ಕರ್ನಾಟಕ

karnataka

ETV Bharat / state

ಬೇಡ ಜಂಗಮ ಸಮುದಾಯಕ್ಕೆ ಎಸ್ಸಿ ಪ್ರಮಾಣಪತ್ರ ನೀಡುವಂತೆ ಸಿಎಂಗೆ ಮನವಿ

ಸ್ವಲ್ಪ ಸಮಯ ಕೊಡಿ ಕಾನೂನು ಪ್ರಕಾರ ಏನಿದೆ ಕಾನೂನು ತಜ್ಞರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ತಾವು ರಾಜ್ಯದಲ್ಲಿ ಅ.18ರಂದು ಕರೆ ಕೊಟ್ಟಿರುವ ಬೃಹತ್ ಪ್ರತಿಭಟನೆ ಕೈಬಿಡಿ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Beda Jangam community delegation visited CM
ಸಿಎಂ ಭೇಟಿ ಮಾಡಿದ ಬೇಡ ಜಂಗಮ ಸಮುದಾಯದ ನಿಯೋಗ

By

Published : Oct 16, 2022, 10:24 PM IST

ಬೆಂಗಳೂರು: ವಕೀಲ ಬಿ.ಡಿ ಹಿರೇಮಠ ನೇತೃತ್ವದಲ್ಲಿ ಬೇಡ ಜಂಗಮ ಸಮುದಾಯದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಭೇಟಿ ಮಾಡಿ ಚರ್ಚಿಸಿದ್ದಾರೆ. ಬೇಡ ಜಂಗಮ ಸಮುದಾಯಕ್ಕೆ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡುವಂತೆ ಹಿರೇಮಠ ನೇತೃತ್ವದ ನಿಯೋಗ ಸಿಎಂಗೆ ಮನವಿ ಮಾಡಿತು.

ಇತ್ತೀಚಿನ ವರ್ಷಗಳಲ್ಲಿ ಬೇಡ ಜಂಗಮರಿಗೆ ನೀಡಲಾಗುತ್ತಿದ್ದ ಜಾತಿ ಪ್ರಮಾಣ ಪತ್ರ ವಿತರಣೆಯನ್ನು ಅಧಿಕಾರಿಗಳು ನಿಲ್ಲಿಸಿದ್ದಾರೆ. ಇದರಿಂದ ಸಿಗುತ್ತಿದ್ದ ಸವಲತ್ತು ನಿಂತಿದೆ. ಅತ್ಯಂತ ಕಡು ಬಡವರನ್ನು ಒಳಗೊಂಡಿರುವ ಸಮುದಾಯ ಸರ್ಕಾರದ ಸಹಾಯವನ್ನೇ ಆಧರಿಸಿ ಬದುಕಿದೆ. ಹಿಂದೆಯೂ ಸಾಕಷ್ಟು ಸಾರಿ ನಾವು ಮನವಿ ಮಾಡಿದ್ದರೂ, ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಈಗಲೂ ಸಿಗದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಹಿರೇಮಠ ತಿಳಿಸಿದರು.

ಸಿಎಂ ಮಾತನಾಡಿ, ಸ್ವಲ್ಪ ಸಮಯ ಕೊಡಿ ಕಾನೂನು ಪ್ರಕಾರ ಏನಿದೆ ಕಾನೂನು ತಜ್ಞರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ತಾವು ರಾಜ್ಯದಲ್ಲಿ ಅ.18ರಂದು ಕರೆ ಕೊಟ್ಟಿರುವ ಬೃಹತ್ ಪ್ರತಿಭಟನೆ ಕೈಬಿಡಿ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸೋಣ. ಕಾನೂನು ಇಲಾಖೆ ಅಧಿಕಾರಿ ಜತೆ ಚರ್ಚಿಸಿ ಒಂದು ಉತ್ತಮ ನಿರ್ಧಾರ ಕೈಗೊಳ್ಳುತ್ತೇನೆ ಕಾಲಾವಕಾಶ ಕೊಡಿ. ಸರ್ಕಾರಕ್ಕೆ ಎಲ್ಲರ ಹಿತವೂ ಮುಖ್ಯ. ವಿವಿಧ ಇಲಾಖೆಗಳ ತಾಂತ್ರಿಕ ಅಡಚಣೆಯಿಂದ ಸಮಸ್ಯೆ ಎದುರಾಗಿರಬಹುದು. ಅಧಿಕಾರಿಗಳ ಜತೆ ಸಮಾಲೋಚಿಸಿ ಪರಿಸ್ಥಿತಿ ಅರ್ಥಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ:ಮೀನು ಸಸ್ಯಾಹಾರಿ, ತಿನ್ನೋರು ಮಾಂಸಹಾರಿ.. ಒಂದು ಸಾವಿರ ಮೀನುಗಾರರ ಸಂಘಗಳಿಗೆ ಸಹಾಯಧನ- ಸಿಎಂ ಬೊಮ್ಮಾಯಿ

ABOUT THE AUTHOR

...view details