ಕರ್ನಾಟಕ

karnataka

ETV Bharat / state

ಕಾರ್ಮಿಕರಿಗೆ ಕೆಲಸಕ್ಕೆ ಹಾಜರಾಗಲು ಖಾಸಗಿ ಬಸ್ ವ್ಯವಸ್ಥೆ ಮಾಡಿಕೊಡಿ : ಎಫ್‌ಕೆಸಿಸಿಐ ಅಧ್ಯಕ್ಷ - ಕರ್ನಾಟಕ ಕೊರೊನಾ

ಕಾರ್ಮಿಕರಿಗಾಗಿ ಖಾಸಗಿ ಬಸ್ ವ್ಯವಸ್ಥೆಗೆ ಅವಕಾಶ ನೀಡಬೇಕು, ಇಲ್ಲವೆ ಅವರಿಗೆ ಕಾರ್ಖಾನೆಯಲ್ಲಿಯೇ ಉಳಿಯಲು ಸಾವಿರ ಬೆಡ್‌ಗಳ ವ್ಯವಸ್ಥೆ ಮಾಡಿಕೊಡಿ‌ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ..

ಎಫ್‌ಕೆಸಿಸಿಐ ಅಧ್ಯಕ್ಷ
ಎಫ್‌ಕೆಸಿಸಿಐ ಅಧ್ಯಕ್ಷ

By

Published : May 8, 2021, 9:16 PM IST

ಬೆಂಗಳೂರು‌ :ಕೊರೊನಾ2ನೇ ಅಲೆ ಆರ್ಭಟ ತಡೆಗಟ್ಟಲು ರಾಜ್ಯ ಸರ್ಕಾರ ಇದೀಗ ಮತ್ತೆ 14‌ ದಿನಗಳ ಲಾಕ್​ಡೌನ್ ಜಾರಿ ಮಾಡಿದೆ. ಈ ಲಾಕ್‌ಡೌನ್‌ನಲ್ಲಿ‌ ಸಣ್ಣ ಕೈಗಾರಿಕೆಗಳ ಕೆಲಸಕ್ಕೆ ಅನುಮತಿ‌ಸಲಾಗಿದೆ.

ಕಾರ್ಮಿಕರು ಕೆಲಸಕ್ಕೆ ಹಾಜರಾಗಲು ಖಾಸಗಿ ಬಸ್ ವ್ಯವಸ್ಥೆಗೆ ಮನವಿ..

ಆದರೆ, ಕಾರ್ಮಿಕರು ಕೆಲಸಕ್ಕೆ ಹಾಜರಾಗಲು‌ ಯಾವುದೇ ರೀತಿಯ ಸಾರಿಗೆ ಸೌಲಭ್ಯಗಳು ಇಲ್ಲದಿರುವ ಕಾರಣ‌ ಕೆಲಸಗಾರರು ಕೆಲಸಕ್ಕೆ ಬರಲು ಸಮಸ್ಯೆ ಎದುರಿಸಲಿದ್ದಾರೆ.

ಹೀಗಾಗಿ, ಅವರಿಗಾಗಿ ಖಾಸಗಿ ಬಸ್ ವ್ಯವಸ್ಥೆಗೆ ಅವಕಾಶ ನೀಡಬೇಕು, ಇಲ್ಲವೆ ಅವರಿಗೆ ಕಾರ್ಖಾನೆಯಲ್ಲಿಯೇ ಉಳಿಯಲು ಸಾವಿರ ಬೆಡ್‌ಗಳ ವ್ಯವಸ್ಥೆ ಮಾಡಿಕೊಡಿ‌ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ABOUT THE AUTHOR

...view details