ಬೆಂಗಳೂರು:ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಬಿಟ್ ಕಾಯಿನ್ ದಂಧೆಯ ಆರೋಪ ಹೊತ್ತಿರುವ ಹ್ಯಾಕರ್ ಶ್ರೀಕಿ ಇನ್ನೂ ಪತ್ತೆಯಾಗಿಲ್ಲ. ಆತನ ಪತ್ತೆಗೆ ಪೊಲೀಸರು ಇನ್ನಿಲ್ಲದ ಹರಸಾಹಸ ಪಡುತ್ತಿದ್ದರೂ ಸಹ ಕಾರ್ಯಾಚರಣೆ ಫಲ ನೀಡ್ತಿಲ್ಲ.
ಶ್ರೀಕಿ ಎಲ್ಲಿ ಮರೆಯಾಗಿದ್ದಾನೆ? ಏನು ಮಾಡ್ತಿದ್ದಾನೆ? ಎಂಬುದು ಮಾತ್ರ ಇಂದಿಗೂ ನಿಗೂಢವಾಗಿದೆ. ಶನಿವಾರ ತನಿಖಾಧಿಕಾರಿ ಮುಂದೆ ಹಾಜರಾಗಬೇಕಿದ್ದ ಆತ, ತನಿಖೆಗೆ ಹಾಜರಾಗದೆ ಚಕ್ಕರ್ ಹೊಡೆದಿದ್ದಾನೆ.
ಷರತ್ತುಬದ್ಧ ಜಾಮೀನಿನಂತೆ ಪ್ರತಿ ಶನಿವಾರ ಶ್ರೀಕಿ ತನಿಖೆಗೆ ಹಾಜರಾಗಬೇಕು. ತನಿಖೆಗೆ ಹಾಜರಾಗಲು ಸಾಧ್ಯವಿಲ್ಲದಿದ್ದರೆ ತನಿಖಾಧಿಕಾರಿಗೆ ಗೈರುಹಾಜರಿಗೆ ಕಾರಣ ತಿಳಿಸಬೇಕು. ನಿರಂತರವಾಗಿ ತನಿಖೆಗೆ ಗೈರು ಹಾಜರಾದರೆ ಮತ್ತೆ ಬಂಧಿಸುವ ಸಾಧ್ಯತೆಗಳಿವೆ. ಪೊಲೀಸರು ತನಿಖೆಗೆ ಅಸಹಕಾರ ನೀಡುತ್ತಿರುವ ಹಿನ್ನೆಲೆ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.