ಕರ್ನಾಟಕ

karnataka

By

Published : Oct 25, 2019, 11:54 PM IST

ETV Bharat / state

ತಾಜ್ ವೆಸ್ಟ್ ಎಂಡ್ ಹೋಟೆಲ್​​​ಗೂ ದಂಡದ ರುಚಿ ತೋರಿಸಿದ ಪಾಲಿಕೆ: ಯಾಕೀ ಕ್ರಮ ಗೊತ್ತೇ?

ಪ್ರತಿಷ್ಟಿತ ಖಾಸಗಿ ಹೋಟೆಲ್ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಗೆ ಬಿಬಿಎಂಪಿ ದಂಡದ ರುಚಿ ತೋರಿಸಿದೆ.

ತಾಜ್ ವೆಸ್ಟ್ ಎಂಡ್ ಹೋಟೇಲ್ ಗೂ ದಂಡದ ರುಚಿ ತೋರಿಸಿದ ಪಾಲಿಕೆ

ಬೆಂಗಳೂರು:ಪ್ರತಿಷ್ಟಿತ ಖಾಸಗಿ ಹೋಟೆಲ್ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಗೆ ಬಿಬಿಎಂಪಿ ದಂಡದ ರುಚಿ ತೋರಿಸಿದೆ.

ಕಸ ಪ್ರತ್ಯೇಕಿಸದೇ ಇರುವುದಕ್ಕೆ, ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದದ್ದು ದಿಢೀರ್ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಅಡುಗೆಗೆ ಕೆಟ್ಟು ಹೋದ ತರಕಾರಿ ಬಳಸಲಾಗುತ್ತಿತ್ತು ಎಂಬ ಅಂಶವೂ ಬಹಿರಂಗವಾಗಿದೆ.

ಸ್ಮೋಕಿಂಗ್ ಝೋನ್ ಪ್ರತ್ಯೇಕವಾಗಿ ಮಾಡುವುದು ಕಡ್ಡಾಯವಾಗಿದ್ದು, ಹೋಟೆಲ್ ಈ ನಿಯಮ ಪಾಲಿಸಿಲ್ಲ. ಹೀಗಾಗಿ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details