ಬೆಂಗಳೂರು: ಎಸ್ಆರ್ ಲೇಔಟ್ ನಿವಾಸಿಗಳು ಹಸಿ ಕಸ ಹಾಗೂ ಒಣ ಕಸ ವಿಭಾಗಿಸದೆ ಒಟ್ಟಿಗೆ ಮಿಶ್ರಣ ಮಾಡಿ ಕೊಡುತ್ತಿದ್ದರಿಂದ ಬೇಸತ್ತ ಬಿಬಿಎಂಪಿ, ಇದೀಗ ಒಂದು ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.
ಬೆಂಗಳೂರಿಗರೆ ಹುಷಾರ್... ಇನ್ಮುಂದೆ ಮಿಶ್ರ ಕಸ ಕೊಟ್ರೆ ಬಿಬಿಎಂಪಿಯಿಂದ ದಂಡ ತಪ್ಪಿದ್ದಲ್ಲ...!
ಕಸ ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ಈಗಾಗಲೇ ಹಲವಾರು ಭಾರಿ ಬಿಬಿಎಂಪಿ ಜಾಗೃತಿ ಮೂಡಿಸಿದ ಹೊರತಾಗಿಯೂ ಸಾರ್ವಜನಿಕರು ಮತ್ತೆ ಅಜಾಗ್ರತೆ ವಹಿಸುತ್ತಿರುವುದರಿಂದ ಹೆಚ್ಎಸ್ಆರ್ ಲೇಔಟ್ ನಿವಾಸಿಗಳಿಗೆ ಒಂದು ಸಾವಿರ ರೂಪಾಯಿ ದಂಡ ಹಾಕಲಾಗಿದೆ.
ಶಾಂತಿನಗರದ ಹೆಚ್ಡಿಎಫ್ಸಿ ಬ್ಯಾಂಕ್ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದಿದ್ದರಿಂದ ಹತ್ತು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಇನ್ನು ಮುಂದೆ ನಗರದ ಎಲ್ಲಾ ಕಡೆ ಇದೇ ನಿಯಮ ಜಾರಿಯಾಗಲಿದ್ದು, ಕಸದ ಆಟೋಗೆ ನಿಮ್ಮ ಕಸ ಕೊಡುವ ಮೊದಲು ಹಸಿ ಕಸ, ಒಣ ಕಸ ಪ್ರತ್ಯೇಕವಾಗಿಸಿ ಕೊಡಿ ಎಂದು ಮಾರ್ಷಲ್ಸ್ ಹಾಗೂ ಕಿರಿಯ ಆರೋಗ್ಯ ಪರಿವೀಕ್ಷಕರು ದಂಡ ವಿಧಿಸಿ ಎಚ್ಚರಿಸಿದ್ದಾರೆ.
ಹಾಗೆಯೇ, ಆಯುಕ್ತರಾದ ಮಂಜುನಾಥ್ ಪ್ರಸಾದ್ ಹಾಗೂ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಭೈರಸಂದ್ರ ವಾರ್ಡ್-169ಗೆ ಭೇಟಿ ನೀಡಿ ನೂತನ ಮಾದರಿಯ ತ್ಯಾಜ್ಯ ನಿರ್ವಹಣೆಗೆ ಹೊಸ ಟೆಂಡರ್ ಕಸ ವಿಲೇವಾರಿ ಪ್ರಕ್ರಿಯೆ ಕುರಿತು ಪೌರಕಾರ್ಮಿಕರು, ಮಾರ್ಷಲ್ಗಳು, ಚಾಲಕರು, ಹೆಲ್ಪರ್ಸ್, ಲಿಂಕ್ ವರ್ಕರ್ಸ್ಗಳಿಗೆ ತರಬೇತಿ ನೀಡಿದರು.