ಕರ್ನಾಟಕ

karnataka

ETV Bharat / state

ಡ್ರಗ್ಸ್ ಪೆಡ್ಲರ್​​ಗಳ ಮೇಲೆ ನಗರ ಪೊಲೀಸರ ದಾಳಿ: ಇಬ್ಬರ ಬಂಧನ - bangalore crime news

ಬೆಂಗಳೂರಿನ ಹನುಮಂತನಗರ ಪೊಲೀಸರು ಮಾಹಿತಿ ಮೇರೆಗೆ, ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ‌ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಗಾಂಜಾ
ಗಾಂಜಾ

By

Published : Sep 6, 2020, 9:58 PM IST

Updated : Sep 6, 2020, 10:11 PM IST

ಬೆಂಗಳೂರು:ಮಾದಕ‌ ವಸ್ತು ಮಾರಾಟ ಹಾಗೂ ಖರೀದಿ‌ ಮಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದ ನಗರ‌ ಪೊಲೀಸರು, ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ‌ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಆರೋಪಿ

ನೈಜೀರಿಯಾ ಮೂಲದ‌ ಜಾನ್ ಹಾಗೂ ಸ್ಥಳೀಯ ನಿವಾಸಿ ಸ್ಯಾಮ್ಸನ್ ಬಂಧಿತ ಆರೋಪಿಗಳು. 13 ಲಕ್ಷ ಮೌಲ್ಯದ 2.5 ಕೆ.ಜಿ ಗಾಂಜಾ, 20 ಗ್ರಾಂ ಎಂಡಿಎಂಎ, 10 ಎಕ್ಸ್ಟಸಿ ಪಿಲ್ಸ್, 530 ಗ್ರಾಂ ಹ್ಯಾಶ್ ಆಯಿಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿ

ಯುವಕರನ್ನು ಟಾರ್ಗೆಟ್‌ ಮಾಡಿಕೊಂಡು ಶೈಕ್ಷಣಿಕ ಸಂಸ್ಥೆಗಳ ಮುಂದೆ ಸಣ್ಣ-ಸಣ್ಣ‌‌ ಪೊಟ್ಟಣಗಳಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಮಾರಾಟ ಮಾಡಿ, ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಮಾಹಿತಿ ಮೇರೆಗೆ ಹನುಮಂತನಗರ ಪೊಲೀಸರು ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌‌‌‌ ಒಪ್ಪಿಸಿದ್ದಾರೆ.

ಈ ಆರೋಪಿಗಳು ಆ್ಯಶ್ ಆಯಿಲ್ಅನ್ನು ಕೂಡ ಮಾರಾಟ ಮಾಡುತ್ತಿದ್ದು, ಕಾಳಸಂತೆಯಲ್ಲಿ‌‌ 10 ಗ್ರಾಂ ಆ್ಯಶ್ ಆಯಿಲ್ 5 ಸಾವಿರ ರೂಪಾಯಿಯಂತೆ ಮಾರಾಟವಾಗಲಿದೆ.

Last Updated : Sep 6, 2020, 10:11 PM IST

ABOUT THE AUTHOR

...view details