ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಂದು ಬೆಳಗ್ಗೆ ಕಬ್ಬನ್ ಪಾರ್ಕ್ನಲ್ಲಿ ಪಿಒಪಿ ಬದಲು ಪರಿಸರ ಗಣಪತಿ ಬಳಕೆ ಮಾಡುವ ಬಗ್ಗೆ ಜಾಗೃತಿ ಜಾಥಾ ನಡೆಸಲಾಯಿತು.
ಪಿಒಪಿ ಮೂರ್ತಿಗಳನ್ನು ಬಳಸದಂತೆ ಬೀದಿ ನಾಟಕದ ಮೂಲಕ ಜಾಗೃತಿ ಜಾಥಾ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಂದು ಬೆಳಗ್ಗೆ ಕಬ್ಬನ್ ಪಾರ್ಕ್ನಲ್ಲಿ ಪಿಒಪಿ ಬದಲು ಪರಿಸರ ಗಣಪತಿ ಬಳಕೆ ಮಾಡುವ ಬಗ್ಗೆ ಜಾಗೃತಿ ಜಾಥಾ ನಡೆಸಲಾಯಿತು.
ಜಾಗೃತಿ ಜಾಥಾಕ್ಕೆ ಮಹಾಪೌರರಾದ ಗಂಗಾಂಭಿಕೆ ಮಲ್ಲಿಕಾರ್ಜುನ್ ಮತ್ತು ಆಯುಕ್ತ ಅನಿಲ್ ಕುಮಾರ್ ಚಾಲನೆ ನೀಡಿದರು. ಇವರಿಗೆ ಉಪ ಮೇಯರ್ ಭದ್ರೇಗೌಡ ಸಾಥ್ ನೀಡಿದರು. ಇದೇ ವೇಳೆ 501 ಪರಿಸರ ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಯಿತು.
ಜಾಗೃತಿ ರಸ್ತೆ ಓಟ ಮತ್ತು ಬೀದಿ ನಾಟಕದ ಮೂಲಕ ಪರಿಸರಕ್ಕೆ ಹಾನಿಯಾಗುವ ಪಿಒಪಿ ಮೂರ್ತಿಗಳನ್ನು ಬಳಸದಂತೆ ಜಾಗೃತಿ ಮೂಡಿಸಲಾಯಿತು. ಜಲಚರಗಳ ರಕ್ಷಣೆ ಮಾಡುವ ಮೂಲಕ ಜೇಡಿ ಮಣ್ಣಿನ ಗಣೇಶನನ್ನೇ ಬಳಸಿ ಎಂದು ತಿಳಿಸಲಾಯಿತು. ಇನ್ನು ಗಣೇಶೋತ್ಸವದಂದು ರಾತ್ರಿಯವರೆಗೆ ಮ್ಯೂಸಿಕ್ ಹಾಕಿ ಶಬ್ಬ ಮಾಲಿನ್ಯ ಮಾಡದಂತೆ ತಿಳಿಹೇಳಲಾಯಿತು. ಇದರಿಂದ ಎಷ್ಟೋ ಇಳಿ ಜೀವಗಳು, ಮಕ್ಕಳು ಕಷ್ಟ ಎದುರಿಸುವ ಸಂದರ್ಭ ಇರುತ್ತದೆ. ಹೀಗಾಗಿ ಸರಳವಾಗಿ ಹಬ್ಬವನ್ನ ಆಚರಿಸಿ ಎಂದು ಕರೆ ನೀಡಲಾಯಿತು.