ಬೆಂಗಳೂರು:ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ತ್ವರಿತ ಸಂಪರ್ಕ ಪತ್ತೆ ಹಚ್ಚುವಿಕೆ ಹಾಗೂ ಕೋವಿಡ್ ಸೋಂಕು ಪರೀಕ್ಷೆಗೆ ಟಾರ್ಗೆಟ್ ನೀಡಿ, ನಿಯಂತ್ರಣ ಕೆಲಸ ತ್ವರಿತಗೊಳಿಸಲು ಬಿಬಿಎಂಪಿ ಆಯುಕ್ತರು ಕೋವಿಡ್ ಹೆಚ್ಚು ಪತ್ತೆಯಾಗುತ್ತಿರುವ ವಲಯಗಳ ಕಂಟ್ರೋಲ್ ರೂಂಗಳ ಸಭೆ ನಡೆಸುತ್ತಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಪ್ರಧಾನಮಂತ್ರಿಗಳು ಹೇಳಿದಂತೆ ನಾವು ತ್ರಿ ಸೂತ್ರವನ್ನು ಅನುಸರಿಸುತ್ತಾ ಬಂದಿದ್ದೇವೆ. ಸಿಎಂ, ಪಿಎಂ ಸೂಚನೆಯಂತೆ ಕೋವಿಡ್ ಕೆಲಸ ಜಾರಿಯಲ್ಲಿದೆ. ಮಾರ್ಚ್ ತಿಂಗಳಲ್ಲಿ ಪಾಸಿಟಿವ್ ರೇಟ್ ಪ್ರಮಾಣ ಹೆಚ್ಚಾಗಿದೆ.
17 ದಿನಗಳಲ್ಲಿ ಪ್ರತಿ ನಿತ್ಯ 20 ಸಾವಿರದಿಂದ 40 ಸಾವಿರ ಟೆಸ್ಟ್ಗೆ ಟಾರ್ಗೆಟ್ ನೀಡಲಾಗಿದ್ದು, ಹೆಚ್ಚು ಹೆಚ್ಚು ಟೆಸ್ಟ್ ಮಾಡುತ್ತಿರುವುದರಿಂದ ಪಾಸಿಟಿವ್ ಕೇಸ್ಗಳ ಪ್ರಮಾಣ ಸಹ ಹೆಚ್ಚಾಗಿ ಸಿಗುತ್ತಿದೆ. ಪಾಸಿಟಿವ್ ಪ್ರಕರಣಗಳು ಬಂದ ಪ್ರದೇಶಗಳಲ್ಲಿ ಹೆಚ್ಚಿನ ಟೆಸ್ಟ್ ಮಾಡುವ ಮೂಲಕ ಸೋಂಕಿನ ಮೂಲ ಹಾಗೂ ಹರಡುವಿಕೆಯ ಪ್ರಮಾಣ ಗುರುತಿಸಿ ಸೂಕ್ತವಾದ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಪೂರ್ವ ವಲಯದ ಕಂಟ್ರೋಲ್ ರೂಂ ಸಭೆಯ ವೇಳೆ ತಿಳಿಸಿದರು.
ಪೂರ್ವ ವಲಯದ 5 ವಾರ್ಡ್ಗಳು ಡೇಂಜರ್!
ದಿನವೊಂದಕ್ಕೆ 50 ಸಾವಿರ ಜನರ ಕೋವಿಡ್ ಸೋಂಕು ಪರೀಕ್ಷೆಗೆ ಹೆಚ್ಚಳ ಮಾಡಲು ಸಿದ್ಧತೆ ಮಾಡಲಾಗುತ್ತಿದೆ. ಪೂರ್ವ ವಲಯದ 44 ವಾರ್ಡ್ಗಳ ಪೈಕಿ ಐದು ವಾರ್ಡ್ಗಳಾದ ಮಾರುತಿ ಸೇವಾ ನಗರ, ಬಾಣಸವಾಡಿ, ನ್ಯೂ ತಿಪ್ಪಸಂದ್ರ, ಕೋಣೇನ ಅಗ್ರಹಾರ, ಶಾಂತಲಾ ನಗರದಲ್ಲಿ ಹೆಚ್ಚು ಪ್ರಕರಣಗಳಯ ಕಂಡು ಬರುತ್ತಿದ್ದು, ಹೆಚ್ಚು ಟೆಸ್ಗೆ ಸೂಚಿಸಲಾಗಿದೆ. ಜೊತೆಗೆ ಹೆಚ್ಚು ಲಸಿಕೆ ನೀಡಲು ಸಹ ಸೂಚಿಸಲಾಗಿದೆ. ಪಾಸಿಟಿವ್ ಬಂದವರಿಗೆ ಬೇಕಾದ ಎಲ್ಲಾ ಸೌಲಭ್ಯ ಹಾಗೂ ಸಂಪರ್ಕಿತರನ್ನು ಐಸೋಲೇಟ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಪಾಸಿಟಿವ್ ಪ್ರಮಾಣ 1.3%:
ನಗರದಲ್ಲಿ 1.3% ಪಾಸಿಟಿವಿಟಿ ಪ್ರಮಾಣವಿದ್ದು, ಮರಣ ಪ್ರಮಾಣ .62% ಇದೆ. ಇದು ನಿಯಂತ್ರಣದಲ್ಲಿರುವುದು ಸಮಾಧಾನಕರ ವಿಚಾರ. ಹೀಗಾಗಿ ಸಂಪರ್ಕಿತರ ಪತ್ತೆಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಹೆಚ್ಚು ಹರಡದಂತೆ ಕ್ರಮ ಕೈಗೊಳ್ಳಲಾಗುವುದು. ಸದ್ಯ ಹೆಚ್ಚು ಟೆಸ್ಟ್ ಮಾಡುತ್ತಿರುವುದರಿಂದಲೇ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ ಎಂದರು.
ಪ್ರತಿ ದಿನ ತರಬೇತಿ: