ಕರ್ನಾಟಕ

karnataka

By

Published : Sep 21, 2020, 2:39 PM IST

ETV Bharat / state

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿ ಅಗಲಿದ 15 ಮಂದಿ ಗಣ್ಯರಿಗೆ ಸಂತಾಪ

10ಕ್ಕೂ ಹೆಚ್ಚು ಪುಸ್ತಕ ಬರೆದಿದ್ದ ಇವರು ಭಾರತ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು. ಎಂ ವಿ ರಾಜಶೇಖರನ್ ಅವರು ಕನಕಪುರ ತಾಲೂಕಿನ ಮರಳವಾಡಿಯಲ್ಲಿ ಜನಿಸಿ ಕಾನೂನು ಪದವೀಧರರಾಗಿದ್ದರು. 1967 ರಿಂದ 1970ರವರೆಗೆ ಕನಕಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು..

Assembly pay condoles  over 15 leaders death including former President Pranab Mukherjee
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿ ಅಗಲಿದ 15 ಮಂದಿ ಗಣ್ಯರಿಗೆ ಸಂತಾಪ

ಬೆಂಗಳೂರು :ಮೊದಲ ದಿನದ ವಿಧಾನಸಭೆ ಕಲಾಪ ಆರಂಭವಾಗಿದ್ದು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಕೇಂದ್ರ ಸಚಿವ ಎಂ ವಿ ರಾಜಶೇಖರನ್, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಸೇರಿ ರಾಜಕೀಯ, ಸಂಗೀತ, ಸಾಹಿತ್ಯ, ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಅಗಲಿದ 15 ಮಂದಿ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ಸದನ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ಸೂಚಕ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು. ಪ್ರಣಬ್ ಮುಖರ್ಜಿ ಅವರು ನಡೆದಾಡುವ ವಿಶ್ವಕೋಶ ಎಂದೇ ಹೆಸರು ಗಳಿಸಿದ್ದರು. ಪಶ್ಚಿಮ ಬಂಗಾಳದ ಮೀರತ್‍ನಲ್ಲಿ ಜನಿಸಿ ಕೋಲ್ಕತ್ತಾ ವಿವಿಯಿಂದ ಇತಿಹಾಸ, ಕಾನೂನು ಪದವಿ ಪಡೆದು ಉಪನ್ಯಾಸಕ, ಪತ್ರಕರ್ತರಾಗಿ ಕೆಲಸ ಮಾಡಿದ್ದರು.

1969ರಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದರು. 1970,1981, 1993, 1999ರಲ್ಲಿ ಪುನರಾಯ್ಕೆಗೊಂಡಿದ್ದರು. 2004-2009ರಲ್ಲಿ ಲೋಕಸಭೆಗೆ ಚುನಾಯಿತರಾಗಿದ್ದರು. 1973ರಿಂದ 2012ರವರೆಗೂ ಹಣಕಾಸು, ವಿದೇಶಾಂಗ ಸೇರಿ ಕೇಂದ್ರದಲ್ಲಿ ನಾನಾ ಖಾತೆಗಳನ್ನು ನಿಭಾಯಿಸಿದ್ದರು.1980-85ರವರೆಗೆ ರಾಜ್ಯಸಭಾ ನಾಯಕರಾಗಿ, 2004ರಿಂದ 2017ರವರೆಗೆ ಲೋಕಸಭಾ ನಾಯಕರಾಗಿ, 2012-2013ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

10ಕ್ಕೂ ಹೆಚ್ಚು ಪುಸ್ತಕ ಬರೆದಿದ್ದ ಇವರು ಭಾರತ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು. ಎಂ ವಿ ರಾಜಶೇಖರನ್ ಅವರು ಕನಕಪುರ ತಾಲೂಕಿನ ಮರಳವಾಡಿಯಲ್ಲಿ ಜನಿಸಿ ಕಾನೂನು ಪದವೀಧರರಾಗಿದ್ದರು. 1967 ರಿಂದ 1970ರವರೆಗೆ ಕನಕಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಕೇಂದ್ರ ಸಂಪುಟ ಸಚಿವರಾಗಿ ಗ್ರಾಮೀಣಾಭಿವೃದ್ಧಿ ಕುರಿತಂತೆ 100ಕ್ಕೂ ಹೆಚ್ಚಿನ ಪ್ರಬಂಧಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಂಡಿಸಿದ್ದರು. ಸುರಪುರ ಕ್ಷೇತ್ರದ ಶಾಸಕರಾಗಿದ್ದ ರಾಜ ಮದನಗೋಪಾಲ ನಾಯಕ ಬಿಎ ಪದವೀಧರರಾದ ಅವರು 1983ರಲ್ಲಿ 1985, 1989ರಲ್ಲಿ ವಿಧಾನಸಭೆಗೆ ಸತತ ಆಯ್ಕೆಯಾಗಿದ್ದರು.

ಇವರ ಜೊತೆ ತುಮಕೂರು ಶಿರಾ ಕ್ಷೇತ್ರದ ಶಾಸಕ ಸತ್ಯನಾರಾಯಣ, ರಾಜ್ಯಸಭಾ ಸದಸ್ಯರಾಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದ ಅಶೋಕ್ ಗಸ್ತಿ, ಮಾಜಿ ಸಚಿವ ರಾಮಕೃಷ್ಣ, ಮಾಜಿ ಶಾಸಕ ರಾಜ ರಂಗಪ್ಪನಾಯಕ, ಮಾಜಿ ಶಾಸಕ ರತನ್‍ಸಿಂಗ್, ವಿಧಾನ ಪರಿಷತ್ ಮಾಜಿ ಸದಸ್ಯ ವಿನ್ನಿಫ್ರೆಡ್ ಫರ್ನಾಂಡಿಸ್, ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಂ ಜಿ ಅಪ್ಪಾಜಿಗೌಡ, ಎಡನೀರು ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶರಾದ ಕೇಶವಾನಂದ ಭಾರತಿ ಸ್ವಾಮೀಜಿ, ನಿತ್ಯೋತ್ಸವ ಕವಿ ಕೆ ಎಸ್ ನಿಸಾರ್ ಅಹ್ಮದ್, ಉಭಯ ಗಾನ ವಿದುಷಿ ಶಾಮಲಾ ಜಿ ಸೇರಿ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸದನದಲ್ಲಿ ಸಂತಾಪ ಸೂಚಿಸಲಾಯಿತು.

ಅದೇ ರೀತಿ ಪೂರ್ವ ಲಡಾಖ್ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸಂಘರ್ಷದಲ್ಲಿ ಹುತಾತ್ಮರಾದ 20 ಭಾರತೀಯ ಸೈನಿಕರು, ಕೊರೊನಾದಿಂದ ಮೃತರಾದ ಸಾವಿರಾರು ಮಂದಿ, ಮಳೆಯಿಂದ ಪ್ರಾಣ ಕಳೆದುಕೊಂಡ ಹಲವಾರು ಮಂದಿಗೆ ಸದನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ABOUT THE AUTHOR

...view details