ಬೆಂಗಳೂರು: ಕೋವಿಡ್ -19 ಸೋಂಕು ಹಿನ್ನೆಲೆಯಲ್ಲಿ ಸಹಕಾರ ಸಂಘ, ಬ್ಯಾಂಕ್‌ಗಳ ಚುನಾವಣೆಯನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸಹಕಾರ ಮಹಾ ಮಂಡಲಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸಹಕಾರ ಮಹಾಮಂಡಲಕ್ಕೆ ಆಡಳಿತಾಧಿಕಾರಿಯಾಗಿ ಕೆ.ಎಂ.ಆಶಾ ನೇಮಕ
ರಾಜ್ಯ ಸಹಕಾರ ಮಹಾ ಮಂಡಲಕ್ಕೆ ಸಹಕಾರ ಇಲಾಖೆಯ ಹೆಚ್ಚುವರಿ ನಿಬಂಧಕರಾಗಿರುವ ಕೆ.ಎಂ.ಆಶಾ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಸಹಕಾರ ಇಲಾಖೆಯ ಹೆಚ್ಚುವರಿ ನಿಬಂಧಕರಾಗಿರುವ ಕೆ.ಎಂ.ಆಶಾ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಡಿಸೆಂಬರ್ ವರೆಗೆ ಅಥವಾ ಮುಂದಿನ ಆದೇಶದವರೆಗೆ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಚುನಾವಣೆ ಸಲುವಾಗಿ ಸರ್ಕಾರ ಮತ್ತು ಚುನಾವಣಾ ಆಯೋಗ ನೀಡುವ ಸೂಚನೆಗಳನ್ನು ಆಡಳಿತಾಧಿಕಾರಿ ತಪ್ಪದೇ ಪಾಲಿಸಲಿದ್ದಾರೆ. ಅಲ್ಲದೇ, ಸಹಕಾರ ಸಂಘಗಳ ಕಾಯ್ದೆಯ ನಿಯಮಗಳನ್ನು ಪಾಲನೆ ಮಾಡಲಿದ್ದಾರೆ ಎಂದು ಸಹಕಾರ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ನಿಗದಿಯಾಗಿರುವ ಸಹಕಾರ ಸಂಘ, ಬ್ಯಾಂಕ್‌ಗಳ ಚುನಾವಣೆಯನ್ನು ಡಿಸೆಂಬರ್ವರೆಗೆ ಮುಂದೂಡಲಾಗಿದೆ. ಈಗಾಗಲೇ ಚುನಾವಣಾ ವೇಳಾಪಟ್ಟಿ ಹೊರಡಿಸಿ, ಚುನಾವಣೆ ಪ್ರಕ್ರಿಯೆ ಬಾಕಿ ಇದ್ದದ್ದನ್ನು ರದ್ದುಪಡಿಸಲಾಗಿದೆ.