ಕರ್ನಾಟಕ

karnataka

ETV Bharat / state

ಜಗಳ ಬಿಡಿಸಲು ಹೋದ ಟ್ರಾಫಿಕ್ ಕಾನ್ಸ್​​ಟೇಬಲ್​​ ಮೇಲೆ ಹಲ್ಲೆ: ರೌಡಿಶೀಟರ್ ಬಂಧನ

ಬೆಂಗಳೂರಿನ ಚಿಕ್ಕಪೇಟೆ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್​​ಟೇಬಲ್​​​​​ ಮೇಲೆ ಹಲ್ಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಠಾಣೆ ಪೊಲೀಸರು ರೌಡಿಶೀಟರ್​ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

rowdy sheeter arrest
ರೌಡಿಶೀಟರ್ ಅಬ್ದುಲ್ ಸುಲೇಮಾನ್ ಬಂಧಿತ ಆರೋಪಿ

By ETV Bharat Karnataka Team

Published : Nov 14, 2023, 9:01 PM IST

ಬೆಂಗಳೂರು: ಜಗಳ ಬಿಡಿಸಲು ಹೋಗಿದ್ದ ಟ್ರಾಫಿಕ್ ಕಾನ್ಸ್​ಟೇಬಲ್​​​​ ಮೇಲೆ ಹಲ್ಲೆ ಮಾಡಿರುವ ಆರೋಪದಡಿ ರೌಡಿಶೀಟರ್​ನನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ರೌಡಿಶೀಟರ್ ಅಬ್ದುಲ್ ಸುಲೇಮಾನ್ ಬಂಧಿತ ಆರೋಪಿ.

ಚಿಕ್ಕಪೇಟೆ ಸಂಚಾರ ಠಾಣೆಯ ಕಾನ್ಸ್​ಟೇಬಲ್​​​ ಮಂಜು ಎಂಬುವರ ಮೇಲೆ ಹಲ್ಲೆ ಮಾಡಿದ ಆರೋಪದಡಿ ರೌಡಿಶೀಟರ್​ನನ್ನು ಬಂಧಿಸಲಾಗಿದೆ. ಇದೇ ತಿಂಗಳು ನವೆಂಬರ್ 9ರಂದು ಚಿಕ್ಕಪೇಟೆ ಸಂಚಾರ ಠಾಣೆ ವ್ಯಾಪ್ತಿಯ ಬಿ ಬಿ ರಸ್ತೆಯಲ್ಲಿ ಕಾನ್ಸ್​​ಟೇಬಲ್​​​ ಮಂಜು ಕರ್ತವ್ಯದಲ್ಲಿದ್ದರು. ಈ ವೇಳೆ ಆಟೊ ಹಿಂದಿಕ್ಕುವ ವಿಚಾರಕ್ಕೆ ಆಟೊ ಚಾಲಕ ಹಾಗೂ ಬೈಕ್​​ನಲ್ಲಿದ್ದ ಅಬ್ದುಲ್ ನಡುವೆ ಗಲಾಟೆ ನಡೆದಿತ್ತು. ಸ್ಥಳಕ್ಕೆ ಹೋದ ಕಾನ್ಸ್​ಟೇಬಲ್​​​​ ಮಂಜು ಜಗಳ ಬಿಡಿಸಲು ಮುಂದಾಗಿದ್ದಾರೆ. ಆರೋಪಿಯನ್ನು ತಳ್ಳಿ ಗಲಾಟೆ ಮಾಡದಂತೆ ತಾಕೀತು ಮಾಡಿದ್ದರು.

ಆರೋಪಿ ಸಿಟ್ಟಿಗೆದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಬಳಿಕ ಅದೇ ದಿನ ರಾತ್ರಿ ಕಾನ್ಸ್​​ಟೇಬಲ್​​ ಮಂಜು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಬಂದ ಆರೋಪಿ ಮತ್ತೆ ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಪಾಳ ಮೋಕ್ಷ ಮಾಡಿ ಎಸ್ಕೇಪ್ ಆಗಿದ್ದ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ರೌಡಿಶೀಟರ್ ವಿರುದ್ಧ ವಿಜಯನಗರ, ಜೆ ಜೆ ನಗರ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂಜುಕೋರರಿಂದ ಪೊಲೀಸರ ಮೇಲೆ ಹಲ್ಲೆ:ದೀಪಾವಳಿ ನಿಮಿತ್ತ ಜೂಜಾಡುತ್ತಿದ್ದ ಗುಂಪಿನ ಮೇಲೆ ದಾಳಿ ಮಾಡಿದ ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ. ಗಾಯಾಳು ಪೊಲೀಸ್ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲು‌ ಮಾಡಲಾಗಿದೆ‌.

ನರೇಂದ್ರ ಗ್ರಾಮದಲ್ಲಿ ಜೂಜಾಟ ನಡೆಯುವ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ನಾಗರಾಜ್ ಪಾಟೀಲ್​​ ನೇತೃತ್ವದಲ್ಲಿ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ, ಜೂಜುಕೋರರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಬಳಿಕ 10ಕ್ಕೂ ಹೆಚ್ಚು ಜೂಜುಕೋರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಬೆಂಗಳೂರು: ಜೈಲಿನಲ್ಲಿ‌ದ್ದುಕೊಂಡೇ ವೇಶ್ಯಾವಾಟಿಕೆ ದಂಧೆ‌ ನಡೆಸುತ್ತಿದ್ದ ವಿಚಾರಣಾಧೀನ ಕೈದಿ!

ABOUT THE AUTHOR

...view details