ಕರ್ನಾಟಕ

karnataka

ETV Bharat / state

ಕಾರು ಅಪಘಾತ ಪ್ರಕರಣಕ್ಕೆ ದಿನಕ್ಕೊಂದು ತಿರುವು: ಘಟನೆ ನಡೆದ ಎರಡು ದಿನ ಮುಂಚೆ ಪಿಜಿ ಬಳಿ ಕರುಣಾ ಸಾಗರ್​​ - accident in mysore

ಇತ್ತೀಚೆಗೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಐಷಾರಾಮಿ ಆಡಿ ಕಾರಿನ ಡೆಡ್ಲಿ ಅಪಘಾತದಲ್ಲಿ 30ರೊಳಗಿನ ವಯಸ್ಸಿನ 7 ಮಂದಿ ಯುವಕ-ಯುವತಿಯರು ದಾರುಣವಾಗಿ ಮೃತಪಟ್ಟಿದ್ದರು. ಆದರೆ ದಾರುಣ ಅಂತ್ಯ ಕಂಡ ಈ ತಂಡ ಆ ದಿನ ಮಾತ್ರ ಜಾಲಿ ರೈಡ್ ಹೊರಟಿದ್ದಲ್ಲ. ಅಪಘಾತವಾದ ಅದೇ ಕಾರಲ್ಲಿ ಆಗಾಗ ಸುತ್ತಾಡುತ್ತಿದ್ದರು ಅನ್ನೋದು ತಿಳಿದುಬಂದಿದೆ.

Day to day turning for car accident case
ಕೋರಮಂಗಲ ಕಾರು ಅಪಘಾತ ಪ್ರಕರಣ

By

Published : Sep 2, 2021, 9:16 PM IST

ಬೆಂಗಳೂರು: ಕೋರಮಂಗಲದಲ್ಲಿ ನಡೆದ ಭೀಕರ ಕಾರು ಅಪಘಾತ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತಮಿಳುನಾಡಿನ ಹೊಸೂರು ವಿಧಾನಸಭಾ ಕ್ಷೇತ್ರದ ಡಿಎಂಕೆ ಶಾಸಕ ವೈ.ಪ್ರಕಾಶ್ ಎಂಬವರ ಪುತ್ರ ಕರುಣಾ ಸಾಗರ್ ಆಗಾಗ ಪಿಜಿಗೆ(ಪೇಯಿಂಗ್ ಗೆಸ್ಟ್‌) ಬಂದು ಹೋಗುತ್ತಿದ್ದ ಎಂಬುವುದು ಗೊತ್ತಾಗಿದೆ.

ಅಪಘಾತ ನಡೆದ ಎರಡು ದಿನಗಳಿಗೆ ಮುಂಚಿತವಾಗಿ ಪೇಯಿಂಗ್ ಗೆಸ್ಟ್​ಗೆ ಬಂದು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರು ಅಪಘಾತವಾಗಿ ದಿನಗಳು ಕಳೆಯುತ್ತಿವೆ. ಮೇಲ್ನೋಟಕ್ಕೆ ಅಪಘಾತಕ್ಕೆ ಅತಿಯಾದ ವೇಗ ಬಿಟ್ಟರೆ ಮತ್ಯಾವ ಕಾರಣಗಳು ಗೋಚರಿಸುತ್ತಿಲ್ಲ. ಹಾಗಾಗಿ ಆಡಿ ಕಂಪನಿಗೆ ಪೊಲೀಸರು ನೋಟಿಸ್ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಪರಿಣಿತರ ತಂಡ ಬಂದು ಅಪಘಾತಕ್ಕೆ ನಿಖರ ಕಾರಣ ಏನು ಎಂಬುವುದನ್ನು ಪರಿಶೀಲಿಸಲಿದೆ. ಹೀಗೆ ಅಪಘಾತಕ್ಕೆ ಕಾರಣ ತಿಳಿಯುವ ಕೆಲಸ ಒಂದು ಕಡೆಯಾದರೆ, ಕರುಣಾ ಸಾಗರ್ ಆಗಾಗ ಪಿಜಿಗೆ ಬಂದು ಹೋಗುತ್ತಿದ್ದ ಎಂಬುವುದು ಕೂಡ ಗೊತ್ತಾಗಿದೆ.

ಘಟನೆ ನಡೆದ ಎರಡು ದಿನ ಮುಂಚೆ ಪಿಜಿ ಬಳಿ ಕರುಣಾ ಸಾಗರ್​​ (ಸಿಸಿಟಿವಿ ದೃಶ್ಯ)

ದೃಶ್ಯ : 1

ಆಗಸ್ಟ್ 28 ಸಮಯ ರಾತ್ರಿ 12.28

ಅಪಘಾತವಾದ ಎರಡು ದಿನ ಮುಂಚೆ ಅಂದರೆ 28 ರ ರಾತ್ರಿ ಕರುಣಾ ಸಾಗರ್ ಸರಿಯಾಗಿ 1.28 ರಂದು ಉಳಿದ ಸ್ನೇಹಿತರನ್ನು ಕರೆದುಕೊಂಡು ಪಿಜಿಯಿಂದ ಹೊರಟಿದ್ದಾನೆ. ಪಿಜಿ ಮುಂದೆ ಕಾರ್ ಪಾರ್ಕ್ ಮಾಡಿ ಮತ್ತೆ ಎಲ್ಲರನ್ನು ಜಾಲಿ ರೈಡ್‌ಗೆ ಕರೆದೊಯ್ದಿದ್ದಾನೆ.

ದೃಶ್ಯ: 2

ಆಗಸ್ಟ್ 28 ಸಮಯ ರಾತ್ರಿ 1.05 12.28ಕ್ಕೆ ಹೋಗಿದ್ದ ಸ್ನೇಹಿತರ ತಂಡ ಮತ್ತೆ 1 ಗಂಟೆ 5 ನಿಮಿಷಕ್ಕೆ ಮತ್ತೆ ಪಿಜಿ ಬಳಿ ಬಂದಿದ್ದಾರೆ. ಹೀಗೆ ಬಂದವರು ಕರುಣಾ ಸಾಗರ್ ಬಿಟ್ಟು ಉಳಿದವರು ಪಿಜಿ ಒಳಹೋಗಿ ಮತ್ತೆ ರಾತ್ರಿ‌ 1.30 ರ ಸುಮಾರಿಗೆ ಜಾಲಿ ರೈಡ್ ಹೊರಟಿದ್ದಾರೆ.

ABOUT THE AUTHOR

...view details