ಬೆಂಗಳೂರು:ಶಶಿಯ ಮೇಲಿರುವ ವಿಕ್ರಂ ಲ್ಯಾಂಡರ್ ಸಂಪರ್ಕಕ್ಕೆ ಇಸ್ರೋ ಸತತ ಪ್ರಯತ್ನ ಮಾಡ್ತಿದೆ. ಸದ್ಯ ಈ ಕುರಿತು ಕವನದ ಮೂಲಕ ಬೆಂಗಳೂರು ಪೊಲೀಸರು ಟ್ವೀಟ್ ಮಾಡಿದ್ದಾರೆ.
ಒಮ್ಮೆ ಮಾತನಾಡು ವಿಕ್ರಮ... ಕಾವ್ಯಾತ್ಮಕವಾಗಿ ಟ್ವೀಟ್ ಮಾಡಿದ ಬೆಂಗಳೂರು ಪೊಲೀಸರು - ಟ್ವೀಟ್
''ಹಗಲಿರುಳ ಶ್ರಮದ ಫಲ ನೀನು, ನಿನ್ನ ಮಾತಿಗಾಗಿ ಕಾಯುತಿರುವೆ ನಾನು, ಮೌನ ಮುರಿದು ಮಾತನಾಡು ಒಮ್ಮೆ, ಆಗುವುದೆಲ್ಲಾ ಆಗೇ ಬಿಡಲಿ ನಾನಿರುವೆ.." ಇಂತಿ ಭಾರತಾಂಬೆ ಎಂದು ನಗರ ಪೊಲೀಸರು ಟ್ವೀಟ್ ಮಾಡುವ ಮೂಲಕ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಭಾರತಾಂಬೆ ವಿಕ್ರಮನಿಗೆ ಹೇಳುವ ರೀತಿ ಪ್ರೀತಿಯ ವಿಕ್ರಮ್ ''ಹಗಲಿರುಳ ಶ್ರಮದ ಫಲ ನೀನು, ನಿನ್ನ ಮಾತಿಗಾಗಿ ಕಾಯುತಿರುವೆ ನಾನು, ಮೌನ ಮುರಿದು ಮಾತನಾಡು ಒಮ್ಮೆ, ಆಗುವುದೆಲ್ಲಾ ಆಗೇ ಬಿಡಲಿ ನಾನಿರುವೆ.." ಇಂತಿ ಭಾರತಾಂಬೆ ಎಂದು ಟ್ವೀಟ್ ಮಾಡುವ ಮೂಲಕ ವಿಕ್ರಮ ಸಂಪರ್ಕಕ್ಕೆ ಸಿಗದ ಅಳಲನ್ನ ವ್ಯಕ್ತಪಡಿಸಿದ್ದಾರೆ.
ಚಂದ್ರನ ಅಂಗಳ ತಲುಪುವ ಮೊದಲೇ ವಿಕ್ರಂ ಲ್ಯಾಡರ್ ನಾಪತ್ತೆಯಾಗಿತ್ತು. ಆದ್ರೆ ಇನ್ನೂ ಸಂಪರ್ಕಕ್ಕೆ ಸಿಗದ ಇಸ್ರೋ ಗೆ ಸಾಕಷ್ಟು ಜನ ಟ್ವೀಟ್ ಹಾಗೂ ಕೆಲ ಇನ್ನಿತರೆ ಸೋಷಿಯಲ್ ಮೀಡಿಯಾದಲ್ಲಿ ಶಕ್ತಿ ತುಂಬುವ ಪ್ರಯತ್ನ ಮಾಡ್ತಿದ್ದಾರೆ. ಅದರಲ್ಲಿ ನಮ್ಮ ನಗರ ಪೊಲೀಸರು ಕೂಡ ಆ ಕೆಲಸ ಮಾಡಿದ್ದಾರೆ.