ಬೆಂಗಳೂರು:ಐಟಿ-ಬಿಟಿ ಸಿಟಿಯೆಂದೇ ಖ್ಯಾತವಾಗಿರುವ ಬೆಂಗಳೂರು, ಸ್ಮಾರ್ಟ್ ಸಿಟೀಸ್ ಮಿಷನ್ ಅಡಿಯಲ್ಲಿ, ಕೋವಿಡ್ ನಿರ್ವಹಣೆಗೆಂದು ಸಿದ್ಧಪಡಿಸಿದ "ಇಂಡೆಕ್ಸ್" ಅಪ್ಲಿಕೇಶನ್ಗೆ ಬಹುಮಾನ ದೊರೆತಿದೆ. ನವದೆಹಲಿಯಲ್ಲಿ ನಡೆದ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸ್ಮಾರ್ಟ್ ಸಿಟಿ ಮಿಷನ್ನ 6ನೇ ಆವೃತ್ತಿಯಡಿ ಈ ಬಹುಮಾನ ಬೆಂಗಳೂರು ಪಾಲಿಗೆ ಲಭಿಸಿದೆ.
ಐಸಿಎಂಆರ್ನಿಂದ ಕೋವಿಡ್ ಪಾಸಿಟಿವ್ ಪ್ರಕರಣಗಳ ಮಾಹಿತಿ ಪಡೆದು ತಕ್ಷಣವೇ ವಲಯವಾರು ಕಮಾಂಡ್ ಸೆಂಟರ್ಗಳಿಗೆ ಹಾಗೂ ಎಲ್ಲಾ ಫೀಲ್ಡ್ ತಂಡಗಳಿಗೆ ಮಾಹಿತಿ ನೀಡಿ ಕೋವಿಡ್ ಸೋಂಕಿತರಿಗೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತರಾಗಲು ಈ ಆ್ಯಪ್ ಸಹಾಯಕವಾಗುತ್ತಿದೆ. 24 ಗಂಟೆಗಳ ಕೆಲಸವನ್ನು ತಕ್ಷಣವೇ ಪೂರೈಸಲು ಇದು ನೆರವಾಗುತ್ತಿದೆ.