ಕರ್ನಾಟಕ

karnataka

ETV Bharat / state

ಮಾತು ಕೊಟ್ಟಂತೆ ಬಿಜೆಪಿ ನಾಯಕರು ಸಭಾಪತಿ ಸ್ಥಾನ ನೀಡಲಿದ್ದಾರೆ: ಬಸವರಾಜ ಹೊರಟ್ಟಿ ವಿಶ್ವಾಸ - ಕೋರ್​ ಕಮಿಟಿ

ನನಗೆ ಭರವಸೆ ನೀಡಿದ್ದಂತೆ ಸಭಾಪತಿ ಸ್ಥಾನವನ್ನು ಬಿಜೆಪಿ ನಾಯಕರು ನನಗೆ ನೀಡಲಿದ್ದಾರೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಜಿ ಸಭಾಪತಿ ಬಸವರಾಜ ಹೊರಟ್ಟಿ
ಮಾಜಿ ಸಭಾಪತಿ ಬಸವರಾಜ ಹೊರಟ್ಟಿ

By

Published : Nov 9, 2022, 8:31 PM IST

ಬೆಂಗಳೂರು: ರಘುನಾಥ ರಾವ್ ಮಲ್ಕಾಪುರೆ ಅವರನ್ನು ಸಭಾಪತಿ ಸ್ಥಾನದಲ್ಲಿ ಮುಂದುವರೆಸುವಂತೆ ಅವರ ಸಮಾಜದ ಮುಖಂಡರು ಹೇಳಿದ್ದರಲ್ಲಿ ತಪ್ಪೇನಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿದೆ. ಆದರೆ, ನನಗೆ ಭರವಸೆ ನೀಡಿದ್ದಂತೆ ಸಭಾಪತಿ ಸ್ಥಾನವನ್ನು ಬಿಜೆಪಿ ನಾಯಕರು ನನಗೆ ನೀಡಲಿದ್ದಾರೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕುಮಾರಪಾರ್ಕ್​ನಲ್ಲಿರುವ ಅಧಿಕೃತ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿ ಸ್ಥಾನಕ್ಕೆ ರಘುನಾಥ್ ಮಲ್ಕಾಪುರೆ ಮುಂದುವರಿಸುವ ವಿಚಾರ ಕುರಿತು ಬೆಳಗ್ಗೆ ಯಾರೋ ಹೇಳಿದ್ದಾರೆ. ತಮ್ಮ ಸಮಾಜದವರು ಈವರೆಗೂ ಇಂತಹ ಹುದ್ದೆಯಲ್ಲಿ ಇರಲಿಲ್ಲ. ಹಾಗಾಗಿ ಈಗ ಅವರನ್ನೇ ಮುಂದುವರೆಸಿ ಅಂತ ಕೇಳುವುದು ಸಹಜ. ಅವರೂ ಸಹ ಅವರ ಸಮಾಜದವರು.

ಹೀಗಾಗಿ ರಘುನಾಥರಾವ್ ಮಲ್ಕಾಪುರೆ ಮುಂದುವರಿಯಲಿ ಎಂದು ಕೇಳಿದ್ದಾರೆ. ಹೇಳುವುದು ಸಹಜ. ಇದರಲ್ಲಿ ತಪ್ಪೇನಿಲ್ಲ. ಆದರೆ, ನಮ್ಮ ಪರವಾಗಿ ಬ್ಯಾಟಿಂಗ್ ಮಾಡೋಕೆ ಯಾರೂ ಇಲ್ಲ. ಸದ್ಯ ನಮಗೆ ಮಾಧ್ಯಮದವರು ಇದ್ದಾರೆ ಅಷ್ಟೇ ಎಂದರು.

ನನಗೆ ಸಭಾಪತಿ ಸ್ಥಾನ ಕೊಡಬೇಕು ಎಂದು ಕೋರ್ ಕಮಿಟಿಯಲ್ಲಿ ಡಿಸೈಡ್ ಮಾಡಿದ್ದಾರೆ. ಪಕ್ಷದ ಹಿರಿಯರು, ಸಿಎಂ ಹಾಗೂ ಅಧ್ಯಕ್ಷರು ಬಹಳಷ್ಟು ಸಲ ಹೇಳಿದ್ದಾರೆ. ನನಗೆ ಸಭಾಪತಿ ಸ್ಥಾನ ನೀಡುವುದಾಗಿ ಹೇಳಿದ್ದಾರೆ. ಜಗದೀಶ್ ಶೆಟ್ಟರ್, ಅಶೋಕ್ ಸಹಜವಾಗಿ ನನ್ನ ಪರ ಮಾತನಾಡಿದ್ದರು.
ಸಾಕಷ್ಟು ಬಾರಿ ಗೆದ್ದಿದ್ದಾರೆ. ಹೀಗಾಗಿ ಸಭಾಪತಿ ಸ್ಥಾನ ಕೊಡೋಣ ಅಂತ ಮಾತನಾಡಿದ್ದಾರೆ.

ಮಾತು ಕೊಟ್ಟಂತೆಯೇ ನನಗೆ ಸಭಾಪತಿ ಸ್ಥಾನ ಕೊಡುವುದಾಗಿ ಹೇಳಿದ್ದಾರೆ. ನನಗೂ ನಂಬಿಕೆ ಇದೆ. ಕೋರ್​ ಕಮಿಟಿಯಲ್ಲಿ ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದಾರೆ. ಅಲ್ಲಿ ತೀರ್ಮಾನ ತೆಗೆದುಕೊಂಡರೆ ಹಿಂದೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಹೊರಟ್ಟಿ, ರಾಜಕಾರಣಿಗಳು ಈ ಹಿಂದೂ ಮುಂದು ಸ್ವಲ್ಪ ಬಿಡಬೇಕು. ಇತ್ತೀಚಿಗೆ ಅದು ಸ್ವಲ್ಪ ಜಾಸ್ತಿ ಆಗಿದೆ. ಮೊದಲೆಲ್ಲಾ ಹೀಗೆ ಇರಲಿಲ್ಲ. ಇದರಿಂದ ಏನು ಆಗೋದಿಲ್ಲ ಎಂದರು.

ಓದಿ:ಹಂಗಾಮಿ ಸಭಾಪತಿಯಾಗಿ ರಘುನಾಥ ರಾವ್ ಮಲ್ಕಾಪುರೆ ಅಧಿಕಾರ ಸ್ವೀಕಾರ: ಹೊರಟ್ಟಿ ರಾಜೀನಾಮೆ ಅಂಗೀಕಾರ

ABOUT THE AUTHOR

...view details