ಬೆಂಗಳೂರು:ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷಿ 'ಭಾರತ್ ಜೋಡೋ ಪಾದಯಾತ್ರೆ' ಸೆ.30 ರಂದು ರಾಜ್ಯಕ್ಕೆ ಪ್ರವೇಶ ಮಾಡಲಿದೆ. ಅದ್ಧೂರಿ ಸ್ವಾಗತಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಸಜ್ಜಾಗುತ್ತಿದ್ದಾರೆ.
ಸೆ.7 ರಂದು ಕಮ್ಯಾಕುಮಾರಿಯಿಂದ ಆರಂಭವಾಗಿರುವ ಪಾದಯಾತ್ರೆ ರಾಜ್ಯದಲ್ಲಿ 'ಭಾರತ ಐಕ್ಯತಾ ಯಾತ್ರೆ' ಹೆಸರಿನಲ್ಲಿ ಸಾಗಲಿದೆ. ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಹಿರಿಯರು ಹಾಗೂ ಕಿರಿಯರಿಗೆ ಇದರ ಜವಾಬ್ದಾರಿಯನ್ನು ಹಂಚಲಾಗಿದ್ದು, ಪ್ರತಿಯೊಬ್ಬರೂ ತಮಗೆ ಹಂಚಿಕೆಯಾದ ಜವಾಬ್ದಾರಿಯನ್ನು ನಿಭಾಯಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ರಾಜ್ಯದ ಯಾವ ದಿನ, ಎಲ್ಲೆಲ್ಲಿ ಸಂಚಾರ?: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ಪ್ರವೇಶ ಪಡೆಯುವ ಯಾತ್ರೆ ರಾಯಚೂರು ಮೂಲಕ ರಾಜ್ಯದಿಂದ ಹೊರಬೀಳಲಿದೆ. ಈ ಯಾತ್ರೆ ರಾಜ್ಯದಲ್ಲಿ ಸಾಗುವ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಹಲವು ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಲಿದ್ದಾರೆ.
- ಭಾರತ್ ಜೋಡೋ ಯಾತ್ರೆ ಸೆ.30 ರಂದು ರಾಜ್ಯಕ್ಕೆ ಪ್ರವೇಶಿಸಲಿದೆ. ಇಲ್ಲಿ ಭಾರತ ಐಕ್ಯತಾ ಯಾತ್ರೆಯಾಗಿ 21 ದಿನ ನಡೆಯಲಿದೆ.
- ಸೆ.30 ಗುಂಡ್ಲುಪೇಟೆಯಿಂದ ಬೇಗೂರು ಯಾತ್ರೆ ನಡೆಯಲಿದೆ. ಎರಡು ದಿನ ಗುಂಡ್ಲುಪೇಟೆಯಲ್ಲಿ ಯಾತ್ರೆ ಸಂಚಾರ ಮಾಡಲಿದೆ.
- ಬೆಂಗಳೂರು ದಕ್ಷಿಣ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಚಾಮರಾಜನಗರ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು, ನಾಯಕರು, ಕಾರ್ಯಕರ್ತರು, ಭಾಗಿಯಾಗಲಿದ್ದಾರೆ.
- ಈ ಸಂದರ್ಭ ಒಟ್ಟು 7 ವಿಧಾನಸಭಾ ಕ್ಷೇತ್ರದ ಕೈ ನಾಯಕರು ಭಾಗಿಯಾಗುತ್ತಾರೆ.
- ಅ.1 ರಂದು ಬೇಗೂರಿನಿಂದ ತಾಂಡವಪುರಕ್ಕೆ ಯಾತ್ರೆ ಸಾಗಲಿದೆ.
- ಹೆಗ್ಗಡದೇವನಕೋಟೆ, ಬೆಳ್ತಂಗಡಿ, ಬಂಟ್ವಾಳ, ಮಡಿಕೇರಿ, ವಿರಾಜಪೇಟೆ, ನಂಜನಗೂಡು, ಹುಣಸೂರು, ರಾಮನಗರ,ಕನಕಪುರ, ಚನ್ನಪಟ್ಟಣ, ಕೈ ಶಾಸಕರು, ನಾಯಕರು, ಕಾರ್ಯಕರ್ತರು ಭಾಗಿಯಾಗುತ್ತಾರೆ.
- ಒಟ್ಟು 10 ಕ್ಷೇತ್ರಗಳ,ಶಾಸಕರು, ನಾಯಕರು ಕಾರ್ಯಕರ್ತರು ಪಾಲ್ಗೊಳ್ಳುವರು.
- ವರುಣ ಕ್ಷೇತ್ರದಲ್ಲಿ ಒಂದು ದಿನ ಯಾತ್ರೆ ಪಯಣ ಇರಲಿದೆ.
- ಅ.02 ರಂದು ಕಡಕೋಳದಿಂದ ಮೈಸೂರು ಸಿಟಿಯಲ್ಲಿ ಸಂಚಾರ ಮಾಡುವ ಯಾತ್ರೆಯಲ್ಲಿ ಮೂಡಬಿದಿರೆ, ಮಂಗಳೂರು ಉತ್ತರ ಮತ್ತು ದಕ್ಷಿಣ, ನಗರ, ಪಿರಿಯಾಪಟ್ಟಣ, ಚಾಮುಂಡೇಶ್ವರಿ, ಕೃಷ್ಣರಾಜನಗರ, ಚಾಮರಾಜ, ಟಿ.ನರಸಿಪುರ, ನರಸಿಂಹರಾಜ, ವರುಣ ಕ್ಷೇತ್ರದ ಕೈ ಶಾಸಕರು, ನಾಯಕರು ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ.
- ಶ್ರೀರಂಗಪಟ್ಟಣದಲ್ಲಿ ಒಂದು ದಿನ ಐಕ್ಯತಾ ಯಾತ್ರೆ ಸಂಚಾರ ಮಾಡಲಿದೆ.
- ಅ.04 ರಂದು ಮೈಸೂರು ಸಿಟಿಯಿಂದ ಟಿಎಸ್ ಚತ್ರಾವರೆಗೂ ಯಾತ್ರೆ ಸಾಗಲಿದ್ದು, ಯಶವಂತಪುರ, ಚಿಕ್ಕಪೇಟೆ, ಚಾಮರಾಜಪೇಟೆ, ಬಿ.ಟಿಎಂ ಲೇಔಟ್, ಜಯನಗರ,ಮಳ್ಳವಳ್ಳಿ,,ಮದ್ದೂರು, ಮೇಲುಕೋಟೆ, ಶ್ರೀರಂಗಪಟ್ಟಣ, ಕೃಷ್ಣರಾಜ ನಗರ ಕ್ಷೇತ್ರದವರು ಭಾಗಿಯಾಗುವರು. ಒಟ್ಟು 10 ಕ್ಷೇತ್ರಗಳ ಜನ ಯಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ.
- ಅ.04 ಮತ್ತು 05 ರಂದು ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆ ಯಾತ್ರೆಗೆ ವಿರಾಮ.
- ಅ.06 ರಂದು ಮೇಲುಕೋಟೆಯ ಮಹದೇಶ್ವರ ದೇವಸ್ಥಾನದಿಂದ ಬ್ರಹ್ಮದೇವರಹಳ್ಳಿವರೆಗೆ ಯಾತ್ರೆ ಸಾಗಲಿದೆ.
- ಗೋವಿಂದರಾಜ್ ನಗರ, ಶಾಂತಿ ನಗರ, ಗಾಂಧಿನಗರ, ವಿಜಯನಗರ, ಅರಕಲಗೂಡು, ಮಂಡ್ಯ,ನಾಗಮಂಗಲ, ಕೃಷ್ಣರಾಜಪೇಟೆ, ಮಾಗಡಿ ಸೇರಿದಂತೆ ಒಟ್ಟು 9 ಕ್ಷೇತ್ರದ ಕೈ ಶಾಸಕರು, ನಾಯಕರು, ಕಾರ್ಯಕರ್ತರು ಸಂಚಾರದಲ್ಲಿ ಭಾಗಿಯಾಗುವರು.
- ಅ.07 ರಂದು ನಾಗಮಂಗಲದ ಬ್ರಹ್ಮದೇವರಹಳ್ಳಿಯಿಂದ ಬೆಳ್ಳೂರು ಪಟ್ಟಣದವರೆಗೆ ಯಾತ್ರೆ ಸಾಗಲಿದ್ದು, ಯಲಹಂಕ, ದಾಸರಹಳ್ಳಿ, ಬ್ಯಾಟರಾಯನಪುರ, ಪುಲಕೇಶಿ ನಗರ, ಅನೇಕಲ್, ಶ್ರವಣಬೆಳಗೊಳ, ಹಾಸನ, ಹೊಳೆನರಸೀಪುರ, ನೆಲಮಂಗಲ ಕ್ಷೇತ್ರದವರು ಸೇರಿದಂತೆ ಒಟ್ಟು 9 ಕ್ಷೇತ್ರದ ಶಾಸಕರು, ನಾಯಕರು ಭಾಗಿಯಾಗುತ್ತಾರೆ.
- ಅ.8 ರಂದು ನೆಲಮಂಗಲ ಆದಿಚುಂಚನಗಿರಿ ಮಠದಿಂದ ಕಲ್ಲೂರ ಕ್ರಾಸ್ವರೆಗೆ ನಡೆಯುವ ಯಾತ್ರೆಯಲ್ಲಿ ಆರ್. ಆರ್ ನಗರ, ಕುಣಿಗಲ್, ಹೆಬ್ಬಾಳ, ಸರ್ವಜ್ಞ ನಗರ, ಬೇಲೂರು, ಸಕಲೇಶಪುರ, ಬಂಗಾರಪೇಟೆ, ಬೈಂದೂರು, ಕುಂದಾಪುರ, ಉಡುಪಿ,ಕಾಪು,ಕಾರ್ಕಳ ಕ್ಷೇತ್ರದವರು ಭಾಗವಹಿಸುತ್ತಾರೆ.
- ಒಟ್ಟು 12 ಕ್ಷೇತ್ರದ ಶಾಸಕರು, ನಾಯಕರು, ಕಾರ್ಯಕರ್ತರು ಭಾಗಿಯಾಗುತ್ತಿರುವುದು ವಿಶೇಷ.
- ಅ. 09 ರಂದು ತುರುವೇಕೆರೆಯ ಕಲ್ಲೂರು ಕ್ರಾಸ್ನಿಂದ ಸೋಮಲಾಪುರವರೆಗೆ ನಡೆಯುವ ಯಾತ್ರೆಯಲ್ಲಿ ದೊಡ್ಡಬಳ್ಳಾಪುರ, ಚಿಂತಾಮಣಿ, ಮಧುಗಿರಿ, ಮುಳಬಾಗಿಲು, ಕೋಲಾರ,ಮಾಲೂರು,ಶಿವಾಜಿನಗರ, ತುರುವೇಕೆರೆ, ತುಮಕೂರು ಸಿಟಿ, ಗ್ರಾಮೀಣ, ಕ್ಷೇತ್ರಗಳ ನಾಯಕರ ಯಾತ್ರೆಯಲ್ಲಿ ಇರುತ್ತಾರೆ. ಒಟ್ಟು 10 ಕ್ಷೇತ್ರದ ಶಾಸಕರು, ನಾಯಕರು ಭಾಗಿಯಾಗುವರು.
- ಅ.10 ರಂದು ಗುಬ್ಬಿಯ ಕೊಡಿಯಾಳದಿಂದ ಶಿರಾ ತಾಲೂಕಿನ ಬೆಂಚೆಗೆ ಯಾತ್ರೆಯಲ್ಲಿ ಹೊಸಕೋಟೆ, ಬಸವನಗುಡಿ, ಪದ್ಮನಾಭನಗರ, ಚಿಕ್ಕಮಗಳೂರು, ಕಡೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಅರಸಿಕೇರೆ, ಕೊರಟಗೆರೆ, ತಿಪಟೂರು, ಗುಬ್ಬಿ ಕ್ಷೇತ್ರದವರು ಸೇರಿದಂತೆ ಒಟ್ಟು 11 ಕ್ಷೇತ್ರದ ಶಾಸಕರು, ನಾಯಕರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
- ಅ.11ರಂದು ಶಿರಾ ಕಳಂಬೆಳ್ಳದಿಂದ ತುರುವೇಕೆರೆವರೆಗೆ ದೇವನಹಳ್ಳಿ, ಕೆಆರ್ ಪುರಂ,ಸಿವಿ ರಾಮನ್ನಗರ,ಮಹಾದೇವಪುರ,ಬೊಮ್ಮನಳ್ಳಿ, ಶ್ರೀನಿವಾಸಪುರ,ಕೆಜಿಎಫ್,ತೀರ್ಥಹಳ್ಳಿ, ಚಿಕ್ಕನಾಯಕನಹಳ್ಳಿ, ಶಿರಾ,ಮಧಗಿರಿ, ಕ್ಷೇತ್ರದವರು ಸೇರಿದಂತೆ ಒಟ್ಟು 11 ಕ್ಷೇತ್ರದವರು ಶಾಸಕರು, ನಾಯಕರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
- ಅ.12 ರಂದು ಹಿರಿಯೂರಿನ ಅನೆಸಿದ್ರಿದಿಂದ ಬಲೆನಹಳ್ಳಿವರೆಗೆ ಗೌರಿಬಿದನೂರು, ಬಾಗೇಪಲ್ಲಿ, ಶೃಂಗೇರಿ, ತರಿಕೇರೆ,ಹೊಸದುರ್ಗ, ಹೊನ್ನಾಳಿ, ಶಿವಮೊಗ್ಗ ಹಾಗೂ ಗ್ರಾಮೀಣ, ಸಿಕಾರಿಪುರ ಕ್ಷೇತ್ರದದವರು ಭಾಗಿಯಾಗಲಿದ್ದು, ಒಟ್ಟು 09 ಕ್ಷೇತ್ರದ ಶಾಸಕರು, ನಾಯಕರು, ಕಾರ್ಯಕರ್ತರು ಇರಲಿದ್ದಾರೆ.
- ಅ.13 ರಂದು ಐಕ್ಯತಾ ಯಾತ್ರೆಗೆ ವಿಶ್ರಾಂತಿ ಇರಲಿದೆ.
- ಅ.14 ರಂದು ಬಲೆನಹಳ್ಳಿಯಿಂದ ಸಿದ್ದಾಪುರಕ್ಕೆ ಯಾತ್ರೆ ಸಾಗಲಿದ್ದು, ಮಹಾಲಕ್ಷ್ಮಿ ಲೇಔಟ್,ಮಲ್ಲೇಶ್ವರಂ, ರಾಜಾಜೀನಗರ,ಹೊಳಲ್ಕೆರೆ, ದಾವಣಗೆರೆ ದಕ್ಷಿಣ ಮತ್ತು ಉತ್ತರ,ಚನ್ನಗಿರಿ, ಭದ್ರಾವತಿ, ಪಾವಗಡ ಕ್ಷೇತ್ರದವರು ಸೇರಿದಂತೆ ಒಟ್ಟು 09 ಕ್ಷೇತ್ರದ ಶಾಸಕರು,ನಾಯಕರು ಭಾಗಿಯಾಗುತ್ತಾರೆ.
- ಅ.15 ರಂದು ಚಳ್ಳಕೆರೆಯಿಂದ ಹೀರೆಹಳ್ಳಿಯ ಟೋಲ್ ಪ್ಲಾಜಾದವರೆಗೆ ನಡೆಯುವ ಯಾತ್ರೆಯಲ್ಲಿ ಹಿರಿಯೂರು, ಹಾನಗಲ್, ಬ್ಯಾಡಗಿ, ಹೀರೆಕೇರೂರು, ರಾಣೆಬೆನ್ನೂರು, ಸೊರಬ, ಸಾಗರ, ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ ಸೇರಿದಂತೆ ಒಟ್ಟು 12 ಕ್ಷೇತ್ರದ ಶಾಸಕರು, ನಾಯಕರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
- ಅ.16 ರಂದು ಮೊಳಕಾಲ್ಮೂರುನ ಬೊಮ್ಮಗೊಂಡನಕೆರೆಯಿಂದ ಮೊಳಕಾಲ್ಮೂರು ವರೆಗೆ ಚಳ್ಳಕೆರೆ, ಚಿತ್ರದುರ್ಗ, ಹರಿಹರ,ಮಾಯಕೊಂಡ, ನವಲಗುಂದ, ಕುಂದಗೋಳ, ಧಾರವಾಡ, ಕಲಘಟಗಿ, ಶಿರಹಟ್ಟಿ, ಗದಗ,ರೋಣ, ಶಿಗ್ಗಾಂವ,ಯಲ್ಲಾಪುರದವರು ಭಾಗಿಯಾಗಿ ಯಾತ್ರೆಯಲ್ಲಿ ಹೆಜ್ಜೆಹಾಕಲಿದ್ದು, ಒಟ್ಟು 17 ಕ್ಷೇತ್ರಗಳ ಜನ, ಶಾಸಕರು, ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದಾರೆ.
- ಅ. 17 ರಂದು ರಾಂಪುರದಿಂದ ಬಳ್ಳಾರಿ ಹಲೆಕುಂಡಿವರೆಗೆ ಯಮಕನಮರಡಿ, ಬೆಳಗಾವಿ ಉತ್ತರ, ದಕ್ಷಿಣ, ಗ್ರಾಮೀಣ, ಖಾನಾಪುರ, ಕಿತ್ತೂರು, ಬೈಲಹೊಂಗಲ, ಸವದತ್ತಿ, ರಾಮದುರ್ಗ,ಜಗಳೂರು, ಹಾವೇರಿ, ಹರಪನಹಳ್ಳಿ ಕ್ಷೇತ್ರದವರು ಸೇರಿದಂತೆ ಒಟ್ಟು 12 ಕ್ಷೇತ್ರದ ಶಾಸಕರು, ನಾಯಕರು, ಕಾರ್ಯಕರ್ತರು ಭಾಗಿಯಾಗುತ್ತಾರೆ.
- ಅ.18 ರಂದು ಐಕ್ಯತಾ ಯಾತ್ರೆಗೆ ವಿಶ್ರಾಂತಿ.
- ಅ.19 ರಂದು ಬಳ್ಳಾರಿಯ ಹಲೆಕುಂಡಿಯಿಂದ ನ್ಯೂ ಮೋಕದವರಿಗೆ ಯಾತ್ರೆ ಸಾಗಲಿದ್ದು, ಜಮಖಂಡಿ, ಬೀಳಗಿ, ಬಾದಾಮಿ, ಬಾಗಲಕೋಟೆ, ಹುನಗುಂದ,ನಿಪ್ಪಾಣಿ, ಚಿಕ್ಕೋಡಿ, ರಾಯಭಾಗ, ಹುಕ್ಕೇರಿ, ಅರಭಾವಿ, ಗೋಕಾಕ, ಕಂಪ್ಲಿ, ಶಿರಗುಪ್ಪ, ಬಳ್ಳಾರಿ ನಗರ,ಸಂಡೂರು, , ಮೊಳಕಾಲ್ಮೂರು ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಕೊಪ್ಪಳ, ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕುಡ್ಲಗಿ ಸೇರಿದಂತೆ ಒಟ್ಟು 26 ಕ್ಷೇತ್ರಗಳ ಶಾಸಕರು, ನಾಯಕರು, ಕಾರ್ಯಕರ್ತರು ಭಾಗಿಯಾಗಬೇಕು ಎಂದು ತಿಳಿಸಲಾಗಿದೆ.