ಬೆಂಗಳೂರು: ಸದಾ ವಿಭಿನ್ನ ಹಾಗೂ ವಿನೂತನ ಕಲ್ಪನೆಯಡಿ ಮನಮೋಹಕವಾಗಿ ಚಿತ್ರ ಬಿಡಿಸುವುದಕ್ಕೆ ಹೆಸರಾಗಿರುವ ಬಾದಲ್ ನಂಜುಂಡಸ್ವಾಮಿ ಅವರು ಮತ್ತೊಂದು ಸೊಗಸಾದ ಚಿತ್ರ ಬಿಡಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಕೊರೊನಾ ಕುರಿತು ಜಾಗೃತಿ ಮೂಡಿಸಲು ಪೊಲೀಸ್ ಠಾಣೆ ಮುಂದೆ 3ಡಿ ಚಿತ್ರ ಬಿಡಿಸಿದ ಬಾದಲ್
ಕೊರೊನಾ ವಿರುದ್ಧ ಅರಿವು ಮೂಡಿಸಲು ಹಲವು ಕ್ರಮಗಳ ಮೊರೆ ಹೋಗಲಾಗಿದೆ. ಇನ್ನು ವಿಭಿನ್ನ ಚಿತ್ರಗಳಿಂದಲೇ ಹೆಸರಾಗಿರುವ ಬಾದಲ್ ನಂಜುಂಡಸ್ವಾಮಿ ಅವರು ಮತ್ತೊಂದು ಸೊಗಸಾದ ಚಿತ್ರ ಬಿಡಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಮಾಸ್ಕ್ ಕುರಿತು ಅರಿವು ಮೂಡಿಸಲು ಜೆ.ಸಿ.ನಗರ ಪೊಲೀಸ್ ಠಾಣೆಯ ಮೆಟ್ಟಿಲು ಮುಂದೆ 3ಡಿ ಮಾದರಿಯಲ್ಲಿ ಮಾಸ್ಕ್ ಧರಿಸಿರುವ ವ್ಯಕ್ತಿಯ ಚಿತ್ರ ಬಿಡಿಸಿದ್ದಾರೆ.
ಕೊರೊನಾ ವಿರುದ್ಧ ಜಾಗೃತಿಗೆ ಠಾಣೆ ಮೆಟ್ಟಿಲ ಮೇಲೆ ತ್ರಿಡಿ ಚಿತ್ರ ಬಿಡಿಸಿದ ನಂಜುಂಡ್ವಾಮಿ
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಮಾಸ್ಕ್ ಧರಿಸುವುದು ಅಗತ್ಯ. ಇಲ್ಲದಿದ್ದರೆ ಅಪಾಯ ಗ್ಯಾರಂಟಿ. ಹೀಗಾಗಿ ಸಾರ್ವಜನಿಕರಿಗೆ ಮಾಸ್ಕ್ ಕುರಿತು ಅರಿವು ಮೂಡಿಸಲು ಜೆ.ಸಿ.ನಗರ ಪೊಲೀಸ್ ಠಾಣೆಯ ಮೆಟ್ಟಿಲು ಮುಂದೆ 3ಡಿ ಮಾದರಿಯಲ್ಲಿ ಮಾಸ್ಕ್ ಧರಿಸಿರುವ ವ್ಯಕ್ತಿಯ ಚಿತ್ರ ಬಿಡಿಸಿದ್ದಾರೆ.
ಈ ಮೂಲಕ ಕೊರೊನಾ ವೈರಾಣು ಕುರಿತಂತೆ ತಮ್ಮದೇ ಶೈಲಿಯಲ್ಲಿ ಜಾಗೃತಿ ಮೂಡಿಸಿದ್ದಾರೆ. ಇತ್ತೀಚೆಗೆ ಸಾಹಿತಿ ನಿಸಾರ್ ಅಹಮದ್ ನಿಧನರಾದ ಹಿನ್ನೆಲೆಯಲ್ಲಿ ಗೌರವಪೂರ್ವಕವಾಗಿ ಪುಸ್ತಕದಲ್ಲಿ ನಿಸಾರ್ ಅವರ ಭಾವಚಿತ್ರ ಬಿಡಿಸಿದ್ದರು.