ಕರ್ನಾಟಕ

karnataka

ಕುಸಿದ ಕಟ್ಟಡದ ಪ್ರದೇಶ ಸಂಪೂರ್ಣ ಪಾಲಿಕೆ ವಶಕ್ಕೆ.. ಸಮರೋಪಾದಿಯಲ್ಲಿ ತೆರವು ಕಾರ್ಯಾಚರಣೆ..

By

Published : Sep 27, 2021, 9:20 PM IST

ಈ ಕಟ್ಟಡವನ್ನ 1962ರಲ್ಲಿ ನಿರ್ಮಿಸಲಾಗಿತ್ತು. ಕಟ್ಟಡ ವಾಲಿದ ಹಿನ್ನೆಲೆ ಬೆಳಗ್ಗೆ ಕಾರ್ಮಿಕರನ್ನು ಕಟ್ಟಡದಿಂದ ತೆರವು ಮಾಡಲಾಗಿತ್ತು. ಮುಂಜಾಗ್ರತೆಯಿಂದ ಕಾರ್ಮಿಕರನ್ನು ಮೊದಲೇ ತೆರವು ಮಾಡಿದ್ದರಿಂದ ಭಾರೀ ದುರಂತ ತಪ್ಪಿದಂತಾಗಿದೆ. ಒಂದು ವೇಳೆ ಕಟ್ಟಡ ರಾತ್ರಿ ವೇಳೆ ಕುಸಿದಿದ್ದರೆ 50ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪುವ ಸಾಧ್ಯತೆ ಇತ್ತು ಎಂಬ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ..

BBMP made clearance work going on in Lakkasandra
ಕುಸಿದ ಕಟ್ಟಡದ ಪ್ರದೇಶ ಸಂಪೂರ್ಣ ಪಾಲಿಕೆ ವಶಕ್ಕೆ

ಬೆಂಗಳೂರು :ಲಕ್ಕಸಂದ್ರದಲ್ಲಿ ಏಕಾಏಕಿ ಕಟ್ಟಡ ಕುಸಿದ ಘಟನೆ ಸಂಬಂಧ ಪಾಲಿಕೆ ಸ್ಪಷ್ಟನೆ ನೀಡಿದೆ. ಯಾವುದೇ ಆಸ್ತಿ-ಪಾಸ್ತಿ, ಪ್ರಾಣಹಾನಿ ಸಂಭವಿಸಿಲ್ಲ. ಕಟ್ಟಡವನ್ನು ವಶಕ್ಕೆ ಪಡೆದು ಅವಶೇಷಗಳ ತೆರವು ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದೆ.

ಘಟನೆ ಸಂಬಂಧ ಪಾಲಿಕೆ ಸ್ಪಷ್ಟನೆ ನೀಡಿದೆ. ಬಿಬಿಎಂಪಿ ದಕ್ಷಿಣ ವಲಯದ ವಾರ್ಡ್ ಸಂಖ್ಯೆ 145ರ ವ್ಯಾಪ್ತಿಯ ಲಕ್ಕಸಂದ್ರದಲ್ಲಿ ಸುಮಾರು 70 ವರ್ಷಗಳ ಹಳೆಯ ಶಿಥಿಲಾವ್ಯವಸ್ಥೆಯಲ್ಲಿದ್ದ 3 ಅಂತಸ್ತಿನ ಕಟ್ಟಡ ಬೆಳಗ್ಗೆ ಸುಮಾರು 10.30ರ ಸಮಯದಲ್ಲಿ ಕುಸಿದು ಬಿದ್ದಿದೆ.

ಖಾಲಿ ಇರುವ ಕಟ್ಟಡವನ್ನು ಮೆಟ್ರೋ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಬಾಡಿಗೆ ನೀಡಲಾಗಿತ್ತು. ಕಾರ್ಮಿಕರು ಕೆಲಸಕ್ಕೆ ಹೋಗಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಲಿ, ಆಸ್ತಿ-ಪ್ರಾಸ್ತಿಗೆ ನಷ್ಟವಾಗಿಲ್ಲ. ಸುತ್ತಮುತ್ತಲಿನ ಸಾರ್ವಜನಿಕರಿಗೆ ಕೂಡ ಯಾವುದೇ ತೊಂದರೆಯಾಗಿಲ್ಲ ಎಂದಿದೆ.

ಪೊಲೀಸ್ ಠಾಣೆಗೆ ದೂರು :ಸ್ಥಳಕ್ಕೆ ಶಾಸಕ ಉದಯ್ ಗರುಡಾಚಾರ್ ಭೇಟಿ ನೀಡಿ ತಪಾಸಣೆ ನಡೆಸಿದರು. ಕಟ್ಟಡದ ಮಾಲೀಕ ಸುರೇಶ್ ಶಿಥಿಲಾವ್ಯವಸ್ಥೆಯಲ್ಲಿನ ಕಟ್ಟಡದಲ್ಲಿ 50ರಿಂದ 60 ಜನರಿಗೆ ವಾಸ್ತವ್ಯ ಮಾಡಲು ಬಾಡಿಗೆ ನೀಡಿ ಪ್ರಾಣಹಾನಿಗೆ ಕಾರಣ ಆಗುತ್ತಿದ್ದ ಹಿನ್ನೆಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಫ್​​ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾತ್ರಿ ಕುಸಿದಿದ್ದರೆ 50ಕ್ಕೂ ಹೆಚ್ಚು ಜನ ಸಾವು :ಈ ಕಟ್ಟಡವನ್ನ 1962ರಲ್ಲಿ ನಿರ್ಮಿಸಲಾಗಿತ್ತು. ಕಟ್ಟಡ ವಾಲಿದ ಹಿನ್ನೆಲೆ ಬೆಳಗ್ಗೆ ಕಾರ್ಮಿಕರನ್ನು ಕಟ್ಟಡದಿಂದ ತೆರವು ಮಾಡಲಾಗಿತ್ತು. ಮುಂಜಾಗ್ರತೆಯಿಂದ ಕಾರ್ಮಿಕರನ್ನು ಮೊದಲೇ ತೆರವು ಮಾಡಿದ್ದರಿಂದ ಭಾರೀ ದುರಂತ ತಪ್ಪಿದಂತಾಗಿದೆ. ಒಂದು ವೇಳೆ ಕಟ್ಟಡ ರಾತ್ರಿ ವೇಳೆ ಕುಸಿದಿದ್ದರೆ 50ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪುವ ಸಾಧ್ಯತೆ ಇತ್ತು ಎಂಬ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Live video: ಬೆಂಗಳೂರಿನಲ್ಲಿ ನೋಡ ನೋಡುತ್ತಿದ್ದಂತೆ ಕಟ್ಟಡ ಕುಸಿತ.. ಸ್ವಲ್ಪದರಲ್ಲೇ ತಪ್ಪಿದ ಅನಾಹುತ

ABOUT THE AUTHOR

...view details