ಬೆಂಗಳೂರು: ಬೆಳ್ಳಿ ಖರೀದಿಸಿ ಹಣ ಕೊಡದೆ ವಂಚಿಸುತ್ತಿದ್ದ ಆರೋಪಿ ಪ್ರಶಾಂತ್ ಎಂಬಾತನನ್ನು ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಆಭರಣ ಅಂಗಡಿಗಳಿಗೆ ಹೋಗಿ ಬೆಳ್ಳಿ ಖರೀದಿ ಮಾಡುತ್ತಿದ್ದ ಆರೋಪಿ ಪೋನ್ ಪೇ ಮೂಲಕ ಹಣ ಪವತಿಸುರುವುದಾಗಿ ನಕಲಿ ಸಂದೇಶದ ಸ್ಕ್ರೀನ್ ಶಾಟ್ ತೋರಿಸುತ್ತಿದ್ದ. ಇದೀಗ ಅಂಗಡಿ ಮಾಲೀಕರು ನೀಡಿದ ದೂರು ಆಧರಿಸಿ ಆರೋಪಿಯನ್ನ ಬಂಧಿಸಲಾಗಿದೆ.
ವಿಚಾರಣೆ ವೇಳೆ ಆರೋಪಿಯು ಈ ರೀತಿ ಮೂರು ಬಾರಿ ಮೋಸ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ. ಸದ್ಯ ಬಂಧಿತ ಆರೋಪಿಯಿಂದ 1.98 ಲಕ್ಷ ಮೌಲ್ಯದ 10 ಗ್ರಾಂ ಚಿನ್ನ, 1.5 ಕೆಜಿ ಬೆಳ್ಳಿ ಮತ್ತು ಒಂದು ನಿಕಾನ್ ಡಿಜಿಟಲ್ ಕ್ಯಾಮೆರಾ ವಶಕ್ಕೆ ಪಡೆಯಲಾಗಿದೆ.
ನಕಲಿ ಸ್ಕ್ರೀನ್ ಶಾಟ್:
ಈ ಪ್ರಕರಣದ ಕುರಿತು ಡಿ.ಸಿ.ಪಿ ಸಂಜೀವ್ ಪಾಟೀಲ್ ಮಾತನಾಡಿ, ಫೋನ್ ಪೇ ಮೂಲಕ ಹಣ ಪಾವತಿಸಿದ ರೀತಿಯಲ್ಲಿ ಸ್ಕ್ರೀನ್ ಶಾಟ್, ನಕಲಿ ಸಂದೇಶ ತೋರಿಸಿ ವ್ಯಾಪಾರ ಮಾಡುವವರನ್ನು ಈತ ವಂಚಿಸುತ್ತಿದ್ದ. ಈ ಹಿನ್ನೆಲೆ ಎಂಜಿನಿಯರಿಂಗ್ ಓದುತ್ತಿರುವ ಆರೋಪಿಯನ್ನು ನಗರದ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.