚಿವರಾಗಿದ್ದಾರೆ.ಪ್ರಧಾನ ಕಾರ್ಯದರ್ಶಿ ಆಗಿರುವ ಸಿ ಟಿ ರವಿ, ವಕ್ತಾರರಾಗಿರುವ ಸುರೇಶ್ ಕುಮಾರ್ ಕೂಡ ಸಚಿವ ಸ್ಥಾನ ಅಲಂಕರಿಸಿ ಸರ್ಕಾರದಲ್ಲಿ ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಸರ್ಕಾರದಲ್ಲಿ ಭಾಗಿಯಾಗಿರುವ ನಾಯಕರನ್ನು ಕೈಬಿಟ್ಟು ಅವರ ಬದಲಿಗೆ ಬೇರೆಯವರಿಗೆ ಜವಾಬ್ದಾರಿ ನೀಡಲು ಕಟೀಲ್ ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.