ಬೆಂಗಳೂರು :ಕಚೇರಿ, ಶಾಲಾ-ಕಾಲೇಜು, ಸಾರ್ವಜನಿಕರ ಆರೋಗ್ಯಕ್ಕೆ ಕ್ರಮ ಕೈಗೊಂಡಿದ್ದ ಬಿಬಿಎಂಪಿ ಮೇಲೆ ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರನ್ನು ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿಬಂದಿತ್ತು.
ಕೊನೆಗೂ ಪೌರಕಾರ್ಮಿಕರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ ಬಿಬಿಎಂಪಿ
ಪೌರಕಾರ್ಮಿಕರಿಗೆ ಸೋಂಕು ನಿವಾರಕ ದ್ರಾವಣ(ಸ್ಯಾನಿಟೈಸರ್) ವ್ಯವಸ್ಥೆ ಕಲ್ಪಿಸುವ ಮೂಲಕ ಬಿಬಿಎಂಪಿ ಸ್ವಚ್ಚತೆಯಿಂದಿರಲು ಪೌರಕಾರ್ಮಿಕರಿಗೆ ತಿಳಿಸಿದೆ.
ಸ್ಯಾನಿಟೈಸರ್ ವಿತರಿಸಿದ ಬಿಬಿಎಂ
ಕಡೆಗೂ ಎಚ್ಚೆತ್ತಿರುವ ಬಿಬಿಎಂಪಿ, ಪೌರಕಾರ್ಮಿಕರಿಗೆ ಸೋಂಕು ನಿವಾರಕ ದ್ರಾವಣ (ಸ್ಯಾನಿಟೈಸರ್) ವ್ಯವಸ್ಥೆ ಕಲ್ಪಿಸಿದೆ. ಕೆಲಸದ ಬಳಿಕ, ಮಸ್ಟರಿಂಗ್ ಸೆಂಟರ್ಗೆ ಹಾಜರಾತಿ, ತಿಂಡಿ, ಊಟ ಮಾಡಲು ಬರುವ ಪೌರಕಾರ್ಮಿಕರಿಗೆ ಸ್ಯಾನಿಟೈಸರ್ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಘನತ್ಯಾಜ್ಯ ವಿಶೇಷ ಆಯುಜ್ತ ರಂದೀಪ್ ಟ್ವಿಟರ್ ನಲ್ಲಿ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.