ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಫೀಲ್ಡಿಗಿಳಿದ ಪೊಲೀಸರು: 10 ಗಂಟೆ ಬಳಿಕ ರಸ್ತೆಗಿಳಿದರೆ ಲಾಠಿ ರುಚಿ ಗ್ಯಾರಂಟಿ

ರಾಜ್ಯಾದ್ಯಂತ ಇಂದಿನಿಂದ ಲಾಕ್​​ಡೌನ್​ ಜಾರಿಯಾಗಿದ್ದು, ಬೆಳಗ್ಗೆ 10 ಗಂಟೆಯಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ವಿನಾಯಿತಿ ಅವಧಿ ವೇಳೆ ಅನಗತ್ಯ ಓಡಾಟ ನಡೆಸುವವರಿಗೆ ಪೊಲೀಸರು ಲಾಠಿ ರಚಿ ತೋರಿಸಿದರು.

Bengaluru Lockdown update
ಅನಗತ್ಯವಾಗಿ ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

By

Published : May 10, 2021, 8:58 AM IST

ಬೆಂಗಳೂರು: ಕೊರೊನಾ ಸರಪಳಿ ಬ್ರೇಕ್ ಮಾಡಲು ಇಂದಿನಿಂದ 14 ದಿನಗಳ ಕಾಲ ರಾಜ್ಯದಲ್ಲಿ ಕಠಿಣ ಲಾಕ್​​ಡೌನ್ ಜಾರಿಯಾಗಲಿದ್ದು, ಸಿಲಿಕಾನ್ ಸಿಟಿಯಲ್ಲಿ 10 ಗಂಟೆ ಬಳಿಕ ಅನಗತ್ಯವಾಗಿ ರಸ್ತೆಗಿಳಿದರೆ ವಾಹನ ಸೀಜ್ ಮಾಡಲು ಪೊಲೀಸರು ಸನ್ನದ್ಧರಾಗಿದ್ದಾರೆ.

ಕೆ.ಆರ್ ಮಾರ್ಕೆಟ್​​ನಲ್ಲಿ ವಿನಾಯಿತಿ ನೀಡಿದ ಅವಧಿಯಲ್ಲೇ ಪೊಲೀಸರು ಫೀಲ್ಡಿಗಿಳಿದಿದ್ದು, ಲಾಠಿ ಹಿಡಿದು ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸುವ ಪ್ರಕ್ರಿಯೆ ಆರಂಭಿಸಿದ್ದಾರೆ‌‌. ಇಲ್ಲ ಸಲ್ಲದ ಕಾರಣ ಹೇಳುವ ವಾಹನ ಸವಾರರಿಗೆ ಲಾಠಿ ಬಿಸಿ ಮುಟ್ಟಿಸುತ್ತಿದ್ದಾರೆ.

ಅನಗತ್ಯವಾಗಿ ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

ಓದಿ : ಚಿತ್ರದುರ್ಗದಲ್ಲಿ ಲಾಕ್ ಡೌನ್​ಗೆ ಡೋಂಟ್​​ ಕೇರ್ : ಬೆಳಂಬೆಳ್ಳಗ್ಗೆ 150 ಬೈಕ್​ ಸೀಜ್​

ಈಗಾಗಲೇ ಹೆಚ್ಚಿನ ಜನರನ್ನು ತುಂಬಿಸಿಕೊಂಡು ಹೋಗುತ್ತಿದ್ದ 10ಕ್ಕೂ ಹೆಚ್ಚು ಆಟೋಗಳನ್ನು ಸೀಜ್ ಮಾಡಲಾಗಿದ್ದು, 10 ಗಂಟೆ ಬಳಿಕ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ‌.

ABOUT THE AUTHOR

...view details