ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ತನಿಖೆಯನ್ನು ಸಿಸಿಬಿ ಇನ್ನಷ್ಟು ಚುರುಕುಗೊಳಿಸಿದೆ. ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರೇ ಖುದ್ದಾಗಿ ತನಿಖೆ ನಡೆಸುತ್ತಿದ್ದಾರೆ.
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ಸಿಸಿಬಿ ತನಿಖೆ ಮತ್ತಷ್ಟು ಚುರುಕು
ಕರ್ನಾಟಕ ಪ್ರೀಮಿಯರ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ತನಿಖೆಯನ್ನು ಸಿಸಿಬಿ ಇನ್ನಷ್ಟು ಚುರುಕುಗೊಳಿಸಿದೆ.
ಬಂಧಿತ ಬಳ್ಳಾರಿ ಟಸ್ಕರ್ಸ್ ನಾಯಕ ಸಿ.ಎಂ. ಗೌತಮ್ ಹಾಗೂ ಇನ್ನೋರ್ವ ಆಟಗಾರ ಅಬ್ರಾರ್ ಖಾಜಿ 2019ರ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ಮಾಡಿಕೊಂಡು ನಿಧಾನಗತಿ ಆಟವಾಡಿದ್ದರು ಎನ್ನಲಾಗ್ತಿದೆ. ಹೀಗಾಗಿ ಹುಬ್ಬಳ್ಳಿ ಟೈಗರ್ಸ್ ತಂಡ ಫೈನಲ್ನಲ್ಲಿ ಗೆದ್ದು ಚಾಂಪಿಯನ್ ಆಗಿತ್ತು. ಬಳ್ಳಾರಿ ಟಸ್ಕರ್ಸ್ ಸೋಲಿಗೆ ಬಂಧಿತರಾದ ಇಬ್ಬರು ಮಾತ್ರ ಕಾರಣವಾ? ಅಥವಾ ತಂಡದಲ್ಲಿರುವ ಬೇರೆ ಆಟಗಾರರೇನಾದರೂ ಭಾಗಿಯಾಗಿದ್ದರಾ ಎಂಬ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಅಲ್ಲದೆ, ಗೌತಮ್ ಐಪಿಎಲ್ ಟೂರ್ನಿಯಲ್ಲೂ ಆಡಿರುವುದರಿಂದ, ಅಲ್ಲೇನಾದರೂ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದರಾ ಎಂಬ ಬಗ್ಗೆಯೂ ಸಿಸಿಬಿ ವಿಚಾರಣೆ ನಡೆಸುತ್ತಿದೆ.