ಬೆಂಗಳೂರು: ಕೊರೊನಾ ವಾರಿಯರ್ಗಳಾಗಿ ಕರ್ತವ್ಯ ನಿರ್ವಹಿಸುವ ವೇಳೆ ಸೋಂಕಿಗೆ ಸಿಲುಕಿ ಸದ್ಯ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಸಿಬ್ಬಂದಿಯ ಯೋಗಕ್ಷೇಮವನ್ನು ನಗರ ಉತ್ತರ ವಿಭಾಗ ಡಿಸಿಪಿ, ವೀಡಿಯೋ ಕರೆ ಮೂಲಕ ವಿಚಾರಿಸಿ ಸಾಂತ್ವನ ಹೇಳಿದರು.
ಬೆಂಗಳೂರು: ಕೊರೊನಾ ಸೋಂಕಿತ ಪೊಲೀಸರ ಯೋಗಕ್ಷೇಮ ವಿಚಾರಿಸಿದ ಡಿಸಿಪಿ - Bangalore North Division DCP Shashikumar
ಕೊರೊನಾ ವಾರಿಯರ್ಗಳಾಗಿ ಕರ್ತವ್ಯ ನಿರ್ವಹಿಸುವ ವೇಳೆ ಸೋಂಕಿಗೆ ಸಿಲುಕಿ ಸದ್ಯ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಸಿಬ್ಬಂದಿಯ ಯೋಗಕ್ಷೇಮವನ್ನು ನಗರ ಉತ್ತರ ವಿಭಾಗ ಡಿಸಿಪಿ, ವೀಡಿಯೋ ಕರೆ ಮೂಲಕ ವಿಚಾರಿಸಿ ಸಾಂತ್ವನ ಹೇಳಿದರು.
ಸೋಂಕಿಗೀಡಾಗಿ ಚಿಕಿತ್ಸೆಗೆ ಒಳಗಾದವರು ಮಾನಸಿಕ ಖಿನ್ನತೆಗೀಡಾಗಬಾರದು, ಕುಗ್ಗಬಾರದು ಅನ್ನೋ ದೃಷ್ಟಿಯಿಂದ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಅವರು ವೀಡಿಯೋ ಕರೆ ಮಾಡಿ ಸಿಬ್ಬಂದಿಗಳ ಆರೋಗ್ಯವನ್ನ ವಿಚಾರಣೆ ಮಾಡಿದ್ದಾರೆ.
ಈ ವೇಳೆ ಕೊರೊನಾ ಸೋಂಕಿಗೆ ತುತ್ತಾದ ಪೊಲೀಸರು ಡಿಸಿಪಿಯವರೊಂದಿಗೆ ಮಾತನಾಡಿ ನಾವು ಆರೋಗ್ಯವಾಗಿದ್ದೇವೆ. ಇಂದು ನಟ ಶಿವರಾಜ್ ಕುಮಾರ್ ಅವರ ಹುಟ್ಟಿದ ದಿನವಾಗಿದ್ದು ಅವರ ಸಿನಿಮಾ ನೋಡಿ ಕಾಲ ಕಳೆಯುತಿದ್ದೇವೆ ಎಂದು ತಿಳಿಸಿದರು. ಜೊತೆಗೆ, ಹಿರಿಯಾಧಿಕಾರಿ ಶಶಿಕುಮಾರ್, ತಮ್ಮ ಸಿಬ್ಬಂದಿಯನ್ನ ಮಾತಾನಾಡಿಸಿ ಆಸ್ಪತ್ರೆಯಲ್ಲಿ ಯಾವ ರೀತಿ ಚಿಕಿತ್ಸೆ ಕೊಡ್ತಿದ್ದಾರೆ. ಊಟದ ವ್ಯವಸ್ಥೆ ಹೇಗಿದೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿ ಆಸ್ಪತ್ರೆಯ ವಾತಾವರಣ ಹೇಗಿದೆ ಎನ್ನುವುದರ ಚಿತ್ರಣವನ್ನು ವೀಡಿಯೋ ಕರೆಯಲ್ಲಿ ತೋರಿಸಿದ್ದಾರೆ.