ಕರ್ನಾಟಕ

karnataka

By

Published : Mar 16, 2020, 3:31 PM IST

Updated : Mar 16, 2020, 3:40 PM IST

ETV Bharat / state

ಕೊರೊನಾ ಆತಂಕ : ಸರ್ಕಾರದ ಆದೇಶ ಧಿಕ್ಕರಿಸಿ ಸಭೆ ನಡೆಸಿದ ಬಿಬಿಎಂಪಿ

ಸರ್ಕಾರದ ಆದೇಶ ಧಿಕ್ಕರಿಸಿ ಬಿಬಿಎಂಪಿ 300 ಕ್ಕೂ ಹೆಚ್ಚು ಅಧಿಕಾರಿಗಳನ್ನು ಒಂದೆಡೆ ಸೇರಿಸಿ ಸಭೆ ನಡೆಸಿದೆ.

BBMP held meeting against Government order
ಬಿಬಿಎಂಪಿ ಸಭೆ

ಬೆಂಗಳೂರು: ಸರ್ಕಾರದ ಸ್ಥಳೀಯ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ ಸರ್ಕಾರದ ಆದೇಶ ಧಿಕ್ಕರಿಸಿದೆ.

ಬಿಬಿಎಂಪಿ ಸಭೆ

ಒಂದು ವಾರ ಕಾಲ ಯಾವುದೇ ಸಭೆ, ಸಮಾರಂಭ, ನಡೆಸದಂತೆ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಪಾಲಿಕೆಯೇ 300ಕ್ಕೂ ಹೆಚ್ಚು ಅಧಿಕಾರಿಗಳನ್ನು ಒಂದೆಡೆ ಸೇರಿಸಿ ಸಭೆ ನಡೆಸಿದೆ. ನಗರದಲ್ಲಿರುವ ಮಾಲ್, ಥಿಯೇಟರ್​ಗಳನ್ನು ಬಂದ್ ಮಾಡಿಸಿ, ಮದುವೆ ಮಂಟಪಗಳಿಗೂ ನೋಟಿಸ್​​ ನೀಡಿದ್ದ ಬಿಬಿಎಂಪಿ, 100 ಕ್ಕಿಂತ ಹೆಚ್ಚು ಜನರು ಸೇರದಂತೆ ಎಲ್ಲರಿಗೂ ಖಡಕ್ ಆದೇಶ ನೀಡಿತ್ತು.

ಆದರೆ ಬಿಬಿಎಂಪಿಯಿಂದಲೇ ಆದೇಶ ಉಲ್ಲಂಘನೆಯಾಗಿದ್ದು, ನಗರದ ಟೌನ್​ಹಾಲ್​ನಲ್ಲಿ 300 ಕ್ಕೂ ಅಧಿಕ ಸಿಬ್ಬಂದಿಗೆ ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ಕ್ರಮಗಳು, ಮುನ್ನೆಚ್ಚರಿಕೆ ಬಗ್ಗೆ ಸಭೆ ಹಾಗೂ ತರಬೇತಿ ಕಾರ್ಯಕ್ರಮ ನಡೆಸಿದೆ. ಪಾಲಿಕೆಯ ಆರೋಗ್ಯಾಧಿಕಾರಿ, ಜಂಟಿ ಆಯುಕ್ತರು , ಸಿಬ್ಬಂದಿ ಸೇರಿ ಸಭೆ ನಡೆಸಿದರು. ಬಿಬಿಎಂಪಿಯ ಈ ಕೆಲಸ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.

Last Updated : Mar 16, 2020, 3:40 PM IST

ABOUT THE AUTHOR

...view details