ಕರ್ನಾಟಕ

karnataka

By

Published : May 16, 2019, 4:26 PM IST

Updated : May 16, 2019, 4:45 PM IST

ETV Bharat / state

ಬೆಸ್ಕಾಂ, ಪಾಲಿಕೆ ನಿರ್ಲಕ್ಷ್ಯಕ್ಕೆ ಮತ್ತೊಂದು ಅವಘಡ: ಸಾವು ಬದುಕಿನ ನಡುವೆ ಬಾಲಕನ ಹೋರಾಟ

ನೆಲಕ್ಕೆ ಬಿದ್ದಿದ್ದ ಹೈ ಟೆನ್ಷನ್​​​ ವೈರ್​ ತುಳಿದ ಪರಿಣಾಮ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ವಿದ್ಯುತ್​ ತಂತಿ ಸ್ಪರ್ಶಿಸಿ ಸಾವು ಬದುಕಿನ ನಡುವೆ ಬಾಲಕನ ಹೋರಾಟ

ಬೆಂಗಳೂರು: ಬೆಸ್ಕಾಂ ಮತ್ತು ಪಾಲಿಕೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಅವಘಡ ಸಂಭವಿಸಿದ್ದು, ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಬಾಲಕ ಆಸ್ಪತ್ರೆಗೆ ದಾಖಲಾಗಿದ್ದಾನೆ.

14 ವರ್ಷದ ಲಿಖಿತ್ ಎಂಬ ಬಾಲಕ ವಿದ್ಯತ್​ ತಂತಿ ಸ್ಪರ್ಶದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಮತ್ತಿಕೆರೆಯ ನೇತಾಜಿ ಸರ್ಕಲ್ ಬಳಿ ಕೇಬಲ್​ ವೈರ್​ ನೊಂದಿಗೆ ಹೈ ಟೆನ್ಷನ್​​ ವೈರ್​ ಕೂಡ ನೆಲಕ್ಕೆ ಬಿದ್ದಿದೆ. ಅಲ್ಲೆ ಕ್ರಿಕೆಟ್​ ಆಡುತ್ತಿದ್ದ ಲಿಖಿತ್​ ವೈರ್​ ತುಳಿದಿದ್ದರಿಂದ ಕರೆಂಟ್​ ಶಾಕ್​ ಹೊಡೆದಿದೆ.

ಘಟನೆಯಿಂದ ಶೇ. 40ರಷ್ಟು ದೇಹ ಸುಟ್ಟು ಹೋಗಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೆ ವಿದ್ಯುತ್​​ ತಂತಿ ಸ್ಪರ್ಶಿಸಿ ಓರ್ವ ಬಾಲಕ ಸಾವಿಗೀಡಾಗಿದ್ದ.

Last Updated : May 16, 2019, 4:45 PM IST

For All Latest Updates

TAGGED:

ABOUT THE AUTHOR

...view details