ಕರ್ನಾಟಕ

karnataka

ETV Bharat / state

ಬಿಜೆಪಿಗೆ ಮಾತಾಡಲು ಬೇರೆ ವಿಚಾರ ಸಿಗದೇ, ರಾಹುಲ್​ ಗಾಂಧಿ ಅವಹೇಳನ ಮಾಡುತ್ತಿದೆ: ಬಿಕೆಸಿ ಬೇಸರ - Prime Minister Narendra Modi

ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಚಾರ ಸಿಗದೇ ನಮ್ಮ ರಾಷ್ಟ್ರೀಯ ನಾಯಕ ರಾಹುಲ್​ ಗಾಂಧಿಯನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಕೆ. ಚಂದ್ರಶೇಖರ ಅಸಮಾಧಾನ ವ್ಯಕ್ತಪಡಿಸಿದರು.

BK Chandrasekhara
ಮಾಜಿ ಸಚಿವ ಬಿ.ಕೆ. ಚಂದ್ರಶೇಖರ

By

Published : Mar 18, 2023, 9:04 PM IST

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಿ.ಕೆ. ಚಂದ್ರಶೇಖರ ಮಾತನಾಡಿದರು.

ಬೆಂಗಳೂರು:ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಚಾರ ಸಿಗದೇ ನಮ್ಮ ರಾಷ್ಟ್ರೀಯ ನಾಯಕ ರಾಹುಲ್​ ಗಾಂಧಿ ಅವರನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಕೆ. ಚಂದ್ರಶೇಖರ ಆರೋಪಿಸಿದರು.

ಇಲ್ಲಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ವಕ್ತಾರ ರಮೇಶ್​ ಬಾಬು ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರನ್ನು ಬಿಜೆಪಿ ಟಾರ್ಗೆಟ್​ ಮಾಡ್ತಿದೆ. ಬಿಜೆಪಿ ಅವರಿಗೆ ಯಾವುದೇ ಬೇರೆ ವಿಷಯ ಸಿಗುತ್ತಿಲ್ಲ ಅದಕ್ಕೆ ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡ್ತಿದ್ದಾರೆ. ಅದಾನಿ ವಿಚಾರದಲ್ಲಿ ಯಾಕೆ ಪ್ರಧಾನಿ ಮೋದಿ ಸುಮ್ಮನಾಗಿದ್ದಾರೆ. ಸಂಸತ್ತಿನಲ್ಲಿ ಕೂಡ ಈ ಬಗ್ಗೆ ಚರ್ಚೆ ಆಯ್ತು. ಆದ್ರೆ ಅದಾನಿ ವಿಚಾರದಲ್ಲಿ ಯಾಕೆ ಪ್ರಧಾನಿ ಮೋದಿ ಸುಮ್ಮನಿದ್ದಾರೆ. ಇಂಗ್ಲೆಂಡ್ ನಲ್ಲಿ ನಡೆದ ಸಭೆಗೆ ರಾಹುಲ್ ಗಾಂಧಿ ಹೋಗಿದ್ರು. ಒಂದು ಸಭೆಯಲ್ಲಿ ರಾಹುಲ್ ಗಾಂಧಿ ಮಾತಾಡಿದ್ರು. ಇದೇ ವಿಚಾರವನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೋದಿಯಿಂದ ಬಿಬಿಸಿ ಬ್ಯಾನ್ - ಬಿ ಕೆ ಚಂದ್ರಶೇಖರ್​:ದೇಶದ ಎಲ್ಲಾ ಎಂಪಿಗಳು ಬಾಯಿ ಮುಚ್ಚಿಕೊಂಡು ಕುತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ರು. ಇಡೀ ಪ್ರತಿಪಕ್ಷವನ್ನು ನಾನೇ ಒಬ್ಬನೇ ನೋಡ್ಕೊತಿನಿ ಅಂತ ಪ್ರಧಾನಿ ಹೇಳಿದ್ದಾರೆ. ಅದಾನಿ ವಿಚಾರದಲ್ಲಿ ಪ್ರಧಾನಿ ಮೋದಿಗೆ ಡಿಫೆಂಡ್​ ಮಾಡ್ಕೊಳೊಕ್ಕೆ ಆಗ್ತಿಲ್ಲ. ಬಿಬಿಸಿಯಲ್ಲಿ ಗುಜರಾತ್ ಗಲಾಟೆ ಏನಾಯಿತು? ದೇಶದಲ್ಲಿ ಬಿಬಿಸಿಯನ್ನೇ ಪ್ರಧಾನಿ ಮೋದಿ ಬ್ಯಾನ್ ಮಾಡಿದ್ದಾರೆ. ಬಿಜೆಪಿಯವರು ಪಾರ್ಲಿಮೆಂಟ್​ನಿಂದ ರಾಹುಲ್ ಗಾಂಧಿಯನ್ನು ಹೊರಗೆ ಹಾಕಬೇಕು ಅಂತಿದ್ದಾರೆ. ಇದರ ಹಿಂದೆ ಭಾರತ ಪ್ರಜಾಪ್ರಭುತ್ವದ ತಾಯಿ ಎಂದು ಪ್ರಧಾನಿ ಮೋದಿ ಹೇಳಿದ್ರು. ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಉಳಿದಿದೇನಾ..? ವಿದೇಶದಲ್ಲಿ ರಾಹುಲ್ ಗಾಂಧಿ ಮಾತಾಡ್ಬೇಕಾದ್ರೆ ಹೇಳಿದರು. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಇಲ್ಲ ಅಂತ. ಬಿಬಿಸಿಯನ್ನು ಮೋದಿ ಬ್ಯಾನ್ ಮಾಡಿರುವ ಬಗ್ಗೆ ರಾಹುಲ್ ಗಾಂಧಿ ವಿದೇಶದಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪ ಮಾಡಿದ್ರು ಎಂದು ಅವರು ಹೇಳಿದರು.

ವಿಶೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಜೊತೆ ರಾಹುಲ್​ ಮಾತನಾಡಿದ್ದಾರೆ:ವಿದೇಶಗಳಲ್ಲಿ ಕೂಡ ಭಾರತೀಯ ವಿದ್ಯಾರ್ಥಿಗಳು ಇದ್ದಾರೆ. ಆ ವಿದ್ಯಾರ್ಥಿಗಳ ಜೊತೆ ಮಾತಾಡಬೇಕಾದ್ರೆ ಹೀಗೆ ಹೇಳಿದ್ದಾರೆ. ನಾನು ಬೇರೆ ದೇಶದ ವಿಶ್ವವಿದ್ಯಾಲಯಗಳಲ್ಲಿ ಮಾತಾಡಬಹುದು. ಆದ್ರೆ ಭಾರತದಲ್ಲಿರುವ ಯುನಿವರ್ಸಿಟಿಗಳಲ್ಲಿ ನಂಗೆ ಮಾತಾಡೋಕ್ಕೆ ಬಿಡ್ತಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿ ಗುಜರಾತ್ ಗಲಾಟೆ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಕೇವಲ ಪ್ರಜಾಪ್ರಭುತ್ವ ಬಗ್ಗೆ ಮಾತಾಡಿದ್ದಾರೆ ಅಷ್ಟೇ. ಸಂಸತ್ತಿನಲ್ಲಿ ರಾಹುಲ್ ಗಾಂಧಿಗೆ ಮಾತಾಡೊಕ್ಕೆ ಅವಕಾಶ ನೀಡ್ತಿಲ್ಲ. ರಾಹುಲ್ ಗಾಂಧಿ ವಿದೇಶದಲ್ಲಿ ಮಾತಾಡಿದ್ರೆ ಅದು ಆ್ಯಂಟಿ ನ್ಯಾಷನಲ್ ಆಗುತ್ತಾ? 2014ರ ನಂತರ ಭಾರತಕ್ಕೆ ಆಕಾಶದಿಂದ ಸ್ವರ್ಗವೇ ಕೆಳಗಡೆ ಇಳಿದು ಬರುತ್ತೆ ಅಂತ ವಿದೇಶದಲ್ಲಿ ಮೋದಿ ಹೇಳಿದ್ರು. ಹಿಂದಿನ ಕಾಂಗ್ರೆಸ್ ಸರ್ಕಾರ ಏನು ಸರಿ ಇಲ್ಲ ಎಂದು ವಿದೇಶದಲ್ಲಿ ಮೋದಿ ಹೇಳಿದ್ರು. ಆವಾಗ ಯಾಕೆ ಅದು ಆ್ಯಂಟಿ ನ್ಯಾಷನಲ್‌ ಆಗಿಲ್ಲ. ಭಾರತ ಅಂದ್ರೆ ಮೋದಿ ಎಂದು ಸದನದಲ್ಲಿ ಹೇಳ್ತಾರೆ. ನಾವು ಇವಾಗ ಮೋದಿ ಬಗ್ಗೆ ಮಾತಾಡಿದ್ರೆ ಆ್ಯಂಟಿ ನ್ಯಾಷನಲ್ ಆಗ್ತಿವಾ? ಎಂದು ಅವರು ಪ್ರಶ್ನಿಸಿದರು.

ನರೇಂದ್ರ ಮೋದಿಗೆ ಸವಾಲು:ಭಾರತಕ್ಕೆ ಸರಿಸಮಾನಾಗಿ ಮೊದಿ ಇದ್ದಾರಾ..? ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ನಡುವೆ ಒಂದು ಚರ್ಚೆ ಆಗಲಿ. ಓನ್ ಟು ಓನ್ ಮೋದಿ ಮತ್ತು ರಾಹುಲ್ ಗಾಂಧಿ ಚರ್ಚೆ ಆಗ್ಲಿ ನೋಡೊಣ ಯಾರು ಗೆಲ್ಲುತ್ತಾರೆ ಅಂತ ಎಂದು ಸವಾಲು ಹಾಕಿದರು. ಬಿಜೆಪಿಯಲ್ಲಿ ಇತ್ತೀಚೆಗೆ ಖಾವಿ ಹಾಕಿಕೊಂಡವರೇ ಜಾಸ್ತಿ ಇದ್ದಾರೆ. ಯುಪಿಯಲ್ಲಿ ಯೋಗಿ ಆದಿತ್ಯ ನಾಥ ಇದ್ದಾರೆ. ಈ ಖಾವಿ ಹಾಕಿಕೊಂಡಿರುವ ಅವರು ಯಾವ ಟೆರರಿಸ್ಟ್ ಗಿಂತ ಕಡಿಮೆ ಇಲ್ಲ ಎಂದು ಬಿ.ಕೆ. ಚಂದ್ರಶೇಖರ ಕಾಲೆಳೆದರು.

ಕಾಂಗ್ರೆಸ್​ ರಮೇಶ್ ಬಾಬು ಮಾತನಾಡಿ, ರಾಜ್ಯದಲ್ಲಿ ಮುಂದಿನ ವಾರ ನೀತಿ ಸಂಹಿತೆ ಜಾರಿಯಾಗಬಹುದು. ನಮಗೆ ಚುನಾವಣೆ ಆಯೋಗದ ಮೇಲೆ ನಂಬಿಕೆ ಇಲ್ಲ. ರಾಜ್ಯದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ ಮುಗಿದ ಮೇಲೆ ನೀತಿ ಸಂಹಿತೆ ಜಾರಿ ಮಾಡ್ತಾರಂತೆ ಎಂದು ಆರೋಪಿಸಿದರು.

ತರಾತುರಿಯಲ್ಲಿ ಟೆಂಡರ್ ಪಾಸ್ ಮಾಡಿದ ಆರೋಪ:ಬಿಜೆಪಿ ಸರ್ಕಾರದಲ್ಲಿ ಮತ್ತೊಂದು ಅಕ್ರಮ‌ ನಡೆದಿದೆ. ಜಲ ಸಂಪನ್ಮೂಲ ಇಲಾಖೆಯಲ್ಲಿ ಅಕ್ರಮ ನಡೆದಿದೆ. ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ಕಳೆದ ಒಂದು ವರ್ಷದಿಂದ ಅಕ್ರಮ ನಡೆದಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. 2,326 ಕೋಟಿಯ ಲೇಔಟ್ ಅಭಿವೃದ್ಧಿ ಟೆಂಡರ್​ನಲ್ಲಿ ಅಕ್ರಮ ನಡೆದಿದೆ. ಕೃಷ್ಣ ಭಾಗ್ಯ ಜಲ ನಿಗಮ ಮಂಡಳಿಗೆ ಅಧ್ಯಕ್ಷ ಸಿಎಂ ಇದ್ದಾರೆ. ಚುನಾವಣೆಯ ಸಮಯದಲ್ಲಿ ಟೆಂಡರ್ ಪಾಸ್ ಮಾಡ್ತಿದ್ದಾರೆ. ಗುತ್ತಿಗೆದಾರಿಗೆ ಆರ್ಥಿಕ ಸಹಾಯ ಮಾಡಲು ತರಾತುರಿಯಲ್ಲಿ ಟೆಂಡರ್ ಪಾಸ್ ಆಗ್ತಿದೆ. ಒಂದು ವರ್ಷದಲ್ಲಿ ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ನಡೆದಿದ್ದ ಅಕ್ರಮದ ಬಗ್ಗೆ ತನಿಖೆ ಆಗಬೇಕು. ಲೋಕಾಯುಕ್ತದ ಮೂಲಕ ತನಿಖೆ ನಡೆಯಬೇಕು ಎಂದು ರಮೇಶ್ ಬಾಬು ಒತ್ತಾಯಿಸಿದರು.

ಇದನ್ನೂ ಓದಿ:ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಜೋಶಿ ತೀವ್ರ ವಾಗ್ದಾಳಿ..

ABOUT THE AUTHOR

...view details