ಏಷ್ಯನ್ ಮತ್ತು ನ್ಯಾಷನಲ್ ಏರ್ಗನ್ ಚಾಂಪಿಯನ್ನಲ್ಲಿ ಚಿನ್ನದ ಪದಕ ಗೆದ್ದ ಯುಕ್ತಿ ರಾಜೇಂದ್ರ ಯಲಹಂಕ(ಬೆಂಗಳೂರು): ಏಷ್ಯನ್ ಮತ್ತು ನ್ಯಾಷನಲ್ ಏರ್ಗನ್ ಚಾಂಪಿಯನ್ ಬೆಂಗಳೂರಿನ ಯಲಹಂಕದ ಯುಕ್ತಿ ರಾಜೇಂದ್ರಳಿಗೆ ಅಭಿನಂಧನೆ ಮತ್ತು ಗೌರವ ಸನ್ಮಾನಗಳು ಹರಿದು ಬರುತ್ತಿವೆ. ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್ 10ಮೀಟರ್ ಏರ್ಗನ್ ಚಾಂಪಿಯನ್ ಶಿಪ್ನಲ್ಲಿ ವೈಯಕ್ತಿಕ ಮತ್ತು ಗ್ರೂಪ್ ವಿಭಾಗದಲ್ಲಿ 2ಚಿನ್ನದ ಪದಕ ಗೆದ್ದಿದ್ದಾರೆ.
ಕೇರಳದಲ್ಲಿ ನಡೆದ ರಾಷ್ಟ್ರಮಟ್ಟದ ಚಾಂಪಿಯನ್ ಶಿಪ್ನಲ್ಲಿ ಚಿನ್ನ ಮತ್ತು ಕರ್ನಾಟಕ ಗ್ರೂಪ್ ವಿಭಾಗದಲ್ಲಿ ಬೆಳ್ಳಿ ಗೆದ್ದು, ದೇಶಕ್ಕೆ ಮತ್ತು ರಾಜ್ಯಕ್ಕೆ ಸ್ಪೂರ್ತಿ ಆಗಿದ್ದಾರೆ. ಸಾಧಕಿಯ ಪೋಷಕರನ್ನು ಬಿಡಿಎ ಅಧ್ಯಕ್ಷ ಮತ್ತು ಯಲಹಂಕ ಶಾಸಕರಾದ ವಿಶ್ವನಾಥ್ ಮತ್ತವರ ಬಳಗ ಸನ್ಮಾನಿಸಿ ಗೌರವಿಸಿದೆ. ಇದಕ್ಕೆ ಸಾಧಕಿ ಖುಷಿಯಾಗಿದ್ದಾರೆ.
ಯಲಹಂಕ ಅನೇಕ ಸಾಧಕರಿಗೆ ಆಶ್ರಯ ನೀಡಿದೆ. ಯುಕ್ತಿರಾಜೇಂದ್ರ ಸಹಕಾರ ನಗರದ ಖಾಸಗಿ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಸಾಧನೆ ಶಿಖರವೇರಿದ್ದಾರೆ. ಹೆಬ್ಬಾಳದ ಸಿಂದಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದು, ಕಾಲೇಜಿನವರು ಏಷ್ಯನ್ ಚಾಂಪಿಯನ್ಗೆ ಸನ್ಮಾನ ಮಾಡಿದ್ದಾರೆ. ಯಲಹಂಕದ ವಿಶ್ವಭಾರತಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವೂ ಯುಕ್ತಿ ಸಾಧನೆಗೆ ಗೌರವ ಸಮರ್ಪಿಸಿದೆ.
ಯುಕ್ತಿರಾಜೇಂದ್ರ ಈಗಿನ ಯುವಕ ಯುವತಿಯರಿಗೆ ಸ್ಪೂರ್ತಿಯ ಚಿಲುಮೆ ಆಗಲಿ. ತಂದೆ ತಾಯಿ ಪ್ರೋತ್ಸಾಹ ಮತ್ತು ಕಠಿಣ ಪರಿಶ್ರಮದಿಂದ ಒಲಂಪಿಕ್ಸ್ ನಲ್ಲು ಏರ್ಗನ್ ವಿಭಾಗದಲ್ಲಿ ಭಾರತಕ್ಕೆ ಯುಕ್ತಿ ಮೂಲಕ ಚಿನ್ನದ ಪದಕ ಲಭಿಸಲಿ ಎಂದು ಆಶಿಸೋಣ.
ಇದನ್ನೂ ಓದಿ:ನ್ಯಾಷನಲ್ ಶೂಟಿಂಗ್ ಚಾಂಪಿಯನ್‌ಶಿಪ್: ಬೆಂಗಳೂರಿನ ಯುವತಿಗೆ 2 ಚಿನ್ನದ ಪದಕ