ಬೆಂಗಳೂರು: ಪಕ್ಷದ ಟಿಕೆಟ್ಗಾಗಿ ಒತ್ತಡ ಇರುವುದು ನಿಜ ಆದರೂ ಯಾರು ಗೆಲ್ಲಬಹುದು ಎನ್ನುವ ಆಧಾರದಲ್ಲಿ ಹೈಕಮಾಂಡ್ ಜೊತೆ ಚರ್ಚಿಸಿ ಟಿಕೆಟ್ ಅಂತಿಮಗೊಳಿಸಲಾಗುತ್ತದೆ. ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’’ಟಿಕೆಟ್ ಅಂತಿಮಗೊಳಿಸುವ ಹಿನ್ನೆಲೆಯಲ್ಲಿ ಸಂಜೆ ದೆಹಲಿಗೆ ಹೋಗುತ್ತಿದ್ದೇನೆ. ಪಟ್ಟಿ ಸಿದ್ಧ ಮಾಡಬೇಕಿರುವ ಕಾರಣ ಪ್ರಮುಖರ ಜೊತೆಗೆ ಚರ್ಚೆ ಮಾಡಬೇಕಿದೆ. ಎಲ್ಲರೊಂದಿಗೆ ಚರ್ಚೆ ಮಾಡಿ ಪಟ್ಟಿ ಫೈನಲ್ ಮಾಡಲಾಗುವುದು ಎಂದರು. ಟಿಕೆಟ್ಗಾಗಿ ಬಹಳ ಒತ್ತಡ ಇರೋದು ನಿಜ. ಈಗಾಗಲೇ ಪ್ರತಿ ಕ್ಷೇತ್ರಕ್ಕೂ ಇಬ್ಬರು ಮೂವರು ಹೆಸರನ್ನು ಅಂತಿಮ ಮಾಡಿ ಹೈಕಮಾಂಡ್ಗೆ ಕಳುಹಿಸಲಾಗಿದೆ. ನಾನು, ಮುಖ್ಯಮಂತ್ರಿಗಳು ಮತ್ತು ಪ್ರಮುಖರು ದೆಹಲಿಗೆ ಹೋಗುತ್ತೇವೆ. ಯಾರು ಗೆಲ್ತಾರೆ ಅನ್ನೋ ಬಗ್ಗೆ ಚರ್ಚಿಸಿ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ‘‘ ಎಂದರು.