ಬೆಂಗಳೂರು: ಹಿರಿಯರು ನಿವೃತ್ತಿಯಾದರೆ ನಾವು ಮುಂದೆ ಕೂರಬಹುದು ಎಂದು ಬಸನಗೌಡ ಯತ್ನಾಳ್ ಸಿಎಂಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ನಿಮ್ಮದು ಮಿಲಾಪಿ ಕುಸ್ತಿಯಾಗಿದೆ. ನೀವು ಇಬ್ಬರು ಅರ್ಥ ಮಂತ್ರಿಗಳು ಒಬ್ಬರೇ ಇದ್ದೀರಿ. ಬಾದಾಮಿಗಂತೂ ಅನುದಾನ ಬಂದೇ ಬರುತ್ತದೆ. ನೀವು ನಿಂತು ಒಂದು ಗಂಟೆ ಭಾಷಣ ಮಾಡುತ್ತೀರಾ. ನಾವೂ ಹುಚ್ಚರಂತೆ ಹಿಂದೆ ಕೂತು ಕೇಳುತ್ತೇವೆ ಅಷ್ಟೇ. ಆಮೇಲೆ ಚಪ್ಪಾಳೆ ತಟ್ಟುತ್ತೇವೆ ಎಂದರು.
ಸುಮ್ನೆ ನೀವ್ಯಾಕೆ ಸರ್ಕಾರನ ಪ್ರಶ್ನೆ ಮಾಡ್ತೀರ, ನೀವಿಬ್ಬರು ಒಂದೇ ಎಂದರು. ಈ ವೇಳೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರಶ್ನೆ ಮಾಡೋ ಕೆಲಸ ನನ್ನದು, ನೀವ್ಯಾಕೆ ಮಾಡ್ತೀರಾ ಅಂತ ಯತ್ನಾಳ್ ಪ್ರಶ್ನೆ ಮಾಡ್ತಿದ್ದಾರೆ ಎಂದು ಕಾಲೆಳೆದರು.