ಕರ್ನಾಟಕ

karnataka

By

Published : Jan 9, 2023, 12:00 PM IST

ETV Bharat / state

ಪಾರ್ಕಿಂಗ್ ಪ್ರಶ್ನಿಸಿದ್ದಕ್ಕೆ ಕೇಕ್ ಶಾಪ್ ಮ್ಯಾನೇಜರ್ ಮೇಲೆ ಹಲ್ಲೆ

ಕೇಕ್ ಶಾಪ್ ಮುಂದೆ ವಾಹನ ಪಾರ್ಕಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿರುವ ಘಟನೆ ತಡರಾತ್ರಿ ಇಂದಿರಾ ನಗರದ ಕೇಕ್ ಅಂಗಡಿಯೊಂದರ ಮುಂದೆ ನಡೆದಿದೆ.

assault on cake shop manager
ಹಲ್ಲೆಯ ದೃಶ್ಯ

ಸಿಸಿಟಿವಿ ದೃಶ್ಯ

ಬೆಂಗಳೂರು:ವಾಹನಪಾರ್ಕಿಂಗ್ ವಿಚಾರವಾಗಿ ಕೇಕ್ ಶಾಪ್ ಮ್ಯಾನೇಜರ್ ಜೊತೆ ಗಲಾಟೆ ಮಾಡಿಕೊಂಡು ಮೂವರು, ಆತನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿರುವ ಘಟನೆ ತಡರಾತ್ರಿ ಇಂದಿರಾ ನಗರ ಠಾಣಾ ವ್ಯಾಪ್ತಿಯ ಸ್ಮೂರ್ ಕೇಕ್ ಶಾಪ್ ಮುಂಭಾಗದಲ್ಲಿ ನಡೆದಿದೆ. ಶೈಲೇಶ್ ಹಲ್ಲೆಗೊಳಗಾದ ಮ್ಯಾನೇಜರ್. ಈ ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.

ಇಂದಿರಾ ನಗರದ 100 ಅಡಿ ರಸ್ತೆಯಲ್ಲಿರುವ ಸ್ಮೂರ್ ಕೇಕ್ ಶಾಪ್‍ನ ಮೇಲೆ ಬಾರ್ ಇದೆ. ರಾತ್ರಿ 8:30ರ ಸುಮಾರಿಗೆ ಬಾರ್​​ಗೆ ಬಂದಿದ್ದ ಮೂವರು ಕೇಕ್ ಶಾಪ್​ ಮುಂದೆ ಕಾರು ನಿಲ್ಲಿಸಿದ್ದಾರೆ. ಇದನ್ನು ನೋಡಿದ ಶಾಪ್ ಮ್ಯಾನೇಜರ್ ಶೈಲೇಶ್ ಇಲ್ಲಿ ಕಾರು ಪಾರ್ಕ್ ಮಾಡಬೇಡಿ ಎಂದು ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಯುವಕರ ತಂಡ ಶೈಲೇಶ್ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದೆ. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಶೈಲೇಶ್ ತುಟಿ ಹಾಗೂ ಹಲ್ಲಿಗೆ ಗಾಯವಾಗಿದೆ. ಘಟನೆ ಸಂಬಂಧ ಜೀವನ್ ಭೀಮಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಜ್ಜಿ ಅಂಗಡಿಯವನಿಗೆ ಧಮ್ಕಿ-ಪ್ರಕರಣ ದಾಖಲು:ಪೊಲೀಸ್ ಹೆಸರಿನಲ್ಲಿ ಬಜ್ಜಿ ಅಂಗಡಿಯವನನ್ನು ಬೆದರಿಸುತ್ತಿದ್ದ ಅಪರಿಚಿತ ಮಹಿಳೆಯ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 'ತಾನೊಬ್ಬಳು ಪೊಲೀಸ್, ಬಂದಾಗೆಲ್ಲ ಬಜ್ಜಿ, ಬೋಂಡಾ ಉಚಿತವಾಗಿ ನೀಡದಿದ್ದರೆ ಅಂಗಡಿ ಎತ್ತಂಗಡಿ ಮಾಡಿಸ್ತೀನಿ' ಅಂತಾ ಧಮ್ಕಿ ಹಾಕಿದ್ದಾರೆ ಎಂದು ಅಂಗಡಿ ಮಾಲೀಕ ಶೇಖ್ ಸಲ್ಮಾನ್‌ ಎಂಬುವವರು ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರುದಾರ ಶೇಖ್ ಸಲ್ಮಾನ್ ಬ್ಯಾಟರಾಯನಪುರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಬಜ್ಜಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದೊಂದು ತಿಂಗಳಿನಿಂದ ಅಂಗಡಿ ಬಳಿ ಬರುತ್ತಿದ್ದ ಮಧ್ಯ ವಯಸ್ಕ ಮಹಿಳೆಯೊಬ್ಬಳು ತಾನು ಕೊಡಿಗೆಹಳ್ಳಿ ಠಾಣೆಯ ಮಹಿಳಾ ಪೊಲೀಸ್ ಎಂದು ಹೇಳಿ ಬಜ್ಜಿ ತಿಂದು ಪಾರ್ಸಲ್ ತೆಗೆದುಕೊಂಡು ಹೋಗುತ್ತಿದ್ದಳು. ಪೊಲೀಸ್ ಎಂಬ ಭಯಕ್ಕೆ ಶೇಖ್ ಸಲ್ಮಾನ್ ಸಹ ಪ್ರತಿ ನಿತ್ಯ ಬಜ್ಜಿ ನೀಡುತ್ತಿದ್ದರು. ಜನವರಿ 5ರಂದು ಸಂಜೆ ಬಂದಿದ್ದ ಅದೇ ಮಹಿಳೆ ಬಜ್ಜಿ ತಿಂದು ಪಾರ್ಸಲ್ ಪಡೆದುಕೊಂಡಿದ್ದಾಳೆ. 100 ರೂ. ಬಿಲ್ ಆಗುತ್ತದೆ ಎಂದಿದ್ದಕ್ಕೆ ಸಿಟ್ಟಿಗೆದ್ದ ಮಹಿಳೆ 'ನಾಳೆಯೇ ನಿನ್ನ ಅಂಗಡಿ ಮುಚ್ಚಿಸುತ್ತೇನೆ' ಎಂದು ಧಮ್ಕಿ ಹಾಕಿದ್ದಾಳೆ .

ಈ ವೇಳೆ ಅಂಗಡಿ ಮಾಲೀಕ ಶೇಖ್ ಸಲ್ಮಾನ್ 112ಕ್ಕೆ ಕರೆ ಮಾಡಿದ್ದಾರೆ. ತಕ್ಷಣ ಮಹಿಳೆ ತನ್ನ ದ್ವಿಚಕ್ರ ವಾಹನದಲ್ಲಿ ಪರಾರಿಯಾದ್ದಾಳೆ. ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸ್ ಸಿಬ್ಬಂದಿಯ ಸೂಚನೆಯನ್ವಯ ಅಂಗಡಿ ಮಾಲೀಕ ಶೇಖ್ ಸಲ್ಮಾನ್ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಪತಿಯ ಜತೆ ಸೇರಿ‌ ಪ್ರಿಯಕರನ ಹತ್ಯೆ: ಮೂವರು ಆರೋಪಿಗಳ ಬಂಧನ

ABOUT THE AUTHOR

...view details