ಬೆಂಗಳೂರು:ನಗರದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮತ್ತೆ ಮುಂದುವರೆದಿದೆ. ಕೋರಮಂಗಲದ ರಾಜೇಂದ್ರನಗರದಲ್ಲಿ ನಿನ್ನೆ ಮಧ್ಯರಾತ್ರಿ ಕಿರಾತಕರು ಮನೆಮುಂದೆ ನಿಲ್ಲಿಸಿದ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ.
ಮನೆ-ವಾಹನಗಳ ಮೇಲೆ ಮಿಡ್‌ನೈಟ್ ಕಿರಾತಕರ ದಾಳಿ.. ಪೊಲೀಸರಿಗೆ ಹೆಚ್ಚಾಯ್ತು ತಲೆಬಿಸಿ.. - ದಾಳಿ
ದುಷ್ಕರ್ಮಿಗಳು 4 ಆಟೋ, 3 ಬೈಕ್, 1 ಕಾರು ಹಾಗೂ ಮನೆ ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ್ದಾರೆ. ಬೆಳಗ್ಗೆ ವಾಹನ ಪುಡಿಪುಡಿ ಆಗಿರೋದನ್ನು ಕಂಡ ಮಾಲೀಕರು ದಂಗಾಗಿ, ಆಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮನೆ-ವಾಹನಗಳ ಮೇಲೆ ದಾಳಿ
ದುಷ್ಕರ್ಮಿಗಳು 4 ಆಟೋ, 3 ಬೈಕ್, 1 ಕಾರು ಹಾಗೂ ಮನೆ ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ್ದಾರೆ. ಬೆಳಗ್ಗೆ ವಾಹನ ಪುಡಿಪುಡಿ ಆಗಿರೋದನ್ನು ಕಂಡ ಮಾಲೀಕರು ದಂಗಾಗಿ, ಆಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ಬೆಂಗಳೂರಿನಲ್ಲಿ ಇಂತಹ ಘಟನೆಗಳು ಪದೇಪದೆ ಮರುಕುಳಿಸುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.