ಬೆಂಗಳೂರು:ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಹಿನ್ನೆಲೆ ರಸ್ತೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ರಾಜಭವನದಲ್ಲಿ ನಾಳೆ ರಾಜ್ಯಪಾಲರು ಸರ್ಕಾರದ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಸಭಾಪತಿಗಳು, ಶಾಸಕರು ಹಾಗೂ ಹೆಚ್ವಿನ ಸಂಖ್ಯೆಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಭಾಗವಹಿಸಲಿದ್ದು ರಾಜಭವನದ ಸುತ್ತಮುತ್ತ ಯಾವುದೇ ತೊಂದರೆಯಾಗದ ರೀತಿ ನಗರ ಪೊಲೀಸ್ ಆಯುಕ್ತರು ಕ್ರಮ ಕೈಗೊಂಡಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12ಗಂಟೆಯವರೆಗೆ ರಾಜಭವನದ ಸುತ್ತಮುತ್ತ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ತಾತ್ಕಾಲಿಕವಾಗಿ ಪೊಲೀಸ್ ತಿಮ್ಮಯ್ಯ ಸರ್ಕಲ್ ಕಡೆಯಿಂದ ರಾಜಭವನದ ಸಂಚಾರಿಸುವ ವಾಹನಗಳನ್ನು ನಿಷೇಧಿಸಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ರಾಜಭವನ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.
ಕ್ವೀನ್ಸ್ ರಸ್ತೆಯಲ್ಲಿ ಬಂದು ಶಿವಾಜಿನಗರದಿಂದ ಮೆಜೆಸ್ಟಿಕ್ ಕಡೆಗೆ ಹಾಗೂ ಮಲ್ಲೇಶ್ವರಂ ಕಡೆ ಹೋಗುವ ಮಾರ್ಗ ಹೀಗಿದೆ:
ಕ್ವೀನ್ಸ್ ರಸ್ತೆ-ಬಾಳೆಕುಂದ್ರಿ ವೃತ್ತ-ಬಲ ತಿರುವು-ಕನ್ನಿಂಗ್ ಹ್ಯಾಂ ರಸ್ತೆ-ಚಂದ್ರಿಕಾ ಜಂಕ್ಷನ್-ಎಡ ತಿರುವು-ಎಲ್.ಆರ್‌ಡಿ.ಇ. ಜಂಕ್ಷನ್, ಬಸವೇಶ್ವರ ವೃತ್ತ ಪ್ಯಾಲೇಸ್ ರಸ್ತೆ, ಮಹಾರಾಣಿ ಅಂಡರ್ ಪಾಸ್-ಮೈಸೂರು ಬ್ಯಾಂಕ್ ವೃತ್ತದ ಮೂಲಕ ಮೆಜೆಸ್ಟಿಕ್ ತಲುಪಬಹುದು.
ಶಿವಾಜಿನಗರದಿಂದ/ಕ್ವೀನ್ಸ್ ರಸ್ತೆಯಲ್ಲಿ ಬರುವ ಎಲ್ಲಾ ರೀತಿಯ ವಾಹನಗಳು ಮೆಜೆಸ್ಟಿಕ್ ಕಡೆಗೆ ಹಾಗೂ ಸಿ.ಟಿ.ಮಾರ್ಕೆಟ್ ಕಡೆಗೆ ಹೋಗುವ ಮಾರ್ಗ:-
ಟ್ರಾಫಿಕ್ ಹೆಡ್ ಕ್ವಾರ್ಟರ್ ಜಂಕ್ಷನ್ - ಪಟ್ಟಾ ಜಂಕ್ಷನ್ - ಬಲ ತಿರುವು ಪೊಲೀಸ್ ತಿಮ್ಮಯ್ಯ ಜಂಕ್ಷನ್ ಎಡತಿರುವು - ಡಾ. ಅಂಬೇಡ್ಕರ್ ರಸ್ತೆ - ಗೋಪಾಲಗೌಡ ವೃತ್ತ - ಕೆ.ಆರ್. ವೃತ್ತ - ಬಲ ತಿರುವು.