ಕರ್ನಾಟಕ

karnataka

ETV Bharat / state

ಡಿಕೆಶಿ ಶ್ರಮವಹಿಸಿ ಮಾಡಿದ ಅಡುಗೆಯನ್ನು ಸಿದ್ದರಾಮಯ್ಯ ತಿಂದು ಮುಗಿಸುವರು: ಬಿಜೆಪಿ - ಬಿಜೆಪಿ ನಾಯಕ ಅಡುಗೆ ಟ್ವೀಟ್​

ನಾನೇ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ, ಪಕ್ಷ ಕಟ್ಟಿರುವುದು ನಾನು ಎಂದು ಡಿ.ಕೆ.ಶಿವಕುಮಾರ್ ಹೇಳಿಕೊಳ್ಳುತ್ತಿದ್ದಾರೆ. ಎದುರಾಳಿ ಬಲಗೊಳ್ಳುತ್ತಿದ್ದಾನೆ ಅಂದರೆ ಡಿಕೆಶಿ ಅಸಹಾಯಕ ಆಗಿದ್ದಾರೆಂದರ್ಥವೇ? ಎಂದು ಕೆಣಕಿ ಬಿಜೆಪಿ ಟ್ವೀಟ್ ಮಾಡಿದೆ‌.

BJP slams Siddaramaiah and DK Shivakumar over mlc election ticket
BJP slams Siddaramaiah and DK Shivakumar over mlc election ticket

By

Published : May 25, 2022, 7:02 AM IST

ಬೆಂಗಳೂರು:ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನೀವು ಶ್ರಮವಹಿಸಿ ಮಾಡಿದ ಅಡುಗೆ ತಿಂದು ಮುಗಿಸುವುದು ಶತಸಿದ್ಧ ಎಂದು ರಾಜ್ಯ ಬಿಜೆಪಿ ಘಟಕ ಸರಣಿ ಟ್ವೀಟ್ ಮಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಾಲೆಳೆದಿದೆ‌.

ತಿಹಾರ್ ಜೈಲಿನಿಂದ ದೊಡ್ಡ ಮೆರವಣಿಗೆ ಮಾಡಿಕೊಂಡು ಬಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದು ಎರಡು ವರ್ಷ ಕಳೆದರೂ ಪದಾಧಿಕಾರಿಗಳ ಪಟ್ಟಿಯನ್ನು ಭರ್ತಿ ಮಾಡಲು ಡಿ.ಕೆ.ಶಿವಕುಮಾರ್ ಅವರಿಂದ ಸಾಧ್ಯವಾಗಿರಲಿಲ್ಲ. ಈಗ ಉಪಾಧ್ಯಕ್ಷರ ಸ್ಥಾನದ ಪಟ್ಟಿಯಲ್ಲಿ ಸಿದ್ದರಾಮಯ್ಯ ಸೂಚಿಸಿದ ಹೆಸರುಗಳಿವೆ. ಶಿವಕುಮಾರ್ ಅಷ್ಟೊಂದು ಅಸಹಾಯಕ ಆಗಿದ್ದೇಕೆ? ಅನ್ನೋದು ಬಿಜೆಪಿ ಪ್ರಶ್ನೆ.

ನಾನೇ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ, ಪಕ್ಷ ಕಟ್ಟಿರುವುದು ನಾನು ಎಂದು ಡಿ.ಕೆ.ಶಿವಕುಮಾರ್ ಹೇಳಿಕೊಳ್ಳುತ್ತಿದ್ದಾರೆ. ಎದುರಾಳಿ ಬಲಗೊಳ್ಳುತ್ತಿದ್ದಾನೆ ಅಂದರೆ ಡಿಕೆಶಿ ಅಸಹಾಯಕ ಆಗಿದ್ದಾರೆಂದರ್ಥವೇ? ಎಂದು ಕೇಸರಿ ಪಕ್ಷ ಕೆಣಕಿದೆ.

ಅಡುಗೆ ನಾನು ರೆಡಿ ಮಾಡಿದ್ದು, ಬೇರೆಯವರು ಬರೇ ತಿನ್ನುವುದಕ್ಕಾ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಡಿಕೆಶಿ ಅವರೇ, ನೀವು ಬರೇ ಇಂತಹ ಮಾತಿನ ಬಾಣ ಎಸೆಯಬೇಕಷ್ಟೇ. ಸಿದ್ದರಾಮಯ್ಯ ನೀವು ಶ್ರಮವಹಿಸಿ ಮಾಡಿದ ಅಡುಗೆ ತಿಂದು ಮುಗಿಸುವರು ಎಂದಿದೆ.

ತಮ್ಮ ಪರಮಾಪ್ತ ಎಂ.ಬಿ.ಪಾಟೀಲರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ಸು ಕಂಡಿದ್ದಾರೆ. ಅದೇ ಎಂ.ಬಿ.ಪಾಟೀಲರು ಕೆಪಿಸಿಸಿ ಅಧ್ಯಕ್ಷರನ್ನೇ ಸಾರ್ವಜನಿಕ ವಲಯದಲ್ಲಿ, ಮಾಧ್ಯಮದವರ ಮುಂದೆ ಪ್ರಶ್ನಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇವಲ ಅಲಂಕಾರಿಕವೇ!?

ಒಂದು ವಾರದಲ್ಲಿ ಎರಡು ಬಾರಿ ದೆಹಲಿ ದಂಡಯಾತ್ರೆ, ಚಿಂತನ ಶಿಬಿರದಲ್ಲಿ ಒಗ್ಗಟ್ಟಿನ ಮಂತ್ರ ಜಪ. ಇಷ್ಟೆಲ್ಲಾ ಆದರೂ ಡಿಕೆಶಿ ಅವರಿಗೆ ಹಿರಿಯ ನಾಯಕ ಎಸ್‌ಆರ್‌ಪಿ ಅವರಿಗೆ ಟಿಕೆಟ್‌ ಕೊಡಿಸಲು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಅವರ ಹಠವೇ ಅಂತಿಮವಾಯಿತು. ಡಿಕೆಶಿ ಅವರೇ, ನೀವು ನಾಮಕಾವಸ್ಥೆ ಅಧ್ಯಕ್ಷರೇ? ಎಂದು ಬಿಜೆಪಿ ಕೇಳಿದೆ.

ಇದನ್ನೂ ಓದಿ:ಅಭ್ಯರ್ಥಿಗಳ ಆಯ್ಕೆಯಲ್ಲಿ ಮೇಲುಗೈ ಸಾಧಿಸಿದ ಬಿ.ಎಲ್ ಸಂತೋಷ್: ಬಿಎಸ್​ವೈ ಪುತ್ರ, ಬೆಂಬಲಿಗರ ಕೈ ತಪ್ಪಿದ ಟಿಕೆಟ್..!

ABOUT THE AUTHOR

...view details