ಬೆಂಗಳೂರು:ಶಾಲೆಗೆ ಮಕ್ಕಳನ್ನು ದಾಖಲಿಸಲು ಬಂದ ಪೋಷಕರೊಬ್ಬರ ಜೊತೆಯಲ್ಲಿ ಮುಖ್ಯ ಶಿಕ್ಷಕ ಅನುಚಿತವಾಗಿ ವರ್ತಿಸಿರುವ ಪ್ರಕರಣ ನಡೆದಿದೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೋದಂಡರಾಮಪುರದ ಮುಖ್ಯ ಶಿಕ್ಷಕ ಲೋಕೇಶಪ್ಪ ಶಾಲೆಯಲ್ಲೇ ಬಾಡಿ ಮಸಾಜ್ ಮಾಡಿಸಿಕೊಂಡಿದ್ದಾರೆ.
ಶಾಲೆಗೆ ಮಗುವನ್ನು ದಾಖಲಿಸಲು ಬಂದ ಪೋಷಕ ಮಹಿಳೆಯಿಂದ ಒತ್ತಾಯಪೂರ್ವಕವಾಗಿ ಈ ಕೃತ್ಯ ನಡೆಸಿದ್ದಾನೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ ವಿಶೇಷ ಆಯುಕ್ತರು ಮುಖ್ಯ ಶಿಕ್ಷಕನ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮುಖ್ಯ ಶಿಕ್ಷಕನ ಅಮಾನತುಗೊಳಿಸಿ ಆದೇಶ ಇದನ್ನೂ ಓದಿ: ಸಿಧು ವಿರುದ್ಧ ಯುದ್ಧ ಘೋಷಿಸಿದ ಕ್ಯಾಪ್ಟನ್.. ಪಂಜಾಬ್ ಸಿಎಂ ಆಗುವುದನ್ನ ತಪ್ಪಿಸಲು ಬಲಿಷ್ಠ ಅಭ್ಯರ್ಥಿ ಕಣಕ್ಕೆ..
ಪ್ರಕರಣದ ಪೂರ್ಣ ವಿವರ:
ಶಾಲೆಯ ಆವರಣದಲ್ಲಿಯೇ ಈ ರೀತಿ ಅಕ್ರಮ ಚಟುವಟಿಕೆ ನಡೆಸಿದ್ದ ಈತನ ಕಾಮಚೇಷ್ಟೆಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ವಿಚಾರಣೆ ವೇಳೆ ಮುಖ್ಯ ಶಿಕ್ಷಕ ತಾನು ವಿದ್ಯಾರ್ಥಿಯೊಂದಿಗೆ ಬಂದಿದ್ದ ಮಹಿಳೆಯಿಂದ ಬಾಡಿ ಮಸಾಜ್ ಮಾಡಿಸಿಕೊಂಡಿದ್ದನ್ನು ಒಪ್ಪಿಕೊಂಡಿದ್ದಾನೆ.
ಸರ್ಕಾರಿ ಶಾಲಾ ಕಟ್ಟಡದಲ್ಲಿ ಅದರಲ್ಲೂ ಕೆಲಸದ ಅವಧಿಯಲ್ಲಿ ಈ ರೀತಿ ದುರ್ವರ್ತನೆ ತೋರಿರುವ ಮುಖ್ಯ ಶಿಕ್ಷಕನ ವಿರುದ್ಧ ಪಾಲಿಕೆ ಕಠಿಣ ಕ್ರಮ ಜರುಗಿಸಿದೆ.