ಕರ್ನಾಟಕ

karnataka

ETV Bharat / state

ತೀವ್ರ ವಿವಾದಕ್ಕೀಡಾದ ಪಾದರಾಯನಪುರ ವಾರ್ಡ್ ರಸ್ತೆಗಳ ನಾಮಕರಣ ವಿಚಾರ : ಆಯುಕ್ತರಿಗೆ ಪತ್ರ ಬರೆದ ಅನಂತ್​ ಕುಮಾರ್​

ಬಿಬಿಎಂಪಿ ವ್ಯಾಪ್ತಿಯ ಪಾದರಾಯಪುರ ವಾರ್ಡಿನ ರಸ್ತೆಗಳಿಗೆ ಸಮಾಜ ಸೇವಕರ ಹೆಸರುಗಳನ್ನು ಇಡಲು ನಿರ್ಧರಿಸಿದೆ. ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಈ ಕುರಿತಂತೆ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಬಿಬಿಎಂಪಿ
BBMP

By

Published : Dec 31, 2020, 6:50 AM IST

ಬೆಂಗಳೂರು:ಬಿಬಿಎಂಪಿ ಪಾದರಾಯನಪುರ ವಾರ್ಡ್​ನ ಹನ್ನೊಂದು ರಸ್ತೆಗಳಿಗೆ ಸಮಾಜ ಸೇವಕರ ಹೆಸರುಗಳನ್ನು ನಾಮಕರಣ ಮಾಡಲು ನಿರ್ಧರಿಸಿದ್ದು, ಕೇವಲ ಒಂದು ಕೋಮಿನ ಜನರ ಹೆಸರನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ವಿರೋಧ ವ್ಯಕ್ತವಾಗಿದೆ.

ಸೆಪ್ಟೆಂಬರ್ 8, 2020ರಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ರಸ್ತೆ ನಾಮಕರಣದ ಹೆಸರುಗಳ ಬಗ್ಗೆ ತೀರ್ಮಾನಿಸಲಾಗಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಕುರಿತಂತೆ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಬಿಬಿಎಂಪಿ ಪಾದರಾಯನಪುರ ವಾರ್ಡ್​ ರಸ್ತೆಗಳಿಗೆ ಇಡಲು ನಿರ್ಧರಿಸಿರುವ ಹೆಸರುಗಳ ಪ್ರತಿ

ರಸ್ತೆಗಳ ಸ್ಥಳ ಮತ್ತು ಹೆಸರುಗಳ ವಿವರ:

  • ಹೆಚ್.ಎಂ.ರಸ್ತೆ ಪಾದರಾಯನಪುರ- ಪೆಹಲ್ವಾನ್ ಫಾರೂಕ್ ಪಾಶ ಸಾಬ್ ಸರ್ಕಲ್
  • 10ನೇ ಅಡ್ಡರಸ್ತೆ - ಪೆಹಲ್ವಾನ್ ಫಾರೂಕ್ ಪಾಶ ಸಾಬ್ ರಸ್ತೆ
  • 7ನೇ ಅಡ್ಡರಸ್ತೆ- ಟೋಪಿ ಬರಫೀಕ್ ಸಾಬ್ ರಸ್ತೆ
  • 7ನೇ ಮುಖ್ಯರಸ್ತೆ- ರೋಷನ್ ಫಯಾಜ್ ಸಂಗಮ ಸರ್ಕಲ್
  • 9ನೇ ಅಡ್ಡರಸ್ತೆ- ಆಲೀಲ್ ಪಟೇಲ್ ರಸ್ತೆ
  • 7ನೇ ಅಡ್ಡರಸ್ತೆ, ವಿನಾಯಕನಗರ- ಎಲ್ಡಿರ್ ಬಾಬು ಸಾಬ್ ರಸ್ತೆ
  • 8ನೇ ಮುಖ್ಯರಸ್ತೆ, ಪಾದರಾಯನಪುರ- ಹಾಜಿಹಬೀಬ್ ಬೇಗ್ ರಸ್ತೆ
  • 11ನೇ ಸಿ ಅಡ್ಡರಸ್ತೆ- ಹಾಜಿ ವಝೀರ್ ಸಾಬ್ ರಸ್ತೆ
  • 9ನೇ ಕ್ರಾಸ್, ರೆಹ್ಮಾನಿಯಾ ಮಸೀದಿ ರಸ್ತೆ- ಹಾಜಿಬಶಾಮಿರ್ ಸಾಬ್ ರಸ್ತೆ
  • 13ನೇ ಸಿ ಅಡ್ಡರಸ್ತೆ- ಹಾಜಿ ದಸ್ತಗೀರ್ ರಸ್ತೆ
  • 10ನೇ ಮುಖ್ಯರಸ್ತೆ- ಹಾಜಿ ನೂರ್ ಸಾಬ್ ರಸ್ತೆ
    ಸಂಸದ ಅನಂತ್ ಕುಮಾರ್ ಹೆಗಡೆ ಅವರು ಆಯುಕ್ತರಿಗೆ ಬರೆದಿರುವ ಪತ್ರ

ಈ ನಾಮಕರಣಗಳ ಬಗ್ಗೆ ಆಕ್ಷೇಪಣೆ ಇದ್ದಲ್ಲಿ 30 ದಿನಗಳ ಒಳಗೆ ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಲು ಡಿ.12ರಂದು ತಿಳಿಸಲಾಗಿದೆ. ಇದಕ್ಕೆ ಈಗಾಗಲೇ ಸಂಸದ ಅನಂತ್ ಕುಮಾರ್ ಹೆಗಡೆ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಆಕ್ಷೇಪಣೆ ಸಲ್ಲಿಸಿದ್ದಾರೆ. ಸಮಾಜ ಸೇವಕರ ಹೆಸರಿನಲ್ಲಿ ಕೋಮು ವೈಭವೀಕರಣ ಮಾಡುವುದು ಸರಿಯಲ್ಲ. ಇದು ಪಾಲಿಕೆಯ ಬೇಜವಾಬ್ದಾರಿತನದ ಪರಮಾವಧಿ ಎಂದು ಆಕ್ರೋಶ ಹೊರ ಹಾಕಿದ್ದಾರೆ. ರಸ್ತೆಗಳಿಗೆ ನಾಮಕರಣ ಮಾಡುವ ಅಗತ್ಯವಿದ್ದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡುವಂತೆ ಸೂಚಿಸಿದ್ದಾರೆ.

ABOUT THE AUTHOR

...view details