ಬೆಂಗಳೂರು:ಈಗಂತೂ ಎಲ್ಲಾ ಇಲಾಖೆಗಳು ಆನ್‌ಲೈನ್‌ಮಯ ಆಗಿಬಿಟ್ಟಿವೆ. ಬಹುತೇಕ ಎಲ್ಲಾ ವ್ಯವಹಾರಗಳು ಆನ್‌ಲೈನ್ ಮೂಲಕವೇ ನಡೆಯುತ್ತಿದೆ. ಮೊಬೈಲ್ ಕೈಯಲ್ಲಿದ್ದರೆ ಕೂತಲ್ಲೇ ಎಲ್ಲ ಕೆಲಸವನ್ನೂ ಮಾಡಿ ಮುಗಿಸಬಹುದು. ಸದ್ಯ ರೈಲ್ವೇ ಪ್ರಯಾಣದ ಟಿಕೆಟ್ ಖರೀದಿಸಲು ಪ್ರಯಾಣಿಕರು ಹೆಚ್ಚಾಗಿ ಆನ್‌ಲೈನ್ ಮೊರೆ ಹೋಗುತ್ತಿದ್ದಾರೆ.
ಆನ್‌ಲೈನ್ ರೈಲ್ವೇ ಟಿಕೆಟ್ ಬುಕ್ಕಿಂಗ್: ಬೆಂಗಳೂರಿಗರದ್ದೇ ಮೇಲುಗೈ
ಆನ್‌ಲೈನ್ ರೈಲ್ವೇ ಟಿಕೆಟ್ ಬುಕ್ಕಿಂಗ್ ನಲ್ಲಿ ಬೆಂಗಳೂರಿಗರೇ ಹೆಚ್ಚಾಗಿದ್ದು, ಟಿಕೆಟ್‌ಗಾಗಿ ಸರಾಸರಿ ಶೇ. 20 ರಷ್ಟು ಜನ ಆನ್‌ಲೈನ್ ಬಳಕೆ ಮಾಡುತ್ತಿದ್ದಾರೆ.
ಅತೀ ಹೆಚ್ಚು ಆನ್‌ಲೈನ್ ರೈಲ್ವೇ ಟಿಕೆಟ್ ಖರೀದಿದಾರರಲ್ಲಿ ಬೆಂಗಳೂರಿಗರ ಪಾಲೇ ಹೆಚ್ಚು ಎನ್ನಲಾಗಿದೆ. ಪೇಪರ್ ಟಿಕೆಟ್ ಬಳಕೆ ಕಡಿಮೆ ಮಾಡುವ ಜೊತೆಗೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಟಿಕೆಟ್ ಕೊಳ್ಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕಳೆದ ವರ್ಷ ನೈರುತ್ಯ ರೈಲ್ವೇ ಇಲಾಖೆಯು ಟಿಕೆಟ್ ಬುಕ್ಕಿಂಗ್‌ಗಾಗಿ UTS( unreserved train tickets) ಮೊಬೈಲ್ ಆ್ಯಪ್‌ನ್ನು ಪರಿಚಯಿಸಿತ್ತು. ಈಗ ಈ ಮೊಬೈಲ್ ಆ್ಯಪ್ ಬಳಕೆದಾರರ ಸಂಖ್ಯೆ 2 ಲಕ್ಷ ದಾಟಿದೆ. ಸರಾಸರಿ ಶೇ 20 ರಷ್ಟು ಜನ ಆನ್‌ಲೈನ್ ಬಳಕೆ ಮಾಡುತ್ತಿದ್ದಾರೆ.
ಈ ಮೊಬೈಲ್ ಆ್ಯಪ್‌ನಲ್ಲಿ ಸಾಮಾನ್ಯ ಟಿಕೆಟ್ ಬುಕ್ಕಿಂಗ್, ತುರ್ತು ಟಿಕೆಟ್ ಬುಕ್ಕಿಂಗ್, ಫ್ಲಾಟ್ ಫಾರಂ ಟಿಕೆಟ್ ಸೇರಿದಂತೆ ಇತರ ಸೇವೆ ಪಡೆಯಬಹುದಾಗಿದೆ ಅಂತಾರೆ ರೈಲ್ವೆೇ ಇಲಾಖೆಯ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎನ್.ಎಸ್ ಶ್ರೀಧರ್ ಮೂರ್ತಿ. ಪ್ರಯಾಣಿಕ ಸ್ನೇಹಿ ಆಗಿರುವ ರೈಲ್ವೇ ಇಲಾಖೆಯು ಆನ್‌ಲೈನ್ ಮೂಲಕ ಪ್ರಯಾಣಿಕರ ಪ್ರಯಾಣವನ್ನು ಮತ್ತಷ್ಟು ಸುಲಭವಾಗಿಸಿದೆ.